See also 2respect
1respect ರಿಸ್ಟೆಕ್ಟ್‍
ನಾಮವಾಚಕ
  1. (ಯಾವುದೇ ವಿಷಯದೊಡನೆ ಇರುವ) ಸಂಬಂಧ: the terms laid down have respect to the aim ಇಲ್ಲಿ ವಿಧಿಸಿರುವ ಷರತ್ತುಗಳು ಮುಂದಿರುವ ಗುರಿಗೆ ಸಂಬಂಧಪಟ್ಟುವು.
  2. (ಯಾವುದೇ ವಿಷಯಕ್ಕೆ ಕೊಡುವ) ಗಮನ; ಲಕ್ಷ್ಯ: I find it without respect to the results ಪರಿಣಾಮಗಳ ಕಡೆ ಗಮನ ಕೊಡದೆಯೇ ನಾನದನ್ನು ಮಾಡಿದೆ.
    1. ಅಂಶ; ವಿವರ: in all respects ಎಲ್ಲ ಅಂಶಗಳಲ್ಲೂ.
    2. ವಿಷಯ; ಬಾಬು: in respect of style ಶೈಲಿಯ ವಿಷಯದಲ್ಲಿ.
  3. (ಪ್ರಾಚೀನ ಪ್ರಯೋಗ) ಎಣಿಕೆ; ಪರಿಗಣನೆ: the matter should not be studied in respect that it is expensive ಈ ವಿಷಯವನ್ನು ಅದು ಬಹಳ ಭಾರಿ ಖರ್ಚಿನ ಬಾಬೆಂಬ ಎಣಿಕೆಯಿಂದ (ಪರಿಗಣನೆಯಿಂದ) ಪರೀಶೀಲಿಸಬಾರದು.
  4. ಮನ್ನಣೆ; ಮಾನ್ಯತೆ; ಗೌರವ; ಮಾರ್ಯದೆ: he is held in high respect ಆತನಿಗೆ ಜನ ವಿಶೇಷ ಗೌರವ ಕೊಡುತ್ತಾರೆ.
  5. (ಬಹುವಚನದಲ್ಲಿ) (ಉಪಚಾರೋಕ್ತಿಯಾಗಿ, ಲೋಕ ಮರ್ಯಾದೆಗಾಗಿ ಮುಖತಃ ಯಾ ಲಿಖಿತ ರೂಪದಲ್ಲಿ ಸಲ್ಲಿಸುವ) ವಂದನೆಗಳು; ಅಭಿವಂದನೆಗಳು; ಪ್ರಣಾಮಗಳು; ನಮಸ್ಕಾರಗಳು: please give him my respects ದಯೆಮಾಡಿ ಆತನಿಗೆ ನನ್ನ ಅಭಿವಂದನೆಗಳನ್ನು ತಿಳಿಸು. he went to pay his respects to the professor ಅವನು ಪ್ರಾಧ್ಯಾಪಕರಿಗೆ ಪ್ರಣಾಮಗಳನ್ನು ಸಲ್ಲಿಸಲು ಹೋದ.
ಪದಗುಚ್ಛ
  1. in respect of–ಕ್ಕೆ ಸಂಬಂಧಿಸಿದಂತೆ; –ರ ವಿಷಯದಲ್ಲಿ.
  2. in respect that ಏಕೆಂದರೆ.
  3. with (or with all due) respect (ಬೇರೆಯವರ ಅಭಿಪ್ರಾಯಗಳನ್ನು ಒಪ್ಪದಿರುವುದನ್ನು ಸೂಚಿಸುವುದಕ್ಕೆ ಮುಂಚೆ ಹೇಳುವ ಮಾತು) ಗೌರವಪೂರ್ವಕವಾಗಿ.
See also 1respect
2respect ರಿಸ್ಪೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ಯಾವುದೇ ವಿಷಯದ ಮೇಲೆ) ಗಮನ ಇಡು; ಲಕ್ಷ್ಯ ಇಡು: the archer respects his mark ಬಿಲ್ಲುಗಾರ ತನ್ನ ಗುರಿಯ ಮೇಲೆ ಲಕ್ಷ್ಯ ಇಡುತ್ತಾನೆ.
  2. (ವಿರಳ ಪ್ರಯೋಗ) ಸಂಬಂಧಿಸಿರು; ಕುರಿತದ್ದಾಗಿರು.
  3. ಗೌರವತೋರು; ಗೌರವ ಭಾವದಿಂದ ಕಾಣು.
  4. ಗೌರವಿಸು; ಮಧ್ಯಪ್ರವೇಶ ಮಾಡದಿರು; ತೊಂದರೆ, ಅವಮಾನ, ಹಾನಿ, ಅವಹೇಳನ ಮಾಡದಿರು.
  5. ದಾಕ್ಷಿಣ್ಯದಿಂದ ವರ್ತಿಸು.
  6. (ಒಬ್ಬನನ್ನು, ಅವನ ಭಾವನೆ ಮೊದಲಾದವನ್ನು) ರೇಗಿಸದಿರು; ನೋಯಿಸದಿರು; ಪ್ರಲೋಭನೆಗೊಳಪಡಿಸದಿರು ಯಾ ಕೆಡಿಸದಿರು.