See also 2rise
1rise ರೈಸ್‍
ಅಕರ್ಮಕ ಕ್ರಿಯಾಪದ
(ಭೂತರೂಪ\ rose ಉಚ್ಚಾರಣೆ ರೋಸ್‍; ಭೂತಕೃದಂತ risen ಉಚ್ಚಾರಣೆ ರಿಸನ್‍).
  1. ಮೇಲೇರು; ಕೆಳಗಿನ ಸ್ಥಾನದಿಂದ ಮೇಲಿನ ಸ್ಥಾನಕ್ಕೆ ಏರು, ಚಲಿಸು; ಮೇಲಕ್ಕೆ ಬರು ಯಾ ಹೋಗು.
  2. (ಸೂರ್ಯ, ಚಂದ್ರ ಯಾ ತಾರೆಗಳ ವಿಷಯದಲ್ಲಿ) ಹುಟ್ಟು; ಉದಯವಾಗು; ದಿಗಂತದಿಂದ ಮೇಲೆ ಬರು, ಕಾಣಿಸಿಕೊ.
  3. (ಮಲಗಿದ್ದ, ಕುಳಿತಿದ್ದ, ಮೊಣಕಾಲೂರಿದ್ದ ಸ್ಥಿತಿಯಿಂದ) ಏಳು; ಮೇಲಕ್ಕೇಳು; ಎದ್ದುನಿಲ್ಲು: all rose to receive him ಅವನನ್ನು ಸ್ವಾಗತಿಸಲು ಎಲ್ಲರೂ ಎದ್ದುನಿಂತರು.
  4. ಹಾಸಿಗೆ ಬಿಟ್ಟೇಳು; ನಿದ್ದೆಯಿಂದೇಳು: rise with the lark ಬಾನಾಡಿಯ ಜೊತೆಗೇ ನಿದ್ದೆಯಿಂದೇಳು; ಬೆಳಗಿನ ಜಾವಕ್ಕೇ ಏಳು.
  5. (ಸಭೆ ಮೊದಲಾದವು) ಕೊನೆಗೊಳ್ಳು; ಮುಕ್ತಾಯವಾಗು: parliament will rise next week ಪಾರ್ಲಿಮೆಂಟಿನ ಅಧಿವೇಶನ ಮುಂದಿನ ವಾರ ಮುಕ್ತಾಯವಾಗುತ್ತದೆ.
  6. (ಬಾಗಿದ್ದು) ನೆಟ್ಟಗಾಗು; ನೆಟ್ಟಗೆನಿಲ್ಲು: he was too weak to rise ಅತಿ ನಿಶ್ಯಕ್ತಿಯಿಂದ ಅವನಿಗೆ ನೆಟ್ಟಗೆ ನಿಲ್ಲಲೂ ಆಗುತ್ತಿರಲಿಲ್ಲ. the hair rose on his head ಅವನ ತಲೆಗೂದಲು ನಿಮಿರಿ ನಿಂತಿತು.
  7. ನೆಲದಿಂದ ಏಳು: fell never to rise again ಮತ್ತೆ ನೆಲ ಬಿಟ್ಟು ಏಳಲಾರದ ಹಾಗೆ ಬಿದ್ದನು.
  8. (ಸತ್ತಿದ್ದು) ಮತ್ತೆ ಎದ್ದು ಬರು; ಪ್ರಾಣ ಮತ್ತೆ ಪಡೆ; ಪುನಃ ಜೀವಿಸು: rise from the dead ಮತ್ತೆ ಜೀವಪಡೆ; ಸತ್ತಿದ್ದವನು ಜೀವ ಪಡೆದು ಮೇಲಕ್ಕೆ ಏಳು.
  9. ಏಳು; ಬೀಸತೊಡಗು: if a wind should rise ಗಾಳಿ ಏನಾದರೂ ಎದ್ದ ಪಕ್ಷದಲ್ಲಿ.
