See also 2riddle  3riddle  4riddle
1riddle ರಿಡ್‍(ಡ)ಲ್‍
ನಾಮವಾಚಕ
  1. ಒಗಟು; ಒಡಪ; ಸಮಸ್ಯೆ; ಪ್ರಹೇಳಿಕೆ; ಗೂಢಪ್ರಶ್ನೆ.
  2. ಜಟಿಲವಾದ, ಸಮಸ್ಯಾತ್ಮಕ–ವಿಷಯ, ವಸ್ತು, ವ್ಯಕ್ತಿ; ಸಮಸ್ಯೆಯಂಥ, ಅರ್ಥಮಾಡಿಕೊಳ್ಳಲು ಬಲುಕಷ್ಟವಾದ, ತಬ್ಬಿಬ್ಬುಗೊಳಿಸುವ, ಗೂಢ ವಿಷಯ, ವಸ್ತು, ವ್ಯಕ್ತಿ.
See also 1riddle  3riddle  4riddle
2riddle ರಿಡ್‍(ಡ್‍)ಲ್‍
ಸಕರ್ಮಕ ಕ್ರಿಯಾಪದ

ಒಗಟು–ಬಿಡಿಸು, ಬಿಚ್ಚು; ಸಮಸ್ಯೆ ಬಿಡಿಸು: riddle me (ಬುದ್ಧಿ ಚಮತ್ಕಾರಕ್ಕೆ ಸವಾಲುಹಾಕುವ ರೀತಿ) ನನ್ನ ಒಗಟು ಬಿಡಿಸು (ನೋಡೋಣ).

ಅಕರ್ಮಕ ಕ್ರಿಯಾಪದ
  1. ಒಗಟುಗಳಲ್ಲಿ ಮಾತನಾಡು.
  2. (ಬಿಡಿಸುವುದಕ್ಕಾಗಿ) ಒಗಟು ಹೇಳು; ಒಗಟುಗಳನ್ನು ಕೊಡು, ಮುಂದಿಡು, ಮಂಡಿಸು.
See also 1riddle  2riddle  4riddle
3riddle ರಿಡ್‍(ಡ)ಲ್‍
ನಾಮವಾಚಕ
  1. (ಹೊಟ್ಟಿನಿಂದ ಧಾನ್ಯವನ್ನು, ಮರಳಿನಿಂದ ಗರಸನ್ನು, ಬೂದಿಯಿಂದ ಕಿಟ್ಟವನ್ನು ಬೇರ್ಪಡಿಸಲು ಉಪಯೋಗಿಸುವ) ಜಲ್ಲರಿ; ಜರಡಿ; ಸಾರಣಿಗೆ.
  2. ಆಣಿಮಣೆ; ತಂತಿಯನ್ನು ನೇರಮಾಡುವುದಕ್ಕಾಗಿ ಉಪಯೋಗಿಸುವ ಆಣಿಗಳುಳ್ಳ ತಗಡು, ಮಣೆ.
See also 1riddle  2riddle  3riddle
4riddle ರಿಡ್‍(ಡ)ಲ್‍
ಸಕರ್ಮಕ ಕ್ರಿಯಾಪದ
  1. (ಧಾನ್ಯ ಮೊದಲಾದವನ್ನು) ಜಲ್ಲರಿ ಹಿಡಿ; ಜಲ್ಲರಿಯಾಡು; ಸಾರಣಿಸು; ಒಂದರಿ ಆಡು, ಹಿಡಿ; ಜಲ್ಲರಿಯಾಡಿ ಪ್ರತ್ಯೇಕಿಸು.
  2. (ರೂಪಕವಾಗಿ) (ಸಾಕ್ಷ್ಯವನ್ನು, ಸತ್ಯವನ್ನು) ಶೋಧಿಸಿನೋಡು; ಪರೀಕ್ಷಿಸು; ಸೋಸಿ ತೆಗೆ.
  3. (ಹಡಗನ್ನು, ವ್ಯಕ್ತಿಯನ್ನು, ಮುಖ್ಯವಾಗಿ ಗುಂಡಿನೇಟಿನಿಂದ) ತೂತುಮಾಡು; ತೂತುತೂತಾಗಿಸು.
  4. (ರೂಪಕವಾಗಿ) ಪಟಪಟನೆ ಪ್ರಶ್ನೆಗಳನ್ನು ಹಾಕು; ಪ್ರಶ್ನೆಗಳ ಸುರಿಮಳೆ ಕರೆ.
  5. (ಒಬ್ಬನು ಹೇಳಿದ್ದನ್ನು, ಸಿದ್ಧಾಂತವನ್ನು) ತಪ್ಪೆಂದು ಸಿದ್ಧಮಾಡಿ ಕೊಡು; ಅಪ್ರಮಾಣವೆಂದು ಸ್ಥಾಪಿಸು; ಪ್ರತಿವಾದಗಳಿಂದ ಹೇಳಿಕೆಯನ್ನು, ಸಿದ್ಧಾಂತವನ್ನು ಖಂಡಿಸು.
  6. (ದುರ್ಬಲಗೊಳಿಸುವ, ಅಹಿತಕರವಾದ, ಕೆಡುಕು ಉಂಟುಮಾಡುವ ಗುಣದಿಂದ) ತುಂಬು; ಬಾಧಿಸು: a government riddled with graft ಭ್ರಷ್ಟಾಚಾರದಿಂದ ತುಂಬಿದ ಸರ್ಕಾರ.