See also 2rib
1rib ರಿಬ್‍
ನಾಮವಾಚಕ
    1. ಪಕ್ಕೆಲುಬು; ಬದಿ ಎಲಬು; ಡೊಕ್ಕೆ ಎಲುಬು.
    2. ಪ್ರಾಣಿಯ ಪಕ್ಕೆಲುಬಿನ ಮಾಂಸ.
  1. (ಹಾಸ್ಯ ಪ್ರಯೋಗ ಬೈಬಲ್ಲಿನ ಜೆನೆಸಿಸ್‍ ii. 21- ಹೇಳಿರುವುದರ ಮೇರೆಗೆ) ಹೆಂಡತಿ; ಹೆಂಗಸು.
  2. ಅಡ್ಡಪಟ್ಟಿ; ಬೆನ್ನುಪಟ್ಟಿ; ಬಲಕೊಡುವುದಕ್ಕಾಗಿ, ಆಧಾರಕ್ಕಾಗಿ ಯಾ ಅಲಂಕಾರಕ್ಕಾಗಿ ಇರುವ ಉಬ್ಬು, ಏಣು ಯಾ ಉದ್ದಕ್ಕೂ ಇರುವ ಏಣು.
  3. ಎಲೆಯ ದಿಂಡು; ಗರಿಯ ಕಾಂಡ; ಬೆಟ್ಟದ ಚಾಚು.
  4. ಅದುರಿನ ಎಳೆ; ನೇಗಿಲುಸಾಲುಗಳ ಮಧ್ಯದ ದಿಂಡು; ಮರಳಿನ ಮೇಲಿರುವ ತೆರೆಯ ಉಬ್ಬುಗುರುತು; ಕಸೂತಿಯಲ್ಲಿ ಉಬ್ಬುಗೆರೆ.
  5. ಕಮಾನು ಚಾವಣಿಗೆ ಆಧಾರವಾದ ಕಮಾನು; ಚಾವಣಿ ಕಮಾನುಗಳ ಕೂಡಂಚಿನ ಮೇಲಿನ ಅಂಕಾರದ ಉಬ್ಬು; ಒಳಮಾಳಿಗೆ ಮೊದಲಾದವುಗಳಿಗೆ ಅಡ್ಡಲಾಗಿ ಹಾಕಿರುವ ಏಣು.
  6. (ಹಡಗಿನ) ಒಳ ಕಮಾನು ದಿಮ್ಮಿ, ಮರ; ಅಡ್ಡ ಕಮಾನು ಮರಗಳಲ್ಲಿ ಹಡಗಿನ ಒಡಲನ್ನು ರಚಿಸಿರುವ ಮರದ ಅಡ್ಡದಿಮ್ಮಿಗಳಲ್ಲಿ ಒಂದು.
  7. ಉಬ್ಬು ಹೆಣಿಗೆ; ದಿಂಡು ಹೆಣಿಗೆ; (ಹೆಣಿಗೆ ಕೆಲಸದಲ್ಲಿ) ಉಬ್ಬು ಬರುವಂತೆ ಹಾಕುವ ಸಾದಾ ಮತ್ತು ತಲೆಕೆಳಗು ಹೊಲಿಗೆಗಳನ್ನು ಸಂಯೋಜಿಸಿ, ಸ್ವಲ್ಪ ಸ್ಥಿತಿಸ್ಥಾಪಕ ಶಕ್ತಿಯುಳ್ಳ ಏಣು ಬರುವಂತೆ ಮಾಡುವುದು.
  8. ಛತ್ರಿಯ ಕಡ್ಡಿ; ಛತ್ರಿಯ ಬಟ್ಟೆಗೆ ಆಸರೆಯಾಗಿರುವ, ಕೀಲುಳ್ಳ ಕಡ್ಡಿಗಳಲ್ಲಿ ಒಂದು.
  9. (ವಾಯುಯಾನ) ವಾಯುಫಲಕದ ಒಂದು ಅಂಗ.
ಪದಗುಚ್ಛ
  1. poke one in the ribs (ವಿನೋದ ಮಾಡುತ್ತಾ ಯಾ ಯಾವುದಾದರೂ ವಿಷಯಕ್ಕೆ ಮತ್ತೊಬ್ಬನ ಗಮನವನ್ನು ಸೆಳೆಯುವ ತಮಾಷೆಗಾಗಿ ಯಾ ಹಾಸ್ಯವನ್ನು ಯಾ ವಿನೋದವನ್ನು ತಾನು ಮೆಚ್ಚಿದ್ದೇನೆಂದು ತೋರಿಸುವ) ಒಬ್ಬನ ಪಕ್ಕೆ ತಿವಿ.
  2. rib (or ರಿ) ಒ ಬೆಎ ಎ. (ತಿನ್ನುವುದಕ್ಕಾಗಿ ಉಪಯೋಗಿಸುವ) ದನ ಮೊದಲಾದವುಗಳ ಪಕ್ಕೆಲುಬಿನ ಮಾಂಸದ ತುಂಡು (ಯಾ ತುಂಡುಗಳು).
  3. smite under fifth rib (ಬೈಬ್‍ಲ್‍) ಮರಣಾಂತಕವಾಗಿ ಇರಿ.
  4. spare rib (ಹಂದಿಯ ಮಾಂಸದ ವಿಷಯದಲ್ಲಿ) ಸ್ವಲ್ಪವೇ ಮಾಂಸ ಅಂಟಿಕೊಂಡಿರುವ ಪಕ್ಕೆಲುಬು ಸಾಲಿನ ಮೇಲುಭಾಗ.
  5. sternal (or true) rib ಎದೆಮೂಳೆಗಳಿಗೆ ಸೇರಿಕೊಂಡಿರುವ ಪಕ್ಕೆಲುಬು.
See also 1rib
2rib ರಿಬ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ribbed; ವರ್ತಮಾನ ಕೃದಂತ ribbing).
    1. ಬೆನ್ನುಪಟ್ಟಿಗಳನ್ನು ಒದಗಿಸು, ಕೊಡು.
    2. (ಒಂದಕ್ಕೆ) ಬೆನ್ನುಪಟ್ಟಿಯಾಗಿರು.
  1. ದಿಂಡುಗಳನ್ನು (ಗುರುತು) ಮಾಡು.
  2. ದಿಂಡು ಬಿಟ್ಟು ಉಳು; ಅರೆಯುಳುಮೆ ಮಾಡು; ನೇಗಿಲಸಾಲಿನ ಮಣ್ಣು ತಿರುವಿಬೀಳುವಂತೆ (ಜಮೀನನ್ನು) ಉಳು.
  3. (ಆಡುಮಾತು) ಕೀಟಲೆಮಾಡು; ತಮಾಷೆಮಾಡು; ಹಾಸ್ಯ ಮಾಡು; ಗೇಲಿಮಾಡು.