See also 2ride
1ride ರೈಡ್‍
ಕ್ರಿಯಾಪದ
(ಭೂತರೂಪ rode ಉಚ್ಚಾರಣೆ ರೋಡ್‍; ಪ್ರಾಚೀನ ಪ್ರಯೋಗ. rid ಭೂತಕೃದಂತ

\ ridden ಉಚ್ಚಾರಣೆ ರಿಡ(ಡ್‍)ನ್‍, ಪ್ರಾಚೀನ ಪ್ರಯೋಗ rid).

ಸಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವುಗಳ) ಮೇಲೆ ಕುಳಿತು ಪ್ರಯಾಣ ಮಾಡು; (ಪ್ರದೇಶದಲ್ಲಿ, ಪ್ರದೇಶದ ಮೂಲಕ) ಕುದುರೆಯ ಮೇಲೆ ಹೋಗು; ಸವಾರಿ ಮಾಡಿಕೊಂಡು ಪ್ರಯಾಣ ಮಾಡು: ride the desert ಮರುಭೂಮಿಯಲ್ಲಿ ಸವಾರಿ ಮಾಡಿಕೊಂಡು ಪ್ರಯಾಣ ಮಾಡು.
    1. ಸವಾರಿಮಾಡು.
    2. ಕುದುರೆಸವಾರಿ ಸ್ಪರ್ಧೆಯಲ್ಲಿ ಭಾಗವಹಿಸು: rode a good race ಒಳ್ಳೆಯ ಕುದುರೆ ಪಂದ್ಯದಲ್ಲಿ ಭಾಗವಹಿಸಿದ.
    3. (ರೂಪಕವಾಗಿ) (ಒಂದರ ಮೇಲೆ) ಭಾರವಾಗಿ ಕುಳಿತುಕೊ; ಅಧಿಕಾರ ನಡಸು; ಆಳು; ದವಲತ್ತು ನಡಸು; ದಬ್ಬಾಳಿಕೆ ಮಾಡು: a country that is ridden by a dictator ಓರ್ವ ಸರ್ವಾಧಿಕಾರಿಯ ದಬ್ಬಾಳಿಕೆಗೆ ಒಳಗಾದ ದೇಶ.
    4. ಪೀಡಿಸು; ಗೋಳು ಹೊಯ್ದುಕೊ; ಕಾಟಕೊಡು: nightmare rides sleeper ಘೋರ ಸ್ವಪ್ನ ನಿದ್ದೆಮಾಡುವವನನ್ನು ಪೀಡಿಸುತ್ತದೆ.
  2. ಸವಾರಿ ಮಾಡಿಸು; ಸವಾರಿ ಕೊಡು: ride child on one’s back ತನ್ನ ಬೆನ್ನಿನ ಮೇಲೆ ಮಗುವನ್ನು ಸವಾರಿ ಮಾಡಿಸು.
  3. ಒಂದೇಸಮನೆ ಕುಚೋದ್ಯ ಮಾಡು, ಅಪಹಾಸ್ಯಮಾಡು, ಗೇಲಿಮಾಡು; ರೇಗಿಸು; ಪೀಡಿಸು: the boys keep riding about his funny dress ಅವನ ವಿಚಿತ್ರ ಉಡುಪಿನ ಬಗ್ಗೆ ಬಾಲಕರು ಅವನನ್ನು ಒಂದೇ ಸಮನೆ ಗೇಲಿ ಮಾಡುತ್ತಿದ್ದಾರೆ.
  4. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ವಾಹನದಲ್ಲಿ ಪ್ರಯಾಣ ಮಾಡು.
  5. ಹೊತ್ತಿರು ಯಾ ಹೊತ್ತು ಸಾಗಿಸು; ಹೊತ್ತುಕೊಂಡು ಹೋಗು ಯಾ ಹೋಗಲು ಆಸರೆಯಾಗಿರು: the ship rides the waves ಹಡಗನ್ನು ಅಲೆಗಳು ಹೊತ್ತಿವೆ ಯಾ ಹಡಗು ಅಲೆಗಳ ಮೇಲೆ ಸಾಗುತ್ತದೆ.
