See also 2rig  3rig  4rig
1rig ರಿಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rigged; ವರ್ತಮಾನ ಕೃದಂತ rigging).
  1. (ಹಡಗಿಗೆ ಕೂವೆಮರ, ಅಡ್ಡದಿಮ್ಮಿ, ಹಗ್ಗ, ಮೊದಲಾದ) ಸಜ್ಜನ್ನು–ಹವಣಿಸು, ಒದಗಿಸು; ಸಜ್ಜುಮಾಡಲ್ಪಡು; ಅಣಿಯಾಗು.
  2. (ಹಡಗನ್ನು ಯಾನ ಮಾಡಲು) ಸಿದ್ಧಪಡಿಸು; ಸಜ್ಜುಗೊಳಿಸು.
  3. (ವಿಮಾನದ) ಭಾಗಗಳನ್ನು ಜೋಡಿಸು ಯಾ ಸರಿಹೊಂದಿಸು.
  4. (ಉಡುಪು ಯಾ ಇತರ ಸಾಮಾನು ಸರಂಜಾಮು ಮೊದಲಾದವುಗಳಿಂದ) ಸಜ್ಜುಗೊಳಿಸು; ಅಣಿಮಾಡು.
  5. (ಕಟ್ಟಡವನ್ನು) ಅವಸರವಾಗಿ (ಇದ್ದ ಚೂರುಪಾರುಗಳನ್ನು ಉಪಯೋಗಿಸಿ) ಹಂಗಾಮಿಯಾಗಿ ಎಬ್ಬಿಸು, ಸವರಿಸು.
See also 1rig  3rig  4rig
2rig ರಿಗ್‍
ನಾಮವಾಚಕ
  1. ಸಜ್ಜುವಿನ್ಯಾಸ; ಹಡಗಿನ ಹಗ್ಗಗಳು ಮತ್ತು ಕೂವೆ ಮರಗಳು ಅಳವಟ್ಟಿರುವ ರೀತಿ.
  2. (ಉಡುಪು, ಮುಖ್ಯವಾಗಿ ಸಮವಸ್ತ್ರ, ಮೊದಲಾದ) ಸಜ್ಜಿನಿಂದ ವ್ಯಕ್ತಿ ಯಾ ವಸ್ತು ಕಾಣುವ ರೀತಿ; ಉಡುಪಿನ ಶೈಲಿ; ಉಡುಪು; ಪೋಷಾಕು.
  3. ಒಂದು ವಿಶೇಷ ಉದ್ದೇಶಕ್ಕಾಗಿ ಇರುವ ಸಾಧನ, ಮುಖ್ಯವಾಗಿ ರೇಡಿಯೋ ಪ್ರೇಷಕ (transmitter).
  4. = oil rig.
ಪದಗುಚ್ಛ

in full rig (ಆಡುಮಾತು) ಠೀಕಾಗಿ ಉಡುಪು ಧರಿಸಿ; ಅಚ್ಚುಕಟ್ಟಾಗಿ ಕಾಣುವಂತೆ ಬಟ್ಟೆ ಹಾಕಿಕೊಂಡು; ಷೋಕಾಗಿ ವೇಷಭೂಷಣ ತೊಟ್ಟು.

See also 1rig  2rig  4rig
3rig ರಿಗ್‍
ನಾಮವಾಚಕ
  1. ತಂತ್ರ; ಮೋಸ; ವಂಚನೆ; ಕಪಟೋಪಾಯ; ಠಕ್ಕು.
  2. ಮೋಸಗಾರಿಕೆ; ಮೋಸ ಮಾಡುವ, ದಗಾಕೋರ–ವಿಧಾನ.
See also 1rig  2rig  3rig
4rig ರಿಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rigged; ವರ್ತಮಾನ ಕೃದಂತ: rigging).

ಮೋಸದಿಂದ ವ್ಯವಹರಿಸು; ತಂತ್ರದಿಂದ ನಡಸು; ವಂಚನೆಯಿಂದ ಸಾಧಿಸು.

ಪದಗುಚ್ಛ

rig the market ಬೆಲೆಗಳಲ್ಲಿ ಕೃತಕವಾದ ಏರಿಳಿತಗಳನ್ನು ಉಂಟುಮಾಡು.