See also 2ruin
1ruin ರೂಇನ್‍
ನಾಮವಾಚಕ
  1. (ಕಟ್ಟಡ ಮೊದಲಾದವುಗಳ) ಬೀಳು; ಹಾಳು; ಅಳಿವು; (ವಿ)ನಾಶ; ಧ್ವಂಸ; ನಾಶಗೊಂಡ ಸ್ಥಿತಿ: crash in ruin ನಾಶವಾಗಿ ಕುಸಿದುಬೀಳು.
  2. (ವ್ಯಕ್ತಿಯ ಯಾ ವಸ್ತುವಿನ) ಅಧಃಪತನ; ವಿನಾಶ; ಅಳಿವು: the ruin of my hopes ನನ್ನ ಆಶೆಗಳ ವಿನಾಶ.
  3. (ಒಬ್ಬನ ಆಸ್ತಿ, ಪದವಿ ಮೊದಲಾದವುಗಳ) ಸರ್ವನಾಶ; ವಿನಾಶ; ಅಳಿವು; ಸಂಪೂರ್ಣ ಹಾಳು: bring to ruin (ಆಸ್ತಿ ಮೊದಲಾದವನ್ನೆಲ್ಲ) ಕಳೆದುಕೊಳ್ಳುವಂತೆ ಮಾಡು; ಸಂಪೂರ್ಣವಾಗಿ ಹಾಳುಮಾಡು; ಸರ್ವನಾಶ ಮಾಡು; ಮುಳುಗಿಸಿಬಿಡು.
  4. (ರೂಪಕವಾಗಿ) (ಕಷ್ಟ, ದುಃಖ ಮೊದಲಾದವುಗಳಿಂದ ನರಳಿದ ವ್ಯಕ್ತಿಯ) ಅಳಿದುಳಿದದ್ದು; ಅವಶೇಷ: is but the ruins of what he was ಅವನು ಹಿಂದೆ ಇದ್ದಿದ್ದರ ಅವಶೇಷಮಾತ್ರವಾಗಿದ್ದಾನೆ.
  5. (ಏಕವಚನದಲ್ಲಿ ಯಾ ಬಹುವಚನದಲ್ಲಿ) (ಕಟ್ಟಡ, ಪಟ್ಟಣ ಮೊದಲಾದವುಗಳ) ಅಳಿದುಳಿದದ್ದು; ಪಾಳು; ಅವಶೇಷ: the ruins of Rome ಪ್ರಾಚೀನ ರೋಮ್‍ ಪಟ್ಟಣದ ಯಾ ರೋಮ್‍ ಸಾಮ್ರಾಜ್ಯದ ಭಗ್ನಾವಶೇಷಗಳು. ancient ruins ಪ್ರಾಚೀನಾವಶೇಷಗಳು.
  6. ನಾಶಕಾರಣ; ವಿನಾಶಕಾರಿ; ನಾಶಕ: will be the ruin of us ಅದು ನಮ್ಮ ನಾಶದ ಕಾರಣವಾಗುವುದು.
ಪದಗುಚ್ಛ
  1. lie in ruins ಭಗ್ನಾವಶೇಷವಾಗಿರು; ಪಾಳುಬಿದ್ದಿರು.
  2. rapine and red ruins ಕೊಳ್ಳೆ ಮತ್ತು ಸಂಪೂರ್ಣನಾಶ.
See also 1ruin
2ruin ರೂಇನ್‍
ಸಕರ್ಮಕ ಕ್ರಿಯಾಪದ
  1. ನಾಶಮಾಡು; ಹಾಳುಮಾಡು; ನಾಶಕ್ಕೆ ತರು: her extravagance ruined him ಅವಳ ದುಂದುವೆಚ್ಚ ಅವನನ್ನು ನಾಶಮಾಡಿತು.
  2. ತುಂಬ ಕೆಡಿಸು; ಹಾಳುಮಾಡು: the rain ruined my hat ಮಳೆ ನನ್ನ ಹ್ಯಾಟನ್ನು ತುಂಬ ಹಾಳುಮಾಡಿತು.
  3. (ಮುಖ್ಯವಾಗಿ ಭೂತಕೃದಂತದಲ್ಲಿ) (ಸ್ಥಳವನ್ನು) ಹಾಳುಗೆಡವು; ಪಾಳುಗೆಡವು; ನಾಶಮಾಡು; ಧ್ವಂಸಮಾಡು.
ಅಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) ರಭಸದಿಂದ, ದಿಡೀರನೆ ಬೀಳು.

ಪದಗುಚ್ಛ
  1. ruin girl ಹುಡುಗಿಯನ್ನು ಕೆಡಿಸು; ಹುಡುಗಿಯ ಮಾನಭಂಗಮಾಡು.
  2. ruin one’s prospects ತನ್ನ ಭವಿಷ್ಯವನ್ನು ಹಾಳುಮಾಡಿಕೊ, ನಾಶಪಡಿಸಿಕೊ.