See also 2ripple  3ripple  4ripple
1ripple ರಿಪ(ಪ್‍)ಲ್‍
ನಾಮವಾಚಕ

ಸೆಣಬಿನಿಂದ ಬೀಜಗಳನ್ನು ತೆಗೆದುಹಾಕುವ ಹಣಿಗೆ.

See also 1ripple  3ripple  4ripple
2ripple ರಿಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

ಹಣಿಗೆಯಿಂದ ಬೀಜ ತೆಗೆ.

See also 1ripple  2ripple  4ripple
3ripple ರಿಪ(ಪ್‍)ಲ್‍
ನಾಮವಾಚಕ
    1. ನೀರಿನ ಮೇಲೆ ಸಣ್ಣ ತರಂಗವೆಬ್ಬಿಸುವ ಕಲಕಾಟ.
    2. ಕಿರುದೆರೆ; ಸಣ್ಣಅಲೆ(ಗಳು), ತೆರೆ(ಗಳು).
  1. (ಕೂದಲು, ಅಲಂಕಾರಪಟ್ಟಿ ಮೊದಲಾದವುಗಳಲ್ಲಿ) ತೆರೆತೆರೆಯಾಗಿರುವುದು; ತರಂಗ ರಚನೆ; ತರಂಗಾಕೃತಿ.
  2. (ಸಂಭಾಷಣೆ, ನಗು, ಕರತಾಡನೆಗಳ ವಿಷಯದಲ್ಲಿ) ಕಲರವ ತರಂಗ; ಕಿರುದೆರೆಯಂತೆ ಏರಿಳಿಯುವ ಮೃದು ನಾದ; ಕಲಕಲ ನಾದ; ಮೆಲು ಸಪ್ಪಳು: a ripple of conversation ಸಂಭಾಷಣೆಯ ಕಲರವ.
  3. (ವಿದ್ಯುದ್ವಿಜ್ಞಾನ) (ವಿದ್ಯುತ್ತು ಮೊದಲಾದವುಗಳ) ಬಲದಲ್ಲಿ ತುಸು ಏರಿಳಿತ.
  4. ತರಂಗದಂತೆ ಇರುವ, ತೆರೆತೆರೆಯಾಗಿರುವ, ಸಕ್ಕರೆ ಪಾಕ ಹಾಕಿದ ಐಸ್‍ಕ್ರೀಮು: raspberry ripple ರಾಸ್‍ಬರಿ ಐಸ್‍ಕ್ರೀಮು.
  5. (ಅಮೆರಿಕನ್‍ ಪ್ರಯೋಗ) ತೊರೆಯಲ್ಲಿ ನೀರು ಬಿಟ್ಟುಬಿಟ್ಟು ಹರಿಯುವ ಆಳವಿಲ್ಲದ ಭಾಗ.
See also 1ripple  2ripple  3ripple
4ripple ರಿಪ(ಪ್‍)ಲ್‍
ಅಕರ್ಮಕ ಕ್ರಿಯಾಪದ
  1. ಕಿರುದೆರೆಗಳಾಗು; ಸಣ್ಣಸಣ್ಣ ಅಲೆಯೇಳು.
  2. ಕಿರುದೆರೆಗಳಾಗಿ ಹರಿ; ಸಣ್ಣಸಣ್ಣ ಅಲೆಗಳಾಗಿ ಚಲಿಸು.
  3. ಕಿರುದೆರೆಗಳಾಗಿ ತೋರು; ಸಣ್ಣಸಣ್ಣ ಅಲೆಗಳಾಗಿ ಕಾಣು.
  4. ಕಲಕಲರವ ಮಾಡು; ಅಲೆಗಳ ಶಬ್ದಮಾಡು.
  5. ಅಲೆಗುರುತು ಮಾಡು, ಬಿಡು.
  6. ಅಲೆಗಳಂತೆ–ಕಂಪಿಸು, ಅಲ್ಲಾಡು.