  10. ದಂಗೆಯೇಳು; ಪ್ರತಿಭಟಿಸು; ಕ್ರಾಂತಿಏಳು: town rose in revolt against the oppressor ಊರು ದಬ್ಬಾಳಿಕೆಗಾರನ ವಿರುದ್ಧ ದಂಗೆಯೆದ್ದಿತು.
  11. ಏಳು, ಮೇಲಕ್ಕೆ ಹೋಗು, ಬರು, ಬೆಳೆ, ಹತ್ತು: tree rises 20 ft. ಮರವು 20 ಅಡಿ ಎತ್ತರ ಬೆಳೆಯುತ್ತದೆ.
  12. (ತೀವ್ರತೆ, ಬಲ, ಗಾತ್ರ, ಸಾಂದ್ರತೆ, ಮಟ್ಟ, ಮೊದಲಾದವು) ಹೆಚ್ಚಾಗು; ಏರು: her colour rose ಆಕೆಯ ಮುಖ ಕೆಂಪೇರಿತು, ಕಳೆಯೇರಿತು.
  13. (ಯೀಸ್ಟ್‍ನಿಂದಾಗಿ ಹಿಟ್ಟು) ಉಬ್ಬು: bread will not rise ರೊಟ್ಟಿ ಉಬ್ಬುವುದಿಲ್ಲ.
  14. (ಮೊತ್ತ, ಮಟ್ಟ) ಏರು; ವರ್ಧಿಸು; ವೃದ್ಧಿಯಾಗು; ಹೆಚ್ಚಾಗು: the mercury is rising ಪಾದರಸದ ಮಟ್ಟ ಏರುತ್ತಿದೆ.
  15. (ಧ್ವನಿಯ ವಿಷಯದಲ್ಲಿ) ಹೆಚ್ಚಾಗು; ಏರು; ಜೋರಾಗು: their voices rose with excitement ಸಂಭ್ರಮದಿಂದ ಅವರ ಗಂಟಲು ಜೋರಾದವು.
  16. ಎತ್ತರವಾಗು; ಮೇಲ್ಮಟ್ಟದಲ್ಲಿರು: should rise above petty jealousies ಸಣ್ಣ ಪುಟ್ಟ ಅಸೂಯೆಗಳಿಗೆ ಈಡಾಗದೆ ಮೇಲ್ಮಟ್ಟದಲ್ಲಿರಬೇಕು.
  17. ಉನ್ನತ ಸಾಮಾಜಿಕ ಸ್ಥಾನಕ್ಕೆ ಯಾ ಒಳ್ಳೆಯ ಸ್ಥಿತಿಗೆ ಬರು; ಅಭಿವೃದ್ಧಿಗೆ ಬರು: rose from the ranks ಕೆಳಸ್ತರದಿಂದ ಮೇಲಕ್ಕೇರಿದ.
  18. ಏರು; ಮೇಲಕ್ಕೆ ಓಲು: rising cupboard ಅಡಿಗೆ ಮನೆಯಲ್ಲಿ ಏರುವ ಬಡು.
  19. ಮೇಲೆ ಕಾಣಿಸಿಕೊ; ಕಾಣಬರು; ಮೇಲಕ್ಕೆ ಬರು; ದ್ರವದ ಮೇಲ್ಮ ಮೇಲೆ ಬರು: bubbles rose from the bottom ತಳದಿಂದ ಗುಳ್ಳೆಗಳು ಮೇಲ್ಮೈಮೇಲೆ ಬಂದವು. waited for the fish to rise ಮೀನು ನೀರಿನ ಮೇಲಕ್ಕೆ ಬರಲು ಕಾದನು. fish rises ಆಹಾರಕ್ಕಾಗಿ ಮೀನು (ನೀರಿನ) ಮೇಲಕ್ಕೆ ಬರುತ್ತದೆ.
  20. ಉದಯಿಸು; ಮೂಡು: picture rises before the mind ಮನಸ್ಸಿನಲ್ಲಿ ಚಿತ್ರ ಮೂಡುತ್ತದೆ.
