1road
ರೋಡ್
ನಾಮವಾಚಕ
- (ವಾಹನಗಳು, ಪಾದಚಾರಿಗಳು, ಉಪಯೋಗಿಸಲು ವಿಶೇಷವಾಗಿ ರಚಿಸಿದ) ರಸ್ತೆ; ದಾರಿ; ಹಾದಿ; ಬೀದಿ; ಪಥ; ಮಾರ್ಗ.
- ವಾಹನಗಳು ಉಪಯೋಗಿಸುವ ರಸ್ತೆಯ ಭಾಗ; ರಸ್ತೆ: don’t step in the road ರಸ್ತೆಯ ಮೇಲೆ ಕಾಲಿಡಬೇಡ.
- (ತಲುಪುವ ಯಾ ಸಾಧಿಸುವ) ಮಾರ್ಗ; ದಾರಿ; ಹಾದಿ: the road to success ಯಶಸ್ಸಿನ ಮಾರ್ಗ.
- ಸಾಗುವ ದಾರಿ ಯಾ ಮಾರ್ಗ: our road took us through foreign territory ನಮ್ಮ ದಾರಿ ನಮ್ಮನ್ನು ವಿದೇಶಿ ರಾಜ್ಯದ ಮೂಲಕ ಕೊಂಡೊಯ್ದಿತು.
- ಗಣಿಯಲ್ಲಿನ ನೆಲದಡಿ ರಸ್ತೆ, ಮಾರ್ಗ.
- (ಅಮೆರಿಕನ್ ಪ್ರಯೋಗ) ರೈಲುಮಾರ್ಗ.
- (ಅಮೆರಿಕನ್ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ಹಡಗು ನಿಲ್ಲೆಡೆ; ಕರೆಯ ಹತ್ತಿರ ಹಡಗುಗಳು ಲಂಗರುಹಾಕಿ ಸುರಕ್ಷಿತವಾಗಿರಲು ಅನುಕೂಲ ಮಾಡಿರುವ ನೀರಭಾಗ.
ಪದಗುಚ್ಛ
- by road (ರೈಲು, ಹಡಗು, ವಿಮಾನಗಳ ಮೂಲಕವಾಗಿರದೆ) ರಸ್ತೆಯ ಮೂಲಕ; ರಸ್ತೆಯ ಮಾರ್ಗವಾಗಿ.
- get out of one’s road ಒಬ್ಬನ ದಾರಿಯಲ್ಲಿ ಅಡಚಣೆಯಾಗಿ, ಅಡ್ಡಿಯಾಗಿ ನಿಲ್ಲದೆ ಹೊರಟುಹೋಗು.
- get out of the road (ಆಡುಮಾತು) ದಾರಿ ಬಿಟ್ಟು ತೊಲಗು; ದಾರಿಯಲ್ಲಿ ಅಡಚಣೆಯಾಗಿ ನಿಲ್ಲಬೇಡ.
- in one’s (or the) road (ಆಡುಮಾತು) ಒಬ್ಬನ ದಾರಿಯಲ್ಲಿ ಅಡಚಣೆಯಾಗಿ ಅಡ್ಡಿಯಾಗಿ.
- one for the road (ಆಡುಮಾತು) ಹೊರಡುವುದಕ್ಕೆ ಮುನ್ನ ತೆಗೆದುಕೊಳ್ಳುವ ಕೊನೆಯ ಗುಟುಕು, (ಮದ್ಯ) ಪಾನ.
- on the road (ಮುಖ್ಯವಾಗಿ ವ್ಯಾಪಾರಿ ಸಂಸ್ಥೆಯ ಪ್ರತಿನಿಧಿಯಾಗಿ ಯಾ ಸಂಚಾರಿ ಪ್ರದರ್ಶನಕಾರಿಯಾಗಿ ಯಾ ಕೆಲಸವಿಲ್ಲದ ಅಲೆಮಾರಿಯಾಗಿ) ಸಂಚಾರ ಮಾಡುತ್ತಾ; ಪ್ರಯಾಣ ಮಾಡುತ್ತಾ.
- royal road to (ಯಾವುದನ್ನೆ ಸಾಧಿಸಲು, ಪಡೆಯಲು) ಸುಲಭವಾದ ದಾರಿ; ನೇರಮಾರ್ಗ; ರಾಜಮಾರ್ಗ.
- rule of the road ರಸ್ತೆಯ ನಿಯಮ; ಸಂಚಾರನಿಯಮ; ರಸ್ತೆಯಲ್ಲಿ ಸಂಚರಿಸುವ ಜನ ಮತ್ತು ವಾಹನಗಳು, ಸಮುದ್ರದ ಮೇಲೆ ಹಡಗುಗಳು ಎದುರಿಗೆ ಯಾ ಪಕ್ಕದಲ್ಲಿ ಬಂದಾಗ ಪಾಲಿಸಬೇಕಾದ ನಿಯಮಗಳು.
- take the road ಸಂಚಾರ ಪ್ರಾರಂಭಿಸು; ಪ್ರಯಾಣ ಹೊರಡು.
- take to the road (ಪ್ರಾಚೀನ ಪ್ರಯೋಗ) ದಾರಿಗಳ್ಳನಾಗು; ದರೋಡೆಗಾರನಾಗು.
- the road ಹೆದ್ದಾರಿ; ರಾಜಮಾರ್ಗ.