See also 2rival  3rival
1rival ರೈವಲ್‍
ನಾಮವಾಚಕ

(ಬಹುಮಾನಕ್ಕೆ ಮುಖ್ಯವಾಗಿ ಹೆಂಗಸಿನ ಯಾ ಗಂಡಸಿನ ಪ್ರಣಯಕ್ಕೆ, ಯಾವುದೇ ಉದ್ಯಮದಲ್ಲಿ ಯಾ ಗುಣದಲ್ಲಿ ವಸ್ತುಗಳ ವಿಷಾಯದಲ್ಲಿಯೂ ಸಹ) ಎದುರಾಳಿ; ಪ್ರತಿಸ್ಪರ್ಧಿ; ಪ್ರತಿದ್ವಂದ್ವಿ.

ಪದಗುಚ್ಛ

without a rival ಎದುರಿಲ್ಲದ; ಪ್ರತಿಸ್ಪರ್ಧಿಯಿಲ್ಲದ; ಅಪ್ರತಿದ್ವಂದ್ವಿ; ಅಪ್ರತಿಮ; ಎಣೆಯಿಲ್ಲದ; ಅಸಮಾನವಾದ.

See also 1rival  3rival
2rival ರೈವಲ್‍
ಗುಣವಾಚಕ

ಎದುರಾಳಿಯಾದ; ಪ್ರತಿಸ್ಪರ್ಧಿಯಾದ.

See also 1rival  2rival
3rival ರೈವಲ್‍
ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ rivalled (ಅಮೆರಿಕನ್‍ ಪ್ರಯೋಗ) rivaled;

ವರ್ತಮಾನ ಕೃದಂತ rivalling (ಅಮೆರಿಕನ್‍ ಪ್ರಯೋಗ rivaling)].

ಸಕರ್ಮಕ ಕ್ರಿಯಾಪದ
  1. (ಪ್ರತಿ)ಸ್ಪರ್ಧಿಸು; ಮೇಲಾಡು; ಹುರುಡಿಸು; ಎದುರಾಳಿಯಾಗು; (ಒಬ್ಬನೊಡನೆ) ಸ್ಪರ್ಧೆಗೆ ಇಳಿ.
  2. (ವಸ್ತುವಿಗೆ, ವ್ಯಕ್ತಿಗೆ) ಸರಿಸಮನಾಗು, ಸರಿತೂಗು; (ಮತ್ತೊಂದರಷ್ಟೇ, ಮತ್ತೊಬ್ಬನಷ್ಟೇ) ಉತ್ತಮವೆಂದು, ಸಮರ್ಥನೆಂದು ತೋರು ಯಾ ಹೇಳಿಕೊ; ಮಿಗಿಲಾಗಿರು.
ಅಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) (ಪ್ರತಿ)ಸ್ಪರ್ಧೆಯಲ್ಲಿ ತೊಡಗು.