1risk
ರಿಸ್ಕ್
ನಾಮವಾಚಕ
ಅಪಾಯ; ಗಂಡಾಂತರ; ಭಯ:
- ಕೇಡು, ಅಪಾಯ, ನಷ್ಟ, ಹಾನಿ ಯಾ ಇತರ ದುಷ್ಪರಿಣಾಮಗಳು ಉಂಟಾಗುವ ಅವಕಾಶ ಯಾ ಸಾಧ್ಯತೆ: there is the risk of his catching cold ಅವನಿಗೆ ನೆಗಡಿ ಹಿಡಿಯುವ ಅಪಾಯವಿದೆ.
- ಅಪಾಯವುಂಟುಮಾಡುವ ವ್ಯಕ್ತಿ ಯಾ ವಸ್ತು.
- ಅಪಾಯ ಸಂಬಂಧವಾದದ್ದು; ಅಪಾಯಕ್ಕೆ ಸಂಬಂಧಿಸಿದಂತೆ ಪರಿಗಣಿತವಾದದ್ದು: is a poor risk ಅಲ್ಪ ಅಪಾಯದ್ದು.
ಪದಗುಚ್ಛ
]
- at one’s own risk ಸ್ವಂತ ಹೊಣೆಯ ಮೇಲೆ; ನಷ್ಟಕ್ಕೆ ತನ್ನ ಸ್ವಂತ ಜವಾಬ್ದಾರಿಯ ಮೇಲೆ.
- at risk ಅಪಾಯಕ್ಕೀಡಾಗಿ; ಅಪಾಯದಲ್ಲಿ.
- at the risk of one’s life ತನ್ನ ಜೀವನವನ್ನು ಅಪಾಯಕ್ಕೊಡ್ಡಿ; ತನ್ನ ಜೀವಕ್ಕೇ ಅಪಾಯವಾಗುವ ಸಂಭವವಿದ್ದರೂ; ತನ್ನ ಪ್ರಾಣದ ಹಂಗು ತೊರೆದು.
- put at risk ಅಪಾಯಕ್ಕೆ–ಒಡ್ಡು, ಗುರಿಪಡಿಸು, ಈಡುಮಾಡು.
- run risks (or run a risk, run the risk) ನಷ್ಟ, ಅಪಾಯ ಮೊದಲಾದವಕ್ಕೆ–ಈಡಾಗು, ಈಡಾಗಿರು, ತಲೆಗೊಡು.
- take risks ಅಪಾಯಕ್ಕೆ (ಸಿದ್ಧವಾಗಿ) ಸಾಹಸಮಾಡು, ತಲೆಗೊಡು.