1revolutionary ರೆವಲೂಷನರಿ
ಗುಣವಾಚಕ
  1. ಕ್ರಾಂತಿಯ; ಕ್ರಾಂತಿಕಾರಕ; ಕ್ರಾಂತಿಗೆ ಸಂಬಂಧಿಸಿದ; ಮುಖ್ಯವಾಗಿ ರಾಜಕೀಯ ಕ್ರಾಂತಿಗೆ, ಸರಕಾರದ ಯಾ ಸ್ಥಿತಿಗತಿಗಳ ಆಮೂಲಾಗ್ರ ಬದಲಾವಣೆಗೆ ಸಂಬಂಧಿಸಿದ, ಪೋಷಕವಾದ.
  2. (Revolutionary) ಅಮೆರಿಕನ್‍ ಮೊದಲಾದ ಕ್ರಾಂತಿಯ, ಕ್ರಾಂತಿಗೆ ಸಂಬಂಧಿಸಿದ.
  3. ಕ್ರಾಂತಿಕಾರಕ; ಮಹತ್ತರವಾದ ಮತ್ತು (ಸಾಮಾನ್ಯವಾಗಿ ತೀವ್ರ ಯಾ ಮೂಲಭೂತ) ಬದಲಾವಣೆಗಳನ್ನು ಒಳಗೊಂಡ ಯಾ ತರುವ: a revolutionary discovery ಕ್ರಾಂತಿಕಾರಕ ಆವಿಷ್ಕಾರ.
  4. ಸುತ್ತುವ; ತಿರುಗುವ; ಪರಿಭ್ರಮಿಸುವ.
2revolutionary ರೆವಲೂಷನರಿ
ನಾಮವಾಚಕ
(ಬಹುವಚನ revolutionaries).
  1. ಕ್ರಾಂತಿವಾದಿ; ಕ್ರಾಂತಿಯ ಯಾ ಆಮೂಲಾಗ್ರ ಬದಲಾವಣೆಯ ಪ್ರತಿಪಾದಕ, ಪ್ರಚಾರಕ.
  2. ಕ್ರಾಂತಿಕಾರಿ; ಬಂಡಾಯಗಾರ; ರಾಜಕೀಯ ಕ್ರಾಂತಿಯನ್ನು ಪ್ರಚೋದಿಸುವವ, ಚಿತಾಯಿಸುವವ ಯಾ ಬೆಂಬಲಿಸುವವ.