  6. (ಸವಾರನ ವಿಷಯದಲ್ಲಿ) (ಕುದುರೆ ಮೊದಲಾದವನ್ನು) ಮುಂದಕ್ಕೆ ಓಡಿಸು; ಓಡುವಂತೆ ಮಾಡು: rode their horses at the fence ಬೇಲಿಯತ್ತ ತಮ್ಮ ಕುದುರೆಗಳನ್ನು ಓಡಿಸಿದರು.
  7. ಸಂಭೋಗಕ್ಕೆ (ಹೆಣ್ಣುಪ್ರಾಣಿಯ ಮೇಲೆ) ಏರು, ಹತ್ತು, ಸವಾರಿಮಾಡು.
  8. (ಅಮೆರಿಕನ್‍ ಪ್ರಯೋಗ) ಕಿರಿಕಿರಿಯುಂಟು ಮಾಡು; ರೇಗಿಸು.
ಅಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವುಗಳ ಮೇಲೆ) ಹತ್ತು; ಏರು; ಹತ್ತಿ ಕುಳಿತುಕೊ; ಕುಳಿತುಕೊಂಡು ಹೋಗು; ಸವಾರಿ ಮಾಡು: ride-a-cock-horse ಮರದ ತೂಗುಕುದುರೆಯ ಮೇಲೆ ಹತ್ತಿ ಸವಾರಿ ಮಾಡು.
  2. (ಕುದುರೆ ಮೊದಲಾದವುಗಳ ಮೇಲೆ, ರೈಲುಗಾಡಿಯಲ್ಲಿ ಯಾ ಸಾರ್ವಜನಿಕ ವಾಹನದಲ್ಲಿ) ಸವಾರಿ ಹೋಗು; ಕುಳಿತು ಪ್ರಯಾಣ ಮಾಡು.
  3. (ಕುದುರೆಯ ಮೇಲೆ ಕುಳಿತುಕೊಳ್ಳುವಂತೆ, ಮುಖ್ಯವಾಗಿ ಕಾಲು ಹಿಗ್ಗಲಿಸಿಕೊಂಡು) ವಾಹನದ ಮೇಲೆ ಕುಳಿತುಕೊ; ಕುಳಿತಿರು; ಕುಳಿತುಕೊಂಡು ಹೋಗು: riding on his father’s shoulders ಅವನ ತಂದೆಯ ಭುಜಗಳ ಮೇಲೆ ಕಾಲು ಹಿಗ್ಗಲಿಸಿಕೊಂಡು ಕುಳಿತು ಸವಾರಿ ಮಾಡುತ್ತಾ.
  4. (ಹಡಗು) ಲಂಗರು ಹಾಕಿರು: ship rode at anchor ಹಡಗಿಗೆ ಲಂಗರು ಹಾಕಿತ್ತು.
  5. ನೀರಿನ ಮೇಲೆ ಹಗುರವಾಗಿ ತೇಲು.
  6. (ಸೂರ್ಯ ಮೊದಲಾದವು) ತೇಲುವಂತೆ ತೋರು: moon was riding high ಚಂದ್ರ ಎತ್ತರದಲ್ಲಿ ತೇಲುವಂತೆ ತೋರುತ್ತಿತ್ತು.
  7. (ಸಾಮಾನ್ಯವಾಗಿ ಸಮತಲವಾದ ಯಾ ಮಟ್ಟಸವಾದ ವಸ್ತುಗಳ ವಿಷಯದಲ್ಲಿ) ಚಾಚಿಕೊಂಡಿರು; ಮತ್ತೊಂದರ ಮೇಲೆ ಹಾಯ್ದಿರು.
  8. (ಹೋಗುವಾಗ, ಚಲಿಸುವಾಗ) ಆಶ್ರಯಿಸು.
  9. (ನೆಲ) ಸವಾರಿಗೆ ಯೋಗ್ಯವಾಗಿರು: rides soft (ನೆಲ) ಸವಾರಿಗೆ ಮೃದುವಾಗಿದೆ, ಮೆತ್ತಗಿದೆ.
ಪದಗುಚ್ಛ
  1. bone rides (ಮೂಳೆ ಮುರಿತದಲ್ಲಿ) ಒಂದು ಮೂಳೆ ಮತ್ತೊಂದು ಮೂಳೆಯ ಮೇಲೆ ಚಾಚಿದೆ, ಕುಳಿತಿದೆ.
