See also 2retort  3retort  4retort
1retort ರಿಟಾರ್ಟ್‍
ಸಕರ್ಮಕ ಕ್ರಿಯಾಪದ
  1. (ತೇಜೋವಧೆ, ಅಪಮಾನ, ಆಕ್ರಮಣ ಇವಕ್ಕೆ ಅದೇ ರೂಪದಲ್ಲಿ) ಪ್ರತೀಕಾರಮಾಡು; (ಮುಯ್ಯಿಗೆ) ಮುಯ್ಯಿ ತೀರಿಸು.
  2. (ತೊಂದರೆ, ಅಪಾದನೆ, ವ್ಯಂಗ್ಯ, ಅಪಹಾಸ್ಯ ಮೊದಲಾದವನ್ನು ಮಾಡಿದವನ ಮೇಲೆಯೇ) ಹಿಂದಿರುಗಿಸು; ಮರಳಿಸು.
  3. (ಒಬ್ಬನ ವಾದವನ್ನು ಅವನಿಗೇ) ಪ್ರತಿಕೂಲವಾಗುವಂತೆ ಮಾಡು; ವಿರುದ್ಧವಾಗಿ ಹಿಂದಿರುಗಿಸು.
  4. ಮಾರ್ನುಡಿ; ಚಮತ್ಕಾರದ ಪ್ರತ್ಯುತ್ತರವಾಗಿ ಯಾ ಪ್ರತ್ಯಾಪಾದನೆಯಾಗಿ ಯಾ ಪ್ರತಿವಾದವಾಗಿ–ನುಡಿ, ಉತ್ತರ ಹೇಳು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ) ಹರಿತವಾಗಿ ಮಾರ್ನುಡಿ; ಚುಚ್ಚುವಂತೆ ಎದುರುತ್ತರ ಕೊಡು.