See also 2hound
1hound ಹೌಂಡ್‍
ನಾಮವಾಚಕ
  1. (ಮುಖ್ಯವಾಗಿ ವಾಸನೆ ಹಿಡಿದು ಬೇಟೆಯಾಡುವ) ಬೇಟೆ ನಾಯಿ.
  2. ನಾಯಿ; ಕೀಳು ಮನುಷ್ಯ; ತುಚ್ಛ; ಅಲ್ಪ; ನೀಚ ಮನುಷ್ಯ.
  3. ನಾಯಿ; ಮೊಲ ಮತ್ತು ನಾಯಿ ಎಂಬ ಆಟದಲ್ಲಿ ಸುಳಿವು ಹಿಡಿದು ಹಿಂಬಾಲಿಸುವವನು.
  4. ನಾಯಿಈನು; ಒಂದು ಬಗೆಯ ಸಣ್ಣ ಈನು.
  5. ಅನ್ವೇಷಕ; ಪತ್ತೇದಾರ; ಯಾವುದೇ ವಿಷಯದ ಸುಳಿವನ್ನು ಹಿಡಿದು ಅದನ್ನು ಪತ್ತೆಹಚ್ಚಲು ಹೋಗುವವನು: news-hound ಸುದ್ದಿನಾಯಿ; ವಾರ್ತಾನ್ವೇಷಕ; ಸುದ್ದಿಯ ಸುಳಿವು ಹಿಡಿದು ಅದನ್ನು ಪತ್ತೆಹಚ್ಚಲು ಹೋಗುವವನು.
ಪದಗುಚ್ಛ
  1. master of hounds:
    1. ಬೇಟೆನಾಯಿಗಳ ಮಾಲಿಕ.
    2. ಬೇಟೆ ಮುಖಂಡ; ಬೇಟೆ ನಾಯಿಗಳನ್ನು ನಿರ್ದೇಶಿಸುವವನು.
  2. ride to hounds ಕುದುರೆಯೇರಿ ನರಿಬೇಟೆಗೆ ಹೋಗು.
  3. smooth hound ನುಣುಪು ನಾಈನು; ಒಂದು ಬಗೆಯ ನಾಯಿಈನು.
  4. the hounds (ಬ್ರಿಟಿಷ್‍ ಪ್ರಯೋಗ) (ನರಿ ಬೇಟೆಯಾಡುವ) ಬೇಟೆನಾಯಿಗಳ ತಂಡ.