See also 2route
1route ರೂಟ್‍
ನಾಮವಾಚಕ
  1. (ತಲುಪುವ ಸ್ಥಾನವನ್ನು ಮುಟ್ಟುವುದಕ್ಕೆ, ಮುಖ್ಯವಾಗಿ ನಿಯತವಾಗಿ ಹಿಡಿದ) ದಾರಿ; ಹಾದಿ; ಮಾರ್ಗ; ಪಥ.
  2. (ಪ್ರಾಚೀನ ಪ್ರಯೋಗ) (ಸೈನ್ಯ) ಮುನ್ನಡೆಯಲು ಅಪ್ಪಣೆ; ನಡೆಯಾಜ್ಞೆ; ಚಲನೆಯಾಜ್ಞೆ: give the route(ಸೈನ್ಯ) ಮುನ್ನಡೆಯಲು ಆಜ್ಞೆಕೊಡು.
  3. (ಅಮೆರಿಕನ್‍ ಪ್ರಯೋಗ) (ಸರಕುಗಳನ್ನು ತಲುಪಿಸಲು, ಮಾರಲು ಯಾ ಸಂಗ್ರಹಿಸಲು) ಪ್ರಯಾಣ ಮಾಡಿದ ಸುತ್ತು, ಮಾರ್ಗ.
ಪದಗುಚ್ಛ
  1. column of route ಸೈನ್ಯದ ಶಿಸ್ತಿನ ನಡಗೆ ವ್ಯೂಹ; ಸೈನ್ಯದ ಪ್ರಯಾಣ ವ್ಯೂಹ, ನಡೆವರಿಸೆ.
  2. enroute ದಾರಿಯಲ್ಲಿ; ಮಾರ್ಗದಲ್ಲಿ: did it enroute ಅದನ್ನು ದಾರಿಯಲ್ಲಿ ಮಾಡಿದೆ.
See also 1route
2route ರೂಟ್‍
ಸಕರ್ಮಕ ಕ್ರಿಯಾಪದ

(ವರ್ತಮಾನ ಕೃದಂತ routeing).

  1. ನಿರ್ದಿಷ್ಟ ಮಾರ್ಗದಲ್ಲಿ ಕಳುಹಿಸು.
  2. (ಸಾಮಾನು ಮೊದಲಾದವನ್ನು) ಒಂದು ಗೊತ್ತಾದ ಮಾರ್ಗದಲ್ಲಿ ಸಾಗಿಸು.
  3. (ಸಾಮಾನು ಮೊದಲಾದವನ್ನು ಕಳುಹಿಸುವುದಕ್ಕೆ) ದಾರಿ ನಿರ್ದೇಶಿಸು; ಮಾರ್ಗವನ್ನು ಗೊತ್ತುಮಾಡು; ಮಾರ್ಗ ಯೋಜನೆ ಮಾಡು.