See also 2ruff  3ruff  4ruff
1ruff ರಹ್‍
ನಾಮವಾಚಕ
  1. ರಹ್‍; ಕೊರಳ ನೆರಿಗೆ; ಮುಖ್ಯವಾಗಿ 16ನೆ ಶತಮಾನದಲ್ಲಿ ಕತ್ತಿನ ಸುತ್ತಲೂ ಧರಿಸುತ್ತಿದ್ದ, ಹಿಟ್ಟು ಹಾಕಿ ಗಟ್ಟಿಗೊಳಿಸಿದ ನೆರಿಗೆ ಕತ್ತು ಪಟ್ಟಿ. Figure: ruff-1
  2. ಗರಿಕಂಠಿ; ಗರಿಗಳ ಯಾ ಕೂದಲಿನ ಕತ್ತುನೆರಿಗೆ; ಹಕ್ಕಿಯ ಯಾ ಪ್ರಾಣಿಯ ಕತ್ತಿನ ಸುತ್ತಲೂ ಚಾಚಿಕೊಂಡಿರುವ ಉಜ್ಜ್ವಲ ಬಣ್ಣದ ಗರಿಗಳ ಯಾ ಕೂದಲಿನ ನೆರಿಗೆ, ಉಂಗುರ, ಬಳೆ.
  3. ಮುಸುಕಿನ ಪಾರಿವಾಳದಂಥ ಒಂದು ಬಗೆಯ ಸಾಕಿದ ಪಾರಿವಾಳ.
  4. (ಸ್ತ್ರೀಲಿಂಗ reeve ಉಚ್ಚಾರಣೆ ರೀವ್‍) ರಹ್‍ ಹಕ್ಕಿ; ಬೆದೆಕಾಲದಲ್ಲಿ ಗಂಡು ಜಾತಿಗೆ ಕಂಠಾಭರಣವೂ ಕಿವಿಜುಟ್ಟೂ ಇರುವ, ಹಿಲೋಮಕಸ್‍ ಪಗ್‍ನ್ಯಾಕ್ಸ್‍ ಕುಲದ ನಡಗೆ ಹಕ್ಕಿ.