  21. ವರ್ಧಿಸು; ಹೆಚ್ಚಾಗು; ಬಲವಾಗು; ಜೋರಾಗು: spirits rise ಉತ್ಸಾಹ ಜೋರಾಗುತ್ತದೆ. ten interest rises with each act ಅಂಕ ಅಂಕಕ್ಕೂ ಆಸಕ್ತಿ, ಕುತೂಹಲ ಹೆಚ್ಚುತ್ತ ಹೋಗುತ್ತದೆ.
  22. ಪ್ರವರ್ಧಮಾನಕ್ಕೆ ಬರು; ಪ್ರಗತಿ ಹೊಂದು; ಅಭಿವೃದ್ಧಿ ಹೊಂದು; ಮುಂದೆಬರು; ಮೇಲಕ್ಕೆ ಬರು; ಪ್ರಗತಿಶೀಲವಾಗಿರು: the rising generation, ಪ್ರಗತಿಶೀಲ ತರುಣ ಪೀಳಿಗೆ.
  23. ಸುತ್ತ ಮುತ್ತಲ ಪ್ರದೇಶಕ್ಕಿಂತ ಮೇಲೆ ಎದ್ದುಕಾಣು: mountains rose to our right ಪರ್ವತಗಳು ನಮ್ಮ ಬಲಗಡೆ ಎದ್ದು ಕಾಣುತ್ತಿದ್ದವು.
  24. (ಕಟ್ಟಡಗಳು ಮೊದಲಾದವುಗಳ ವಿಷಯದಲ್ಲಿ) ಏಳು; ಅಡಿಪಾಯದಿಂದ ಕಟ್ಟಡ ಮೇಲೇಳು: office blocks were rising all around ಕಾರ್ಯಾಲಯ ಘಟಕಗಳು ಸುತ್ತಲೂ ಮೇಲೇಳುತ್ತಿದ್ದವು.
  25. ಹುಟ್ಟು; ಉಗಮವಾಗು: the river rises in the mountains ಆ ನದಿ ಪರ್ವತಗಳಲ್ಲಿ ಹುಟ್ಟುತ್ತದೆ.
  26. (ಬೊಕ್ಕೆ, ಗುಳ್ಳೆ, ಬೋರೆ ಮೊದಲಾದವುಗಳ ವಿಷಯದಲ್ಲಿ) ಆಗು; ಏಳು; ರೂಪಗೊಳ್ಳು.
  27. (ಹೊಟ್ಟೆ ವಿಷಯದಲ್ಲಿ) ತೊಳಸು.
  28. ಸಾಕಷ್ಟು ಸಾಮರ್ಥ್ಯ ಬೆಳೆಸು; ಮಟ್ಟಕ್ಕೆ ಏರು: does not rise to an occasion ಸಂದರ್ಭಕ್ಕೆ ತಕ್ಕ ಸಾಮರ್ಥ್ಯವಿಲ್ಲ.
  29. (ವ್ಯಕ್ತಿಯ ಭಾವಗಳ ವಿಷಯದಲ್ಲಿ) ಉಲ್ಲಾಸಗೊಳ್ಳು; ಉತ್ಸಾಹಗೊಳ್ಳು.
  30. (ವಾಯುಭಾರಮಾಪಕದ ವಿಷಯದಲ್ಲಿ) ಏರು; ವಾಯುಮಂಡಲದ ಒತ್ತಡದ ಏರಿಕೆ ತೋರಿಸು.
  31. (ಕುದುರೆಯ ವಿಷಯದಲ್ಲಿ) ಕಾಲುಗಳ ಮೇಲೆ ಎದ್ದು ನಿಲ್ಲು: rose on its hind legs ಹಿಂಗಾಲುಗಳ ಮೇಲೆ ಎದ್ದು ನಿಂತಿತು.
