See also 2risk
1risk ರಿಸ್ಕ್‍
ನಾಮವಾಚಕ

ಅಪಾಯ; ಗಂಡಾಂತರ; ಭಯ:

  1. ಕೇಡು, ಅಪಾಯ, ನಷ್ಟ, ಹಾನಿ ಯಾ ಇತರ ದುಷ್ಪರಿಣಾಮಗಳು ಉಂಟಾಗುವ ಅವಕಾಶ ಯಾ ಸಾಧ್ಯತೆ: there is the risk of his catching cold ಅವನಿಗೆ ನೆಗಡಿ ಹಿಡಿಯುವ ಅಪಾಯವಿದೆ.
  2. ಅಪಾಯವುಂಟುಮಾಡುವ ವ್ಯಕ್ತಿ ಯಾ ವಸ್ತು.
  3. ಅಪಾಯ ಸಂಬಂಧವಾದದ್ದು; ಅಪಾಯಕ್ಕೆ ಸಂಬಂಧಿಸಿದಂತೆ ಪರಿಗಣಿತವಾದದ್ದು: is a poor risk ಅಲ್ಪ ಅಪಾಯದ್ದು.
ಪದಗುಚ್ಛ

]

  1. at one’s own risk ಸ್ವಂತ ಹೊಣೆಯ ಮೇಲೆ; ನಷ್ಟಕ್ಕೆ ತನ್ನ ಸ್ವಂತ ಜವಾಬ್ದಾರಿಯ ಮೇಲೆ.
  2. at risk ಅಪಾಯಕ್ಕೀಡಾಗಿ; ಅಪಾಯದಲ್ಲಿ.
  3. at the risk of one’s life ತನ್ನ ಜೀವನವನ್ನು ಅಪಾಯಕ್ಕೊಡ್ಡಿ; ತನ್ನ ಜೀವಕ್ಕೇ ಅಪಾಯವಾಗುವ ಸಂಭವವಿದ್ದರೂ; ತನ್ನ ಪ್ರಾಣದ ಹಂಗು ತೊರೆದು.
  4. put at risk ಅಪಾಯಕ್ಕೆ–ಒಡ್ಡು, ಗುರಿಪಡಿಸು, ಈಡುಮಾಡು.
  5. run risks (or run a risk, run the risk) ನಷ್ಟ, ಅಪಾಯ ಮೊದಲಾದವಕ್ಕೆ–ಈಡಾಗು, ಈಡಾಗಿರು, ತಲೆಗೊಡು.
  6. take risks ಅಪಾಯಕ್ಕೆ (ಸಿದ್ಧವಾಗಿ) ಸಾಹಸಮಾಡು, ತಲೆಗೊಡು.
See also 1risk
2risk ರಿಸ್ಕ್‍
ಸಕರ್ಮಕ ಕ್ರಿಯಾಪದ
  1. (ತನ್ನನ್ನೇ ಯಾ ಯಾರನ್ನೇ) ಅಪಾಯಕ್ಕೆ, ನಷ್ಟಕ್ಕೆ–ಈಡುಮಾಡು ಯಾ ಈಡುಮಾಡಿಕೊ: risk one’s health ತನ್ನ ಆರೋಗ್ಯವನ್ನು ಹಾನಿಗೆ ಈಡುಮಾಡಿಕೊ.
  2. ನಷ್ಟಕ್ಕೆ ಯಾ ಅಪಾಯಕ್ಕೆ ಸಿದ್ಧವಾಗಿ ನುಗ್ಗು; ಒಂದು ಕೈನೋಡು; ಸಾಹಸಮಾಡು: risk a battle ಯುದ್ಧ ಮಾಡುವ ಸಾಹಸ ತೋರು; ಯುದ್ಧದಲ್ಲಿ ಸಂಭವಿಸುವ ಅಪಾಯಕ್ಕೆ ಯಾ ಸಾವುನೋವುಗಳಿಗೆ ಸಿದ್ಧವಾಗಿದ್ದು ಕದನಹೂಡು; ಯುದ್ಧಮಾಡಿ ಒಂದು ಕೈ ನೋಡು.
  3. (ಯಾವುದರದೇ) ಸಾಧ್ಯತೆಗೆ ಒಳಗಾಗು; ಸಾಧ್ಯತೆ ಒಪ್ಪಿಕೊ; ಸಂಭವ ಗ್ರಹಿಸು: runs risk of being arrested ದಸ್ತಗಿರಿಯ ಅಪಾಯಕ್ಕೆ, ಸಾಧ್ಯತೆಗೆ ಒಳಗಾಗಿದ್ದಾನೆ.
ಪದಗುಚ್ಛ

risk one’s neck ತನ್ನ ಜೀವವನ್ನೇ ಅಪಾಯಕ್ಕೊಡ್ಡು; ತನ್ನ ಪ್ರಾಣವನ್ನೇ ಪಣವೊಡ್ಡು.