  2. let a thing ride ಒಂದರ ಗೊಡವೆಗೆ, ತಂಟೆಗೆ ಹೋಗಬೇಡ; ಅದರ ಪಾಡಿಗೆ ಸಹಜ ಗತಿಯಲ್ಲಿ ಹೋಗಲು ಬಿಡು.
  3. ridden (by fears, prejudices, etc.) (ಭಯದಿಂದ, ಪೂರ್ವಗ್ರಹದಿಂದ) ಪೀಡಿಸಲ್ಪಟ್ಟು; (ಭಯದ, ಪೂರ್ವಗ್ರಹದ) ಕಾಟಕ್ಕೆ ಒಳಗಾಗಿ.
  4. ride a ford ಹಾಯ್ಗಡವನ್ನು ಕುದುರೆಯ ಮೇಲೆ ದಾಟು.
  5. ride again (ಮುಖ್ಯವಾಗಿ ಅನಿರೀಕ್ಷಿತವಾಗಿ ಮತ್ತು ಪುನಶ್ಚ್ಯೆತನ್ಯದಿಂದ) ಮತ್ತೆ ಕಾಣಿಸಿಕೊಳ್ಳು, ಗೋಚರವಾಗು, ಪ್ರತ್ಯಕ್ಷವಾಗು.
  6. ride and tie (ಪ್ರಾಚೀನ ಪ್ರಯೋಗ) ಸವಾರಿ ಮಾಡು ಕಟ್ಟಿಹಾಕು; (ಇಬ್ಬರು ಯಾ ಮೂವರು ಒಂದೇ ಕುದುರೆಯನ್ನು ಪ್ರಯಾಣಕ್ಕೆ ಉಪಯೋಗಿಸಬೇಕಾದ ಸಂದರ್ಭದಲ್ಲಿ ಒಬ್ಬೊರಿಗೊಬ್ಬರು ಸರದಿ ಬದಲಾಯಿಸಿಕೊಳ್ಳುತ್ತ) ಸ್ವಲ್ಪ ದೂರ ಸವಾರಿ ಮಾಡಿ ಕುದುರೆಯನ್ನು (ಮತ್ತೊಬ್ಬನ ಉಪಯೋಗಕ್ಕಾಗಿ) ಕಟ್ಟಿಹಾಕಿ ಮುಂದಕ್ಕೆ ಸಾಗು.
  7. ride bodkin.
  8. ride for a fall
    1. ನಿರ್ಲಕ್ಷ್ಯವಾಗಿ ಕುದುರೆ ಓಡಿಸು; ಹುಚ್ಚು ಧೈರ್ಯದಿಂದ ಕುದುರೆಯನ್ನು ಓಡಿಸು.
    2. (ರೂಪಕವಾಗಿ) ಹುಚ್ಚು ಧೈರ್ಯದಿಂದ ವರ್ತಿಸು; ನಿರ್ಲಕ್ಷ್ಯವಾಗಿ ದುಡುಕು.
    3. ಸೋಲನ್ನು, ಅನಾಹುತವನ್ನು–ಹುಡುಕಿಕೊಂಡು ಹೋಗು, ಆಹ್ವಾನಿಸು; ಪತನಕ್ಕೆ ಸಾಗು; ಬೀಳಲು ನುಗ್ಗು; ಸೋಲಿಗೆ ಕರೆಕೊಡು.
  9. ride hard on ಮೇಲ್ವಿಚಾರಣೆ ನೋಡಿಕೊ; ಶಿಸ್ತನ್ನು ಕಾಪಾಡು; ಹತೋಟಿಯಲ್ಲಿಟ್ಟುಕೊಂಡಿರು: here comes an officer to ride hard on us ನಮ್ಮ ಮೇಲ್ವಿಚಾರಣೆ ನೋಡಿಕೊಳ್ಳಲು ಇಲ್ಲಿ ಒಬ್ಬ ಅಧಿಕಾರಿ ಬರುತ್ತಿದ್ದಾನೆ, ನೋಡಿ.
  10. ride high
    1. ಉಬ್ಬು; ಹಿಗ್ಗು; ಬೀಗು.
    2. ಯಶಸ್ವಿಯಾಗು; ಜಯಗಳಿಸು; ಜಯಶೀಲನಾಗು.
