See also 2tabernacle
1tabernacle ಟ್ಯಾಬರ್ನ್ಯಾಕ(ಕ್‍)ಲ್‍
ನಾಮವಾಚಕ
  1. (ಬೈಬ್‍ಲ್‍) (ಹಗುರ) ವಸತಿ; ಡೇರೆ; ಗುಡಾರ; ಚಪ್ಪರ; ಗುಡಿಸಲು; ಪರ್ಣಶಾಲೆ; ಹಗುರವಾದ ರಚನೆಯ ಸ್ಥಿರ ಯಾ ಚರ ನಿವಾಸ.
  2. (ಯೆಹೂದ್ಯ ಚರಿತ್ರೆ) ಆರಾಧನಾ ಗುಡಾರ; ಕಟ್ಟಕಡೆಯಲ್ಲಿ, ಯೆಹೂದ್ಯರು ಪ್ಯಾಲೆಸ್ಟೈನಿನಲ್ಲಿ ನೆಲಸುವ ಮುನ್ನ, ಆರಾಧನಾ ಮಂದಿರವಾಗಿದ್ದ ಗುಡಾರ.
  3. (ಸಂಪ್ರದಾಯೇತರ ಕ್ರೈಸ್ತಪಂಥಗಳ) ಸಾರ್ವಜನಿಕ ಪೂಜಾಮಂದಿರ.
  4. (ಕ್ರೈಸ್ತಧರ್ಮ) ಪವಿತ್ರ ಸಂಪುಟ; ಪವಿತ್ರಗೊಳಿಸಿದ ರೊಟ್ಟಿಯ ಯಾ ಬ್ರೆಡ್ಡಿನ ಪಾತ್ರೆ ಯಾ ಪವಿತ್ರಗೊಳಿಸಿದ ವಸ್ತುಗಳನ್ನಿಡುವ ಅಲಂಕಾರದ ಸಂಪುಟ.
  5. (ವಾಸ್ತುಶಿಲ್ಪ) (ಅಲಂಕಾರದ, ಚಿತ್ರಕೆಲಸದ ವಿತಾನವುಳ್ಳ, ಚಾಚುಚಾವಣಿ ಇರುವ) ಗೂಡು; ಕೋಷ್ಠ.
  6. (ನೌಕಾಯಾನ) ಕೂವೆಯ ಕೀಲುಪೀಠ; ದೋಣಿಯು ಸೇತುವೆಯ ಕೆಳಗೆ ಹೋಗುವಾಗ ದೋಣಿಯ ಕೂವೆಯನ್ನು ತಗ್ಗಿಸಲು ಅನುಕೂಲಿಸುವ ಕುಳಿ ಯಾ ಕೀಲು ಹಲಗೆ ಜೋಡಿ.
  7. (ರೂಪಕವಾಗಿ) ಮನುಷ್ಯ ದೇಹ.
ಪದಗುಚ್ಛ

Feast of Tabernacles = Succoth.

See also 1tabernacle
2tabernacle ಟ್ಯಾಬರ್ನ್ಯಾಕ(ಕ್‍)ಲ್‍
ಸಕರ್ಮಕ ಕ್ರಿಯಾಪದ
  1. ಹಗುರ ವಸತಿ ಯಾ ಗುಡಾರದಲ್ಲಿ ವಾಸಿಸು.
  2. ಪವಿತ್ರ ಸಂಪುಟದಲ್ಲಿಡು.
ಅಕರ್ಮಕ ಕ್ರಿಯಾಪದ

ತಾತ್ಕಾಲಿಕವಾಗಿ ವಾಸಮಾಡು, ಬಿಡಾರ ಹೂಡು.