See also 2reverend
1reverend ರೆವರಂಡ್‍
ಗುಣವಾಚಕ
  1. (ಮುಖ್ಯವಾಗಿ ಪಾದ್ರಿಯ ಉಪಾಧಿಯಲ್ಲಿ) ಪೂಜ್ಯ; ಪವಿತ್ರ; ಮಾನ್ಯ.
  2. ಪಾದ್ರಿಯ(ಗಳ); ಪಾದ್ರಿ(ಗಳಿ)ಗೆ ಸಂಬಂಧಿಸಿದ; ಪಾದ್ರೀಯ: reverend utterances ಪಾದ್ರೀಯ ಹೇಳಿಕೆಗಳು.
  3. (ಪ್ರಾಚೀನ ಪ್ರಯೋಗ) = reverent.
ಪದಗುಚ್ಛ
  1. Most Reverend ಮಹಾಮಾನ್ಯ (ಆರ್ಚ್‍ಬಿಷಪ್ಪಿನ ಯಾ ಐರ್ಲೆಂಡಿನ ರೋಮನ್‍ ಕ್ಯಾಥೊಲಿಕ್‍ ಬಿಷಪ್ಪಿನ ಉಪಾಧಿ).
  2. Reverend Mother ಪೂಜ್ಯ ಮಹಾಮಾತೆ; ಕ್ರೈಸ್ತ ಸಂನ್ಯಾಸಿನಿಯರ ಮಠದ ಮುಖ್ಯಸ್ಥೆ.
  3. Right Reverend (ಬಿಷಪ್ಪಿನ ಉಪಾದಿಯಾಗಿ) ಪೂರ್ಣಮಾನ್ಯ; ಸರ್ವಮಾನ್ಯ.
  4. the reverend gentleman ಪ್ರಸ್ತುತ (ವಿಷಯಕ್ಕೆ ಸಂಬಂಧಿಸಿದ) ಪಾದ್ರಿ.
  5. Very Reverend (ಡೀನ್‍ ಮೊದಲಾದವರ ಉಪಾಧಿಯಾಗಿ) ಬಹುಮಾನ್ಯ; ಬಹುಪೂಜ್ಯ.
See also 1reverend
2reverend ರೆವರಂಡ್‍
ನಾಮವಾಚಕ

(ಆಡುಮಾತು) (ಸಾಮಾನ್ಯವಾಗಿ ಬಹುವಚನದಲ್ಲಿ) ಪಾದ್ರಿ: reverends or right reverends ಪಾದ್ರಿಗಳು ಮತ್ತು ಬಿಷಪ್ಪರು.