  11. ride off (on a side issue) (ಮುಖ್ಯ ವಿಷಯದಿಂದ ಜಾರಿಕೊಳ್ಳಲು) ಅಡ್ಡವಿಷಯವನ್ನು ಪ್ರಸ್ತಾಪಿಸು; ಗೌಣ ವಿಷಯವನ್ನು ಎತ್ತು.
  12. ride one down
    1. ಸವಾರಿಯಲ್ಲಿ ಸೋಲಿಸು; ಸವಾರಿಮಾಡುತ್ತ ಮುಂದಿರುವ ಸವಾರನನ್ನು ಹಿಂದಕ್ಕೆ ಹಾಕು.
    2. ಸವಾರಿ ಮಾಡುತ್ತಿರುವಲ್ಲಿ (ಮುಂದೆ, ಪಕ್ಕದಲ್ಲಿ ಇರುವವನನ್ನು) ಕೆಡವು, ಬೀಳಿಸು; ಡಿಕ್ಕಿ ಹೊಡೆದು ಬೀಳಿಸು.
    3. ವಿಪರೀತ ಸವಾರಿಯಿಂದ (ಕುದುರೆಯನ್ನು) ಸುಸ್ತು ಬೀಳಿಸು; ದಣಿಸು.
  13. ride one off (ಪೋಲೋ ಆಟದಲ್ಲಿ) ಒಬ್ಬನ ಪಕ್ಕದಲ್ಲಿಯೇ ಸವಾರಿ ಮಾಡುತ್ತಾ (ಅವನು ಚೆಂಡು ಹೊಡೆಯದಂತೆ) ಅವನನ್ನು ಆಚೆಗೆ ತಳ್ಳಿಬಿಡು, ಒತ್ತಿ ಹಾಕು.
  14. ride one on rail (ಚಿತ್ರಹಿಂಸೆ ಕೊಡಲು) ಕಂಬಿಯ ಮೇಲೆ ಸವಾರಿ ಮಾಡಿಸು.
  15. ride (one’s hobby, method, or jest) to death (ರೂಪಕವಾಗಿ) (ಪ್ರಿಯವಾದ ಹವ್ಯಾಸವನ್ನು, ಕ್ರಮವನ್ನು ಯಾ ಪರಿಹಾಸ್ಯವನ್ನು) ಅತಿಮಾಡು; ಅತಿರೇಕದಿಂದ ಹಾಳುಮಾಡು, ಸಾಯಿಸಿಹಾಕು; ಅತಿಮಾಡಿ ಕೆಡಿಸು, ಕೊಲ್ಲು.
  16. ride one’s horse to death = ಪದಗುಚ್ಛ (12c).
  17. ride one’s horse at (fence or enemy) (ಬೇಲಿಯನ್ನು ಯಾ ಶತ್ರುವನ್ನು ಕಂಡಾಗ) ಕುದುರೆಯನ್ನು ಮುಂದಕ್ಕೆ, ಆಕಡೆಗೆ, ಅದರ ಮೇಲೆ–ಚೋದಿಸು.
  18. ride out the storm
    1. (ಹಡಗಿನ ವಿಷಯದಲ್ಲಿ) ಬಿರುಗಾಳಿ ಮಳೆಯಲ್ಲಿ ಸುರಕ್ಷಿತವಾಗಿ ಲಂಗರು ಹಾಕಿ ತೇಲುತ್ತಿರು; ಅಪಾಯಕ್ಕೆ ಈಡಾಗದೆ ತೇಲುತ್ತಿರು; ಬಿರುಗಾಳಿಯ ಏಟನ್ನು ತಡೆದುಕೊ.
    2. (ರೂಪಕವಾಗಿ) ಅಪಾಯವನ್ನು ಸುರಕ್ಷಿತವಾಗಿ ದಾಟು.
  19. ride over (ಕುದುರೆ ಜೂಜಿನಲ್ಲಿ) ಸುಲಭವಾಗಿ, ಸರಾಗವಾಗಿ–ಸೋಲಿಸಿ ಬಿಡು, ಜಯಿಸು.
