See also 1riddle  2riddle  3riddle
4riddle ರಿಡ್‍(ಡ)ಲ್‍
ಸಕರ್ಮಕ ಕ್ರಿಯಾಪದ
  1. (ಧಾನ್ಯ ಮೊದಲಾದವನ್ನು) ಜಲ್ಲರಿ ಹಿಡಿ; ಜಲ್ಲರಿಯಾಡು; ಸಾರಣಿಸು; ಒಂದರಿ ಆಡು, ಹಿಡಿ; ಜಲ್ಲರಿಯಾಡಿ ಪ್ರತ್ಯೇಕಿಸು.
  2. (ರೂಪಕವಾಗಿ) (ಸಾಕ್ಷ್ಯವನ್ನು, ಸತ್ಯವನ್ನು) ಶೋಧಿಸಿನೋಡು; ಪರೀಕ್ಷಿಸು; ಸೋಸಿ ತೆಗೆ.
  3. (ಹಡಗನ್ನು, ವ್ಯಕ್ತಿಯನ್ನು, ಮುಖ್ಯವಾಗಿ ಗುಂಡಿನೇಟಿನಿಂದ) ತೂತುಮಾಡು; ತೂತುತೂತಾಗಿಸು.
  4. (ರೂಪಕವಾಗಿ) ಪಟಪಟನೆ ಪ್ರಶ್ನೆಗಳನ್ನು ಹಾಕು; ಪ್ರಶ್ನೆಗಳ ಸುರಿಮಳೆ ಕರೆ.
  5. (ಒಬ್ಬನು ಹೇಳಿದ್ದನ್ನು, ಸಿದ್ಧಾಂತವನ್ನು) ತಪ್ಪೆಂದು ಸಿದ್ಧಮಾಡಿ ಕೊಡು; ಅಪ್ರಮಾಣವೆಂದು ಸ್ಥಾಪಿಸು; ಪ್ರತಿವಾದಗಳಿಂದ ಹೇಳಿಕೆಯನ್ನು, ಸಿದ್ಧಾಂತವನ್ನು ಖಂಡಿಸು.
  6. (ದುರ್ಬಲಗೊಳಿಸುವ, ಅಹಿತಕರವಾದ, ಕೆಡುಕು ಉಂಟುಮಾಡುವ ಗುಣದಿಂದ) ತುಂಬು; ಬಾಧಿಸು: a government riddled with graft ಭ್ರಷ್ಟಾಚಾರದಿಂದ ತುಂಬಿದ ಸರ್ಕಾರ.