  32. (ವಿರಳ ಪ್ರಯೋಗ ಸಾಮಾನ್ಯವಾಗಿ ಕಾವ್ಯಪ್ರಯೋಗ) ಉಂಟಾಗು; ತಲೆದೋರು; ಹುಟ್ಟು: a feud rose ವೈಷಮ್ಯ ತಲೆದೋರಿತು.
ಸಕರ್ಮಕ ಕ್ರಿಯಾಪದ

ಮೇಲಕ್ಕೆ ಬರಿಸು; ಎಬ್ಬಿಸು: did not see a bird rise all day ಇಡೀ ದಿನ ಒಂದು ಪಕ್ಷಿಯನ್ನೂ ಮೇಲಕ್ಕೆ ಎಬ್ಬಿಸಿದುದನ್ನು ನೋಡಲಿಲ್ಲ.

ಪದಗುಚ್ಛ
  1. rose above
    1. (ಕೀಳು ಭಾವನೆಗಳು ಮೊದಲಾದವುಗಳಿಂದ) ಮೇಲೇರು: does not rise above mediocrity ಸಾಮಾನ್ಯ ಯೋಗ್ಯತೆಯ ಮಟ್ಟವನ್ನು ಬಿಟ್ಟು ಮೇಲೇರುವುದಿಲ್ಲ.
    2. (ಕಷ್ಟನಷ್ಟಗಳು, ದೀನ ಪರಿಸ್ಥಿತಿಗಳು ಎದುರಾದಾಗ) ಮೀರಿನಿಲ್ಲು; ಸ್ಥೈರ್ಯ, ಧೈರ್ಯ ಪ್ರದರ್ಶಿಸು.
  2. rise and shine (ಸಾಮಾನ್ಯವಾಗಿ ಆಜ್ಞಾರ್ಥಕವಾಗಿ) (ಆಡುಮಾತು) (ಹಾಸಿಗೆಯಿಂದ ಸುಟಿಯಾಗಿ) ಏಳು; ಎದ್ದೇಳು.
  3. rise in the world ಸಮಾಜದಲ್ಲಿ ಏರು; ಘನತೆ, ಉನ್ನತಿ ಪಡೆ.
  4. rise to (ಒಂದು ಸಂದರ್ಭಕ್ಕೆ) ತಕ್ಕ ಶಕ್ತಿ, ಸಾಮರ್ಥ್ಯ ಪಡೆ; (ಸಂದರ್ಭಕ್ಕೆ) ತಕ್ಕಂತೆ ಏರು.
  5. rise with the sun (or lark) ಬೆಳಗಿನ ಜಾವವೇ ಏಳು; ಬೆಳಗ್ಗೆ ಬೇಗ ಎದ್ದೇಳು.
See also 1rise
2rise ರೈಸ್‍
ನಾಮವಾಚಕ
  1. (ವಿರಳ ಪ್ರಯೋಗ) (ಸೂರ್ಯ ಮೊದಲಾದವುಗಳ) ಉದಯ; ಮೂಡಿಕೆ: at rise of sun ಸೂರ್ಯೋದಯ ಕಾಲಕ್ಕೆ.
  2. ಏರಿಕೆ:
    1. ಏರುವ ಕ್ರಿಯೆ, ವಿಧಾನ ಯಾ ಪ್ರಮಾಣ.
    2. ಧ್ವನಿಯ ಯಾ ಸ್ಥಾಯಿಯ ಏರಿಕೆ.
    3. ಪ್ರಮಾಣ, ವ್ಯಾಪ್ತಿ ಮೊದಲಾದವುಗಳ ಹೆಚ್ಚಿಕೆ, ಹೆಚ್ಚಳ: a rise in unemployment ನಿರುದ್ಯೋಗದ ಏರಿಕೆ.
  3. ಏರು; ಚಡಾವು; ದಿಣ್ಣೆ; ತಿಟ್ಟು; ಗುಡ್ಡ; ಮೊರಡಿ: came to a rise in the road ರಸ್ತೆಯಲ್ಲಿ ಒಂದು ಏರಿಗೆ ಬಂದೆವು. chapel stands on a rise ಪ್ರಾರ್ಥನಾ ಮಂದಿರ ಒಂದು ಗುಡ್ಡದ ಮೇಲಿದೆ.
