See also 1rise
2rise ರೈಸ್‍
ನಾಮವಾಚಕ
  1. (ವಿರಳ ಪ್ರಯೋಗ) (ಸೂರ್ಯ ಮೊದಲಾದವುಗಳ) ಉದಯ; ಮೂಡಿಕೆ: at rise of sun ಸೂರ್ಯೋದಯ ಕಾಲಕ್ಕೆ.
  2. ಏರಿಕೆ:
    1. ಏರುವ ಕ್ರಿಯೆ, ವಿಧಾನ ಯಾ ಪ್ರಮಾಣ.
    2. ಧ್ವನಿಯ ಯಾ ಸ್ಥಾಯಿಯ ಏರಿಕೆ.
    3. ಪ್ರಮಾಣ, ವ್ಯಾಪ್ತಿ ಮೊದಲಾದವುಗಳ ಹೆಚ್ಚಿಕೆ, ಹೆಚ್ಚಳ: a rise in unemployment ನಿರುದ್ಯೋಗದ ಏರಿಕೆ.
  3. ಏರು; ಚಡಾವು; ದಿಣ್ಣೆ; ತಿಟ್ಟು; ಗುಡ್ಡ; ಮೊರಡಿ: came to a rise in the road ರಸ್ತೆಯಲ್ಲಿ ಒಂದು ಏರಿಗೆ ಬಂದೆವು. chapel stands on a rise ಪ್ರಾರ್ಥನಾ ಮಂದಿರ ಒಂದು ಗುಡ್ಡದ ಮೇಲಿದೆ.
  4. (ಬ್ರಿಟಿಷ್‍ ಪ್ರಯೋಗ) (ಸಂಬಳ, ಕೂಲಿ, ಕ್ರಯ, ಬೆಲೆ, ಧಾರಣೆ ಮೊದಲಾದವುಗಳ) ಹೆಚ್ಚಳ; ಆಧಿಕ್ಯ.
  5. (ಅಧಿಕಾರ, ಸ್ಥಾನಮಾನ ಮೊದಲಾದವುಗಳ) ಹೆಚ್ಚಳ; ಏರಿಕೆ.
  6. (ಸಾಮಾಜಿಕ, ವಾಣಿಜ್ಯ ಯಾ ರಾಜಕೀಯ) ಪ್ರಗತಿ; ಅಭಿವೃದ್ಧಿ; ಮೇಲ್ಮುಖ ಬೆಳವಣಿಗೆ.
  7. ಮೂಲ; ಹುಟ್ಟು; ಪ್ರಾರಂಭ; ಆದಿ.
  8. (ಸಮಾಜದಲ್ಲಿ) ಏಳಿಗೆ; ಉತ್ಕರ್ಷ; ಅಭಿವೃದ್ಧಿ; ಉನ್ನತಿ; ಉಚ್ಛ್ರಾಯ.
  9. (ಮೀನು) ನೀರ ಮೇಲ್ಗಡೆ ಬರುವುದು; (ಮೀನಿನ) ನೀರ ಮೇಲ್ಗಡೆಯ ಚಲನೆ: not a sign of a rise ಮೀನು ನೀರು ಮೇಲ್ಗಡೆ ಬರುವುದರ ಸೂಚನೆಯಿಲ್ಲ.
    1. (ಮೆಟ್ಟಲು, ಕಮಾನು, ಇಳುಕಲು ಮೊದಲಾದವುಗಳ) ಎತ್ತರ.
    2. (ಮೆಟ್ಟಲು ಸಾಲಿನ ಎರಡು ಮೆಟ್ಟಲು ಹಲಗೆಗಳನ್ನು ಕೂಡಿಸುವ) ನಿಲುಪಟ್ಟಿ.
ಪದಗುಚ್ಛ
  1. get (or take) a rise out of one (ಆಡುಮಾತು) (ಮುಖ್ಯವಾಗಿ ಕೀಟಲೆ ಮಾಡಿ) ಒಬ್ಬನು ತನ್ನ ಕೋಪ ಮೊದಲಾದ ಭಾವುಕ ಯಾ ಪ್ರತಿಕ್ರಿಯೆಯನ್ನು ತೋರಿಸಿಕೊಳ್ಳುವಂತೆ ಮಾಡು; ಕೆರಳಿಸು; ರೇಗಿಸು: you will get a rise out of him if you mention the name of cricket ನೀನು ಕ್ರಿಕೆಟ್ಟಿನ ಹೆಸರು ಹೇಳಿದರೆ ಅವನನ್ನು ಕೆರಳಿಸುತ್ತದೆ.
  2. give rise to ಕಾರಣವಾಗು; (-ಕ್ಕೆ) ಅವಕಾಶಕೊಡು: the industrial revolution gave rise to urbanization ಕೈಗಾರಿಕಾಕ್ರಾಂತಿ ನಗರೀಕರಣಕ್ಕೆ ಕಾರಣವಾಯಿತು.
  3. have one’s rise ತನ್ನ ಮೂಲವಾಗಿ ಹೊಂದಿರು; ಹುಟ್ಟು; ಪ್ರಾರಂಭವಾಗು.
  4. on the rise ಏರುತ್ತಿರುವ; ಹೆಚ್ಚುತ್ತಿರುವ.