1retrograde ರೆಟ್ರಗ್ರೇಡ್‍
ಗುಣವಾಚಕ
  1. ಹಿಂಗತಿಯ; ಹಿಂಚಲಿಸುವ; ಪ್ರತೀಪಗಾಮಿ; ಹಿಂದಕ್ಕೆ–ಸರಿಯುವ, ಹೋಗುವ, ಬರುವ: retrograde motion ಹಿಂಚಲನ; ಪ್ರತೀಪ ಚಲನೆ.
  2. ಹಿಮ್ಮೆಟ್ಟುವ; ಹಿಂಜರಿಯುವ.
  3. ಹಿಂದಿನ (ಮುಖ್ಯವಾಗಿ ಕೀಳು, ಕೆಳಹೀನ) ಸ್ಥಿತಿಗೆ ಮರಳುವ; ಇಳಿಮುಖವಾಗುವ; ತಿರೋಗತಿ ಹೊಂದುವ; ಅವನತಿ ತರುವ: a retrograde policy ಅವನತಿ ತರುವ ಕ್ರಮ, ಧೋರಣೆ.
  4. ಹಿಂದುಮುಂದಾದ; ತಲೆಕೆಳಗಾದ; ವ್ಯತಿಕ್ರಮದ: in retrograde order ಹಿಂದುಮುಂದಾದ ಕ್ರಮದಲ್ಲಿ.
  5. (ಸಂಗೀತ) ಅವರೋಹಣ ಕ್ರಮದ; ಪ್ರತಿಮುಖವಾದ; ಪ್ರತ್ಯಾವರ್ತಿತ; ಕೊನೆಯ ಸ್ವರದಿಂದ ಮೊದಲ ಸ್ವರಕ್ಕೆ ಹೋಗುವ: a retrograde imitation ಅವರೋಹಣ ಕ್ರಮದ ಪುನರಾವರ್ತನೆ.
  6. (ಖಗೋಳ ವಿಜ್ಞಾನ) ಹಿಮ್ಮುಖ; ವಿಮುಖ; ಪ್ರತೀಪಗಾಮಿ; ಚಲಿಸಬೇಕಾದ ದಿಕ್ಕಿಗೆ ವಿರುದ್ಧವಾದ.
2retrograde ರೆಟ್ರಗ್ರೇಡ್‍
ನಾಮವಾಚಕ
  1. ಭ್ರಷ್ಟ; ಕುಲಗೆಟ್ಟವನು.
  2. ಪ್ರತೀಪಗತಿ; ಹಿಂದಕ್ಕೆ ಹೋಗುವ ಪ್ರವೃತ್ತಿ.
3retrograde ರೆಟ್ರಗ್ರೇಡ್‍
ಅಕರ್ಮಕ ಕ್ರಿಯಾಪದ
  1. ಹಿಂಜರಿ; ಹಿಮ್ಮೆಟ್ಟು; ಹಿಂದಕ್ಕೆ ಹೋಗು ಯಾ ಬರು.
  2. ಇಳಿಮುಖವಾಗು; ಅವನತಿ ಹೊಂದು; ಹಿಂದಿನ (ಕೆಳ)ಸ್ಥಿತಿಗೆ ಮರಳು.
  3. (ಖಗೋಳ ವಿಜ್ಞಾನ) ವಿಮುಖದಿಕ್ಕಿಗೆ, ವಿಮುಖವಾಗಿ–ಚಲಿಸು.