  4. (ಬ್ರಿಟಿಷ್‍ ಪ್ರಯೋಗ) (ಸಂಬಳ, ಕೂಲಿ, ಕ್ರಯ, ಬೆಲೆ, ಧಾರಣೆ ಮೊದಲಾದವುಗಳ) ಹೆಚ್ಚಳ; ಆಧಿಕ್ಯ.
  5. (ಅಧಿಕಾರ, ಸ್ಥಾನಮಾನ ಮೊದಲಾದವುಗಳ) ಹೆಚ್ಚಳ; ಏರಿಕೆ.
  6. (ಸಾಮಾಜಿಕ, ವಾಣಿಜ್ಯ ಯಾ ರಾಜಕೀಯ) ಪ್ರಗತಿ; ಅಭಿವೃದ್ಧಿ; ಮೇಲ್ಮುಖ ಬೆಳವಣಿಗೆ.
  7. ಮೂಲ; ಹುಟ್ಟು; ಪ್ರಾರಂಭ; ಆದಿ.
  8. (ಸಮಾಜದಲ್ಲಿ) ಏಳಿಗೆ; ಉತ್ಕರ್ಷ; ಅಭಿವೃದ್ಧಿ; ಉನ್ನತಿ; ಉಚ್ಛ್ರಾಯ.
  9. (ಮೀನು) ನೀರ ಮೇಲ್ಗಡೆ ಬರುವುದು; (ಮೀನಿನ) ನೀರ ಮೇಲ್ಗಡೆಯ ಚಲನೆ: not a sign of a rise ಮೀನು ನೀರು ಮೇಲ್ಗಡೆ ಬರುವುದರ ಸೂಚನೆಯಿಲ್ಲ.
    1. (ಮೆಟ್ಟಲು, ಕಮಾನು, ಇಳುಕಲು ಮೊದಲಾದವುಗಳ) ಎತ್ತರ.
    2. (ಮೆಟ್ಟಲು ಸಾಲಿನ ಎರಡು ಮೆಟ್ಟಲು ಹಲಗೆಗಳನ್ನು ಕೂಡಿಸುವ) ನಿಲುಪಟ್ಟಿ.
ಪದಗುಚ್ಛ
  1. get (or take) a rise out of one (ಆಡುಮಾತು) (ಮುಖ್ಯವಾಗಿ ಕೀಟಲೆ ಮಾಡಿ) ಒಬ್ಬನು ತನ್ನ ಕೋಪ ಮೊದಲಾದ ಭಾವುಕ ಯಾ ಪ್ರತಿಕ್ರಿಯೆಯನ್ನು ತೋರಿಸಿಕೊಳ್ಳುವಂತೆ ಮಾಡು; ಕೆರಳಿಸು; ರೇಗಿಸು: you will get a rise out of him if you mention the name of cricket ನೀನು ಕ್ರಿಕೆಟ್ಟಿನ ಹೆಸರು ಹೇಳಿದರೆ ಅವನನ್ನು ಕೆರಳಿಸುತ್ತದೆ.
  2. give rise to ಕಾರಣವಾಗು; (-ಕ್ಕೆ) ಅವಕಾಶಕೊಡು: the industrial revolution gave rise to urbanization ಕೈಗಾರಿಕಾಕ್ರಾಂತಿ ನಗರೀಕರಣಕ್ಕೆ ಕಾರಣವಾಯಿತು.
  3. have one’s rise ತನ್ನ ಮೂಲವಾಗಿ ಹೊಂದಿರು; ಹುಟ್ಟು; ಪ್ರಾರಂಭವಾಗು.
  4. on the rise ಏರುತ್ತಿರುವ; ಹೆಚ್ಚುತ್ತಿರುವ.