See also 2respect
1respect ರಿಸ್ಟೆಕ್ಟ್‍
ನಾಮವಾಚಕ
  1. (ಯಾವುದೇ ವಿಷಯದೊಡನೆ ಇರುವ) ಸಂಬಂಧ: the terms laid down have respect to the aim ಇಲ್ಲಿ ವಿಧಿಸಿರುವ ಷರತ್ತುಗಳು ಮುಂದಿರುವ ಗುರಿಗೆ ಸಂಬಂಧಪಟ್ಟುವು.
  2. (ಯಾವುದೇ ವಿಷಯಕ್ಕೆ ಕೊಡುವ) ಗಮನ; ಲಕ್ಷ್ಯ: I find it without respect to the results ಪರಿಣಾಮಗಳ ಕಡೆ ಗಮನ ಕೊಡದೆಯೇ ನಾನದನ್ನು ಮಾಡಿದೆ.
    1. ಅಂಶ; ವಿವರ: in all respects ಎಲ್ಲ ಅಂಶಗಳಲ್ಲೂ.
    2. ವಿಷಯ; ಬಾಬು: in respect of style ಶೈಲಿಯ ವಿಷಯದಲ್ಲಿ.
  3. (ಪ್ರಾಚೀನ ಪ್ರಯೋಗ) ಎಣಿಕೆ; ಪರಿಗಣನೆ: the matter should not be studied in respect that it is expensive ಈ ವಿಷಯವನ್ನು ಅದು ಬಹಳ ಭಾರಿ ಖರ್ಚಿನ ಬಾಬೆಂಬ ಎಣಿಕೆಯಿಂದ (ಪರಿಗಣನೆಯಿಂದ) ಪರೀಶೀಲಿಸಬಾರದು.
  4. ಮನ್ನಣೆ; ಮಾನ್ಯತೆ; ಗೌರವ; ಮಾರ್ಯದೆ: he is held in high respect ಆತನಿಗೆ ಜನ ವಿಶೇಷ ಗೌರವ ಕೊಡುತ್ತಾರೆ.
  5. (ಬಹುವಚನದಲ್ಲಿ) (ಉಪಚಾರೋಕ್ತಿಯಾಗಿ, ಲೋಕ ಮರ್ಯಾದೆಗಾಗಿ ಮುಖತಃ ಯಾ ಲಿಖಿತ ರೂಪದಲ್ಲಿ ಸಲ್ಲಿಸುವ) ವಂದನೆಗಳು; ಅಭಿವಂದನೆಗಳು; ಪ್ರಣಾಮಗಳು; ನಮಸ್ಕಾರಗಳು: please give him my respects ದಯೆಮಾಡಿ ಆತನಿಗೆ ನನ್ನ ಅಭಿವಂದನೆಗಳನ್ನು ತಿಳಿಸು. he went to pay his respects to the professor ಅವನು ಪ್ರಾಧ್ಯಾಪಕರಿಗೆ ಪ್ರಣಾಮಗಳನ್ನು ಸಲ್ಲಿಸಲು ಹೋದ.
ಪದಗುಚ್ಛ
  1. in respect of–ಕ್ಕೆ ಸಂಬಂಧಿಸಿದಂತೆ; –ರ ವಿಷಯದಲ್ಲಿ.
  2. in respect that ಏಕೆಂದರೆ.
  3. with (or with all due) respect (ಬೇರೆಯವರ ಅಭಿಪ್ರಾಯಗಳನ್ನು ಒಪ್ಪದಿರುವುದನ್ನು ಸೂಚಿಸುವುದಕ್ಕೆ ಮುಂಚೆ ಹೇಳುವ ಮಾತು) ಗೌರವಪೂರ್ವಕವಾಗಿ.