See also 2rig  3rig  4rig
1rig ರಿಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rigged; ವರ್ತಮಾನ ಕೃದಂತ rigging).
  1. (ಹಡಗಿಗೆ ಕೂವೆಮರ, ಅಡ್ಡದಿಮ್ಮಿ, ಹಗ್ಗ, ಮೊದಲಾದ) ಸಜ್ಜನ್ನು–ಹವಣಿಸು, ಒದಗಿಸು; ಸಜ್ಜುಮಾಡಲ್ಪಡು; ಅಣಿಯಾಗು.
  2. (ಹಡಗನ್ನು ಯಾನ ಮಾಡಲು) ಸಿದ್ಧಪಡಿಸು; ಸಜ್ಜುಗೊಳಿಸು.
  3. (ವಿಮಾನದ) ಭಾಗಗಳನ್ನು ಜೋಡಿಸು ಯಾ ಸರಿಹೊಂದಿಸು.
  4. (ಉಡುಪು ಯಾ ಇತರ ಸಾಮಾನು ಸರಂಜಾಮು ಮೊದಲಾದವುಗಳಿಂದ) ಸಜ್ಜುಗೊಳಿಸು; ಅಣಿಮಾಡು.
  5. (ಕಟ್ಟಡವನ್ನು) ಅವಸರವಾಗಿ (ಇದ್ದ ಚೂರುಪಾರುಗಳನ್ನು ಉಪಯೋಗಿಸಿ) ಹಂಗಾಮಿಯಾಗಿ ಎಬ್ಬಿಸು, ಸವರಿಸು.