See also 2retort  3retort  4retort
1retort ರಿಟಾರ್ಟ್‍
ಸಕರ್ಮಕ ಕ್ರಿಯಾಪದ
  1. (ತೇಜೋವಧೆ, ಅಪಮಾನ, ಆಕ್ರಮಣ ಇವಕ್ಕೆ ಅದೇ ರೂಪದಲ್ಲಿ) ಪ್ರತೀಕಾರಮಾಡು; (ಮುಯ್ಯಿಗೆ) ಮುಯ್ಯಿ ತೀರಿಸು.
  2. (ತೊಂದರೆ, ಅಪಾದನೆ, ವ್ಯಂಗ್ಯ, ಅಪಹಾಸ್ಯ ಮೊದಲಾದವನ್ನು ಮಾಡಿದವನ ಮೇಲೆಯೇ) ಹಿಂದಿರುಗಿಸು; ಮರಳಿಸು.
  3. (ಒಬ್ಬನ ವಾದವನ್ನು ಅವನಿಗೇ) ಪ್ರತಿಕೂಲವಾಗುವಂತೆ ಮಾಡು; ವಿರುದ್ಧವಾಗಿ ಹಿಂದಿರುಗಿಸು.
  4. ಮಾರ್ನುಡಿ; ಚಮತ್ಕಾರದ ಪ್ರತ್ಯುತ್ತರವಾಗಿ ಯಾ ಪ್ರತ್ಯಾಪಾದನೆಯಾಗಿ ಯಾ ಪ್ರತಿವಾದವಾಗಿ–ನುಡಿ, ಉತ್ತರ ಹೇಳು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ) ಹರಿತವಾಗಿ ಮಾರ್ನುಡಿ; ಚುಚ್ಚುವಂತೆ ಎದುರುತ್ತರ ಕೊಡು.

See also 1retort  3retort  4retort
2retort ರಿಟಾರ್ಟ್‍
ನಾಮವಾಚಕ
  1. ಮಾರ್ನುಡಿ; ಮುಯ್ಯಿನುಡಿ; ಚುಚ್ಚು ಉತ್ತರ; ಹರಿತವಾದ–ಪ್ರತ್ಯುತ್ತರ, ಎದುರುತ್ತರ.
  2. ಪ್ರತ್ಯಾರೋಪ; ಪ್ರತ್ಯಾಪಾದನೆ; ಆಪಾದನೆಯನ್ನು, ವಾದವನ್ನು ಮಾಡಿದವನ ಮೇಲೆಯೇ ತಿರುಗಿಸುವುದು.
  3. (ಮುಯ್ಯಿಗೆ) ಮುಯ್ಯಿ; ಪ್ರತೀಕಾರ.
See also 1retort  2retort  4retort
3retort ರಿಟಾರ್ಟ್‍
ನಾಮವಾಚಕ
  1. ಬಕಪಾತ್ರೆ; ದ್ರವಗಳನ್ನು ಬಟ್ಟಿಯಿಳಿಸಲು ಬಳಸುವ, ಕೆಳಗಿನ ಉದ್ದನೆಯ ಕತ್ತುಳ್ಳ, (ಸಾಮಾನ್ಯವಾಗಿ ಗಾಜಿನ) ಪಾತ್ರೆ. Figure: retort-1
  2. ಬಟ್ಟಿಪಾತ್ರೆ; ಬಟ್ಟಿಹಂಡೆ; ಪಾದರಸವನ್ನು ಶುದ್ಧಿಮಾಡವುದಕ್ಕೆ ಅನಿಲದ ಮತ್ತು ಉಕ್ಕಿನ ತಯಾರಿಕೆಯಲ್ಲಿ ಪದಾರ್ಥಗಳನ್ನು ಕಾಯಿಸಲು ಬಳಸುವ ಹಲವು ತರದ ಪಾತ್ರೆ.
See also 1retort  2retort  3retort
4retort ರಿಟಾರ್ಟ್‍
ಸಕರ್ಮಕ ಕ್ರಿಯಾಪದ

(ಪಾದರಸವನ್ನು) ಬಟ್ಟಿಇಳಿಸು; ಬಟ್ಟಿಪಾತ್ರೆಯಲ್ಲಿ ಕಾಯಿಸಿ ಶುದ್ಧಿಗೊಳಿಸು.