See also 2rout  3rout
1rout ರೌಟ್‍
ನಾಮವಾಚಕ
  1. (ಮುಖ್ಯವಾಗಿ ಕುಡುಕರು, ಪುಂಡರು ಮೊದಲಾದವರ) ಗೋಷ್ಠಿ; ಗುಂಪು; ತಂಡ; ಕೂಟ; ಜಂಗುಳಿ.
  2. (ನ್ಯಾಯಶಾಸ್ತ್ರ) ಅಕ್ರಮಕೂಟ; ಕಾನೂನುಬಾಹಿರ ತ್ಯವೊಂದನ್ನು ನಡೆಸಲು ಉದ್ಯುಕ್ತರಾದ (ಮೂವರು ಯಾ ಹೆಚ್ಚು ಮಂದಿಯನ್ನುಳ್ಳ) ಕಾನೂನುವಿರುದ್ಧವಾದ ಕೂಟ, ತಂಡ.
  3. ದೊಂಬಿ; ಗೊಂದಲ; ಗಲಭೆ; ಕೋಲಾಹಲ; ತುಮುಲ; ಅವಾಂತರ; ಗಡಿಬಿಡಿ.
  4. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಭಾರಿ ಸಂಜೆಗೋಷ್ಠಿ; ಸಂಜೆಯ ಸತ್ಕಾರಕೂಟ.
  5. (ಸೋತ ಸೈನ್ಯದ) ದಿಕ್ಕೆಟ್ಟ ಓಟ, ಪಲಾಯನ.
ಪದಗುಚ್ಛ

put to rout ಸೋತು ಓಡಿಹೋಗುವಂತೆ ಮಾಡು; ಪೂರ್ತಿ ಸೋಲಿಸು; ಸದೆ ಬಡಿ; ಬಗ್ಗು ಬಡಿ.

See also 1rout  3rout
2rout ರೌಟ್‍
ಸಕರ್ಮಕ ಕ್ರಿಯಾಪದ

ಪೂರ್ತಿ ಸೋಲಿಸು; ಮುರಿಯ ಬಡಿ; ಸದೆ ಬಡಿ; ಓಡಿಹೋಗುವಂತೆ ಮಾಡು.

See also 1rout  2rout
3rout ರೌಟ್‍
ಸಕರ್ಮಕ ಕ್ರಿಯಾಪದ
  1. (ಮರದ ಯಾ ಲೋಹದ ಮೇಲೆ ಅಂಚಿನವರೆಗೆ ತಲುಪದಂತೆ) ಗಾಡಿ, ವೆಜ್ಜ ಯಾ ಯಾವುದೇ ವಿನ್ಯಾಸ ನಮೂನೆಯನ್ನು ಕಂಡರಿಸು, ಕೆತ್ತು.
  2. = 3root ( ಅಕರ್ಮಕ ಕ್ರಿಯಾಪದ ಸಹ).
ಪದಗುಚ್ಛ

rout out (ಹಾಸಿಗೆ, ಮನೆ, ಅವಿತುಕೊಂಡಿರುವ ಸ್ಥಳ ಮೊದಲಾದವುಗಳಿಂದ) ಈಚೆಗೆ ಎಳೆ; ಹೊರಹೊರಡಿಸು; ಇಬ್ಬಿಸು.