  20. ride roughshod over (ಇನ್ನೊಬ್ಬರ ಭಾವನೆಯನ್ನು ಗಣಿಸದೆ) ಸೊಕ್ಕಿನಿಂದ ವರ್ತಿಸು; (ಇನ್ನೊಬ್ಬರ ಮೇಲೆ) ಸವಾರಿ ಮಾಡು, ದರ್ಪತೋರು; (ಇನ್ನೊಬ್ಬರ ವಿಷಯದಲ್ಲಿ) ಒರಟಾಗಿ ವರ್ತಿಸು.
  21. ride the whirlwind (ಸುಂಟರಗಾಳಿಯಂಥ) ಪ್ರಚಂಡ ಸನ್ನಿವೇಶವನ್ನು ಪರಿಸ್ಥಿತಿಯನ್ನು–ಸ್ವಾಧೀನಕ್ಕೆ, ಹತೋಟಿಗೆ ತೆಗೆದುಕೊ.
  22. ride to $^1$hounds.
  23. ride 12 st. ಸವಾರಿಯುಡುಪಿನಲ್ಲಿ 12 ಸ್ಟೋನ್‍ ತೂಕ ತೂಗು.
  24. ropes ride ಹಗ್ಗದ ತಿರಿಚುಗಳು ಒಂದರ ಮೇಲೆ ಒಂದು ಕುಳಿತುಕೊಳ್ಳುತ್ತವೆ, ಅಡ್ಡಹಾಯುತ್ತವೆ.
  25. ride up (ಉಡುಪು, ಜಮಖಾನೆ, ಹಾಸು ಮೊದಲಾದವುಗಳ ವಿಷಯದಲ್ಲಿ) ಜರುಗು; ಮುದುಡು; ತನ್ನ ಸ್ಥಾನ ಬಿಟ್ಟು ಸರಿ.
See also 1ride
2ride ರೈಡ್‍
ನಾಮವಾಚಕ
  1. (ವಾಹನದಲ್ಲಿ) ಪ್ರಯಾಣ ಮಾಡುವುದು ಯಾ ಅದರ ಅವಧಿ.
  2. (ಕುದುರೆ, ಬೈಸಿಕಲ್ಲು, ಒಬ್ಬನ ಬೆನ್ನು ಮೊದಲಾದವುಗಳ ಮೇಲೆ ಮಾಡುವ) ಸವಾರಿಯ–ಪಟ್ಟು, ಸೂಳು; ತುಸು ಹೊತ್ತಿನ ಸವಾರಿ.
  3. (ಮುಖ್ಯವಾಗಿ ಕಾಡಿನ ಮೂಲಕ ಹಾದುಹೋಗುವ) ಸವಾರಿ ರಸ್ತೆ, ಮಾರ್ಗ.
  4. (ಸೈನ್ಯ) (ಹೊಸದಾಗಿ ಕೆಲಸಕ್ಕೆ ಸೇರಿಸಿಕೊಂಡ) ರಾವುತ ದಳ; ಕುದುರೆ ಸವಾರರ ತಂಡ; ಅಶ್ವಾರೋಹಿಗಳ ತಂಡ.
  5. ಸವಾರಿ (ಮಾಡುವಾಗ ಆಗುವ) ಅನುಭವ: gives a bumpy ride ಸವಾರಿಯಲ್ಲಿ ಎತ್ತಿ ಎತ್ತಿ ಹಾಕುತ್ತದೆ, ಕುಲುಕುತ್ತದೆ.
ಪದಗುಚ್ಛ
  1. (ಆಡುಮಾತು) ಒಬ್ಬ ವ್ಯಕ್ತಿಯನ್ನು ಕೊಲ್ಲುವುದಕ್ಕಿಂತ ಮುಂಚೆ ಅವನನ್ನು ಮೋಟಾರುಕಾರಿನಲ್ಲಿ ಅಪಹರಿಸಿಕೊಂಡು ಹೋಗು, ಎತ್ತಿಕೊಂಡು ಹೋಗು; ಒಬ್ಬನನ್ನು ಕೊಲ್ಲಲು ಕಾರಿನಲ್ಲಿ ಅಪಹರಿಸಿಕೊಂಡು ಹೋಗು.
  2. (ತಮಾಷೆಗಾಗಿ) ನಂಬಿಸಿ ವಂಚಿಸು, ಮೋಸಹೋಗಿಸು, ಟೋಪಿಹಾಕು.