See also 2resist
1resist ರಿಸಿಸ್ಟ್‍
ಸಕರ್ಮಕ ಕ್ರಿಯಾಪದ
  1. (ಯಾವುದರದೇ ಕ್ರಿಯೆ ಯಾ ಪರಿಣಾಮವನ್ನು) ತಡೆ; ತಡೆದು ನಿಲ್ಲಿಸು; ನಿರೋಧಿಸು.
  2. ಗತಿ ಯಾ ಪ್ರಗತಿಯನ್ನು ತಡೆ; ತಲುಪದಂತೆ, ಹೋಗದಂತೆ–ಮಾಡು.
  3. (ಸುಖ, ಪ್ರಲೋಭನೆ ಮೊದಲಾದವನ್ನು) ನಿಗ್ರಹಿಸು; ದೂರಮಾಡು; (ಅವಕ್ಕೆ) ಸಗ್ಗದಿರು, ಬಗ್ಗದಿರು, ಬಲಿಯಾಗದಿರು.
  4. ವಿರೋಧಿಸು; ಎದುರಿಸು; ತಡೆಯಲು ಪ್ರಯತ್ನಿಸು; ಪಾಲಿಸಲು ನಿರಾಕರಿಸು: resist arrest ದಸ್ತಗಿರಿಯನ್ನು ವಿರೋಧಿಸು. resist an attack ದಾಳಿಯನ್ನು ಎದುರಿಸು.
ಅಕರ್ಮಕ ಕ್ರಿಯಾಪದ

ವಿರೋಧಿಸು; ಪ್ರತಿಭಟಿಸು; ವಿರೋಧ ಒಡ್ಡು; ಆಜ್ಞೆ ಮೊದಲಾದವುಗಳಂತೆ ವರ್ತಿಸಲು ನಿರಾಕರಿಸು: he resisted in vain ಅವನು ವ್ಯರ್ಥವಾಗಿ ಪ್ರತಿಭಟಿಸಿದ.

ಪದಗುಚ್ಛ

cannot (or could not etc.) resist ತಡೆಯಲು ಸಾಧ್ಯವಿಲ್ಲವಾಗಿರು; ತಡೆಯಲಾಗದಿರು:

  1. ಬದ್ಧನಾಗಿರು ಯಾ ತೀವ್ರ ಒಲವು ಹೊಂದಿರು: cannot resist taunting me about ಅದರ ವಿಷಯ ನನ್ನನ್ನು ಛೇಡಿಸದೆ ಇರಲಾಗುವುದಿಲ್ಲ.
  2. ಖಂಡಿತವಾಗಿ ವಿನೋದ ಪಡೆ, ಆಕರ್ಷಿತನಾಗು ಮೊದಲಾದವು: cannot resist his jokes ಅವನ ಹಾಸ್ಯೋಕ್ತಿಗಳನ್ನು ಕೇಳಿ ನಗು ತಡೆಯಲಾರೆ. cannot resist her fair looks ಅವಳ ಸುಂದರರೂಪಕ್ಕೆ ಮಾರುಹೋಗದಿರಲಾರೆ.
See also 1resist
2resist ರಿಸಿಸ್ಟ್‍
ನಾಮವಾಚಕ

ಪ್ರತಿರೋಧಕ; ನಿರೋಧಕ; ರಂಗು ಹತ್ತಕೂಡದ ಕ್ಯಾಲಿಕೋ ಬಟ್ಟೆಯ ಭಾಗಗಳಿಗೆ ಯಾ ಮೆರಗು ಹತ್ತಬಾರದ ಮಣ್ಣಿನ ಪಾತ್ರೆಗಳ ಭಾಗಗಳಿಗೆ ಬಳಿಯುವ ನಿರೋಧಕ ಪದಾರ್ಥದ ರಕ್ಷಕ ಲೇಪ, ಕಾಪು ಬಳಿತ.