See also 2ritual
1ritual ರಿಟ್ಯು(ಚು)ಅಲ್‍
ಗುಣವಾಚಕ
  1. ಮತಾಚರಣೆಯ; ಮತಾಚರಣೆಗೆ ಸಂಬಂಧಿಸಿದ; (ಧಾರ್ಮಿಕ) ಸಂಸ್ಕಾರಗಳನ್ನೊಳಗೊಂಡ; ಧರ್ಮವಿಧಿಗಳಿಂದ ಕೂಡಿದ.
  2. ಮತಾಚರಣೆಯಾಗಿ ಮಾಡುವ: ritual murder ಮತಾಚರಣೆಯಾಗಿ ಮಾಡುವ ಕೊಲೆ; ಧಾರ್ಮಿಕ ಕೊಲೆ, ಹತ್ಯೆ.
  3. ಮಾಮೂಲಾಗಿ ಮಾಡುವ; ರೂಢಿಯ ಪ್ರಕಾರದ; ವಾಡಿಕೆಯ.
See also 1ritual
2ritual ರಿಟ್ಯು(ಚು)ಅಲ್‍
ನಾಮವಾಚಕ
  1. ಮತಕ್ರಿಯಾ ವಿಧಿ ಯಾ ಮತಪ್ರಕ್ರಿಯೆ; ವಿಧಿವಿಹಿತ ಕ್ರಮ; ಧಾರ್ಮಿಕ ಅನುಷ್ಠಾನಗಳ ಯಾ ಮತ ಕ್ರಿಯಾವಿಧಿಗಳ ಕ್ರಮ.
  2. ಮತಕ್ರಿಯಾವಿಧಿಗಳನ್ನು, ಸಂಸ್ಕಾರಗಳನ್ನು ಒಳಗೊಂಡ ಗ್ರಂಥ; ಕ್ರಿಯಾವಿಧಿಶಾಸ್ತ್ರ.
  3. ಮತಕ್ರಿಯಾವಿಧಿಗಳ ಆಚರಣೆ, ಅನುಷ್ಠಾನ.
  4. ಮಾಮೂಲಿ ಕ್ರಮ; ರೂಢಿ; ವಾಡಿಕೆ.