1retrograde ರೆಟ್ರಗ್ರೇಡ್‍
ಗುಣವಾಚಕ
  1. ಹಿಂಗತಿಯ; ಹಿಂಚಲಿಸುವ; ಪ್ರತೀಪಗಾಮಿ; ಹಿಂದಕ್ಕೆ–ಸರಿಯುವ, ಹೋಗುವ, ಬರುವ: retrograde motion ಹಿಂಚಲನ; ಪ್ರತೀಪ ಚಲನೆ.
  2. ಹಿಮ್ಮೆಟ್ಟುವ; ಹಿಂಜರಿಯುವ.
  3. ಹಿಂದಿನ (ಮುಖ್ಯವಾಗಿ ಕೀಳು, ಕೆಳಹೀನ) ಸ್ಥಿತಿಗೆ ಮರಳುವ; ಇಳಿಮುಖವಾಗುವ; ತಿರೋಗತಿ ಹೊಂದುವ; ಅವನತಿ ತರುವ: a retrograde policy ಅವನತಿ ತರುವ ಕ್ರಮ, ಧೋರಣೆ.
  4. ಹಿಂದುಮುಂದಾದ; ತಲೆಕೆಳಗಾದ; ವ್ಯತಿಕ್ರಮದ: in retrograde order ಹಿಂದುಮುಂದಾದ ಕ್ರಮದಲ್ಲಿ.
  5. (ಸಂಗೀತ) ಅವರೋಹಣ ಕ್ರಮದ; ಪ್ರತಿಮುಖವಾದ; ಪ್ರತ್ಯಾವರ್ತಿತ; ಕೊನೆಯ ಸ್ವರದಿಂದ ಮೊದಲ ಸ್ವರಕ್ಕೆ ಹೋಗುವ: a retrograde imitation ಅವರೋಹಣ ಕ್ರಮದ ಪುನರಾವರ್ತನೆ.
  6. (ಖಗೋಳ ವಿಜ್ಞಾನ) ಹಿಮ್ಮುಖ; ವಿಮುಖ; ಪ್ರತೀಪಗಾಮಿ; ಚಲಿಸಬೇಕಾದ ದಿಕ್ಕಿಗೆ ವಿರುದ್ಧವಾದ.