See also 2road
1road ರೋಡ್‍
ನಾಮವಾಚಕ
  1. (ವಾಹನಗಳು, ಪಾದಚಾರಿಗಳು, ಉಪಯೋಗಿಸಲು ವಿಶೇಷವಾಗಿ ರಚಿಸಿದ) ರಸ್ತೆ; ದಾರಿ; ಹಾದಿ; ಬೀದಿ; ಪಥ; ಮಾರ್ಗ.
  2. ವಾಹನಗಳು ಉಪಯೋಗಿಸುವ ರಸ್ತೆಯ ಭಾಗ; ರಸ್ತೆ: don’t step in the road ರಸ್ತೆಯ ಮೇಲೆ ಕಾಲಿಡಬೇಡ.
  3. (ತಲುಪುವ ಯಾ ಸಾಧಿಸುವ) ಮಾರ್ಗ; ದಾರಿ; ಹಾದಿ: the road to success ಯಶಸ್ಸಿನ ಮಾರ್ಗ.
  4. ಸಾಗುವ ದಾರಿ ಯಾ ಮಾರ್ಗ: our road took us through foreign territory ನಮ್ಮ ದಾರಿ ನಮ್ಮನ್ನು ವಿದೇಶಿ ರಾಜ್ಯದ ಮೂಲಕ ಕೊಂಡೊಯ್ದಿತು.
  5. ಗಣಿಯಲ್ಲಿನ ನೆಲದಡಿ ರಸ್ತೆ, ಮಾರ್ಗ.
  6. (ಅಮೆರಿಕನ್‍ ಪ್ರಯೋಗ) ರೈಲುಮಾರ್ಗ.
  7. (ಅಮೆರಿಕನ್‍ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ಹಡಗು ನಿಲ್ಲೆಡೆ; ಕರೆಯ ಹತ್ತಿರ ಹಡಗುಗಳು ಲಂಗರುಹಾಕಿ ಸುರಕ್ಷಿತವಾಗಿರಲು ಅನುಕೂಲ ಮಾಡಿರುವ ನೀರಭಾಗ.
ಪದಗುಚ್ಛ
  1. by road (ರೈಲು, ಹಡಗು, ವಿಮಾನಗಳ ಮೂಲಕವಾಗಿರದೆ) ರಸ್ತೆಯ ಮೂಲಕ; ರಸ್ತೆಯ ಮಾರ್ಗವಾಗಿ.
  2. get out of one’s road ಒಬ್ಬನ ದಾರಿಯಲ್ಲಿ ಅಡಚಣೆಯಾಗಿ, ಅಡ್ಡಿಯಾಗಿ ನಿಲ್ಲದೆ ಹೊರಟುಹೋಗು.
  3. get out of the road (ಆಡುಮಾತು) ದಾರಿ ಬಿಟ್ಟು ತೊಲಗು; ದಾರಿಯಲ್ಲಿ ಅಡಚಣೆಯಾಗಿ ನಿಲ್ಲಬೇಡ.
  4. in one’s (or the) road (ಆಡುಮಾತು) ಒಬ್ಬನ ದಾರಿಯಲ್ಲಿ ಅಡಚಣೆಯಾಗಿ ಅಡ್ಡಿಯಾಗಿ.
  5. one for the road (ಆಡುಮಾತು) ಹೊರಡುವುದಕ್ಕೆ ಮುನ್ನ ತೆಗೆದುಕೊಳ್ಳುವ ಕೊನೆಯ ಗುಟುಕು, (ಮದ್ಯ) ಪಾನ.
  6. on the road (ಮುಖ್ಯವಾಗಿ ವ್ಯಾಪಾರಿ ಸಂಸ್ಥೆಯ ಪ್ರತಿನಿಧಿಯಾಗಿ ಯಾ ಸಂಚಾರಿ ಪ್ರದರ್ಶನಕಾರಿಯಾಗಿ ಯಾ ಕೆಲಸವಿಲ್ಲದ ಅಲೆಮಾರಿಯಾಗಿ) ಸಂಚಾರ ಮಾಡುತ್ತಾ; ಪ್ರಯಾಣ ಮಾಡುತ್ತಾ.
  7. royal road to (ಯಾವುದನ್ನೆ ಸಾಧಿಸಲು, ಪಡೆಯಲು) ಸುಲಭವಾದ ದಾರಿ; ನೇರಮಾರ್ಗ; ರಾಜಮಾರ್ಗ.
  8. rule of the road ರಸ್ತೆಯ ನಿಯಮ; ಸಂಚಾರನಿಯಮ; ರಸ್ತೆಯಲ್ಲಿ ಸಂಚರಿಸುವ ಜನ ಮತ್ತು ವಾಹನಗಳು, ಸಮುದ್ರದ ಮೇಲೆ ಹಡಗುಗಳು ಎದುರಿಗೆ ಯಾ ಪಕ್ಕದಲ್ಲಿ ಬಂದಾಗ ಪಾಲಿಸಬೇಕಾದ ನಿಯಮಗಳು.
  9. take the road ಸಂಚಾರ ಪ್ರಾರಂಭಿಸು; ಪ್ರಯಾಣ ಹೊರಡು.
  10. take to the road (ಪ್ರಾಚೀನ ಪ್ರಯೋಗ) ದಾರಿಗಳ್ಳನಾಗು; ದರೋಡೆಗಾರನಾಗು.
  11. the road ಹೆದ್ದಾರಿ; ರಾಜಮಾರ್ಗ.
See also 1road
2road ರೋಡ್‍
ಸಕರ್ಮಕ ಕ್ರಿಯಾಪದ

(ನಾಯಿಯ ವಿಷಯದಲ್ಲಿ) ಹೆಜ್ಜೆಯ ವಾಸನೆ ಹಿಡಿದು (ಬೇಟೆ ಹಕ್ಕಿಯ) ಹಿಂದೆ ಹೋಗು, ಹಿಂಬಾಲಿಸು ( ಅಕರ್ಮಕ ಕ್ರಿಯಾಪದ ಸಹ).