See also 2route
1route ರೂಟ್‍
ನಾಮವಾಚಕ
  1. (ತಲುಪುವ ಸ್ಥಾನವನ್ನು ಮುಟ್ಟುವುದಕ್ಕೆ, ಮುಖ್ಯವಾಗಿ ನಿಯತವಾಗಿ ಹಿಡಿದ) ದಾರಿ; ಹಾದಿ; ಮಾರ್ಗ; ಪಥ.
  2. (ಪ್ರಾಚೀನ ಪ್ರಯೋಗ) (ಸೈನ್ಯ) ಮುನ್ನಡೆಯಲು ಅಪ್ಪಣೆ; ನಡೆಯಾಜ್ಞೆ; ಚಲನೆಯಾಜ್ಞೆ: give the route(ಸೈನ್ಯ) ಮುನ್ನಡೆಯಲು ಆಜ್ಞೆಕೊಡು.
  3. (ಅಮೆರಿಕನ್‍ ಪ್ರಯೋಗ) (ಸರಕುಗಳನ್ನು ತಲುಪಿಸಲು, ಮಾರಲು ಯಾ ಸಂಗ್ರಹಿಸಲು) ಪ್ರಯಾಣ ಮಾಡಿದ ಸುತ್ತು, ಮಾರ್ಗ.
ಪದಗುಚ್ಛ
  1. column of route ಸೈನ್ಯದ ಶಿಸ್ತಿನ ನಡಗೆ ವ್ಯೂಹ; ಸೈನ್ಯದ ಪ್ರಯಾಣ ವ್ಯೂಹ, ನಡೆವರಿಸೆ.
  2. enroute ದಾರಿಯಲ್ಲಿ; ಮಾರ್ಗದಲ್ಲಿ: did it enroute ಅದನ್ನು ದಾರಿಯಲ್ಲಿ ಮಾಡಿದೆ.