See also 2ruff  3ruff  4ruff
1ruff ರಹ್‍
ನಾಮವಾಚಕ
  1. ರಹ್‍; ಕೊರಳ ನೆರಿಗೆ; ಮುಖ್ಯವಾಗಿ 16ನೆ ಶತಮಾನದಲ್ಲಿ ಕತ್ತಿನ ಸುತ್ತಲೂ ಧರಿಸುತ್ತಿದ್ದ, ಹಿಟ್ಟು ಹಾಕಿ ಗಟ್ಟಿಗೊಳಿಸಿದ ನೆರಿಗೆ ಕತ್ತು ಪಟ್ಟಿ. Figure: ruff-1
  2. ಗರಿಕಂಠಿ; ಗರಿಗಳ ಯಾ ಕೂದಲಿನ ಕತ್ತುನೆರಿಗೆ; ಹಕ್ಕಿಯ ಯಾ ಪ್ರಾಣಿಯ ಕತ್ತಿನ ಸುತ್ತಲೂ ಚಾಚಿಕೊಂಡಿರುವ ಉಜ್ಜ್ವಲ ಬಣ್ಣದ ಗರಿಗಳ ಯಾ ಕೂದಲಿನ ನೆರಿಗೆ, ಉಂಗುರ, ಬಳೆ.
  3. ಮುಸುಕಿನ ಪಾರಿವಾಳದಂಥ ಒಂದು ಬಗೆಯ ಸಾಕಿದ ಪಾರಿವಾಳ.
  4. (ಸ್ತ್ರೀಲಿಂಗ reeve ಉಚ್ಚಾರಣೆ ರೀವ್‍) ರಹ್‍ ಹಕ್ಕಿ; ಬೆದೆಕಾಲದಲ್ಲಿ ಗಂಡು ಜಾತಿಗೆ ಕಂಠಾಭರಣವೂ ಕಿವಿಜುಟ್ಟೂ ಇರುವ, ಹಿಲೋಮಕಸ್‍ ಪಗ್‍ನ್ಯಾಕ್ಸ್‍ ಕುಲದ ನಡಗೆ ಹಕ್ಕಿ.
See also 1ruff  3ruff  4ruff
2ruff ರಹ್‍
ನಾಮವಾಚಕ

ರಹ್‍ ಮೀನು; ಯೂರೋಪಿನ ಸರೋವರ ಮತ್ತು ನದಿಗಳಲ್ಲಿ ಕಾಣಬರುವ, ಜಿಮ್ನೊಸೆಹಲಸ್‍ ಸೆರ್ನುಅ ಕುಲದ, ಮುಳ್ಳುಶಲ್ಕಗಳುಳ್ಳ ಹಲವಾರು ಮೀನುಗಳಲ್ಲೊಂದು, ಮುಖ್ಯವಾಗಿ ಪರ್ಚ್‍ ಮೀನಿನಂಥ ಸಿಹಿನೀರು ಮೀನು.

See also 1ruff  2ruff  4ruff
3ruff ರಹ್‍
ಅಕರ್ಮಕ ಕ್ರಿಯಾಪದ

(ವಿಸ್ಟ್‍ ಇಸ್ಪೀಟಾಟದಲ್ಲಿ) ತುರುಹು ಆಡು; ತುರುಪು ಇಳಿಸು, ಬಿಡು; ತುರುಪಿನಿಂದ ಹೊಡೆ ( ಸಕರ್ಮಕ ಕ್ರಿಯಾಪದ ಸಹ).

See also 1ruff  2ruff  3ruff
4ruff ರಹ್‍
ನಾಮವಾಚಕ
  1. (ವಿಸ್ಟ್‍ ಇಸ್ಪೀಟಾಟದಲ್ಲಿ) ತುರುಹು ಆಡುವುದು; ತುರುಹು ಹೊಡೆಯುವುದು.
  2. ಉಚಿತ ರಂಗಿನ ಎಲೆಗಳನ್ನು ಇಳಿಯುತ್ತ ತಾನೂ, ತನ್ನ ಜೊತೆಗಾರನೂ ಪರ್ಯಾಯ ಕ್ರಮದಲ್ಲಿ ತುರುಹಿನಿಂದ ಹೊಡೆಯುತ್ತಿರುವುದು.
ಪದಗುಚ್ಛ

double ruff = 4ruff \((2)\).