See also 2resident
1resident ರೆಸಿಡಂಟ್‍
ಗುಣವಾಚಕ
  1. ಇರುವ; ವಾಸಿಸುವ; ವಾಸಮಾಡುತ್ತಿರುವ: the resident population (ಹೆಸರಿಸಿದ ಸ್ಥಳದಲ್ಲಿ) ವಾಸಿಸುತ್ತಿರುವ ಜನ. residents ವಾಸಿಗಳು. resident abroad ವಿದೇಶವಾಸಿ; ವಿದೇಶದಲ್ಲಿ ವಾಸಿಸುತ್ತಿರುವ.
  2. (ಪಕ್ಷಿಗಳು ಮೊದಲಾದವುಗಳ ವಿಷಯದಲ್ಲಿ) ವಲಸೆ ಹೋಗದ; ದೇಶಾಂತರಗಾಮಿಯಲ್ಲದ.
    1. (ನಿಗದಿಯಾದ) ಸ್ಥಳದಲ್ಲೇ ಇರಬೇಕಾದ, ವಾಸಿಸಲೇಬೇಕಾದ: resident surgeon ರೆಸಿಡೆಂಟ್‍ ಸರ್ಜನ್‍; ನಿಗದಿಯಾದ ಅಧಿಕೃತ ಗೃಹದಲ್ಲೇ ವಾಸಿಸಬೇಕಾದ ಶಸ್ತ್ರವೈದ್ಯ.
    2. ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಯತವಾಗಿ ಕೆಲಸಮಾಡುತ್ತಿರುವ.
    1. ಸ್ವಭಾವಗತವಾಗಿರುವ; ವ್ಯಕ್ತಿಯಲ್ಲೇ ಯಾ ವಸ್ತುವಿನಲ್ಲೇ ಸಹಜವಾಗಿ ಇರುವ, ನೆಲೆಸಿರುವ: a right resident in the community ಆ ಸಮುದಾಯದ ಸಹಜ ಹಕ್ಕು; ಆ ಜಾತಿಯಲ್ಲಿ ಯಾ ಸಮುದಾಯದಲ್ಲಿ ನೆಲಸಿರುವ ಹಕ್ಕು.
    2. ಅಂತರ್ಗತವಾಗಿರುವ: powers of sensation resident in the nerves ನರಕಗಳಲ್ಲಿ ನೆಲಸಿರುವ ಸಂವೇದನ ಶಕ್ತಿಗಳು.
See also 1resident
2resident ರೆಸಿಡಂಟ್‍
ನಾಮವಾಚಕ
  1. (ಒಂದು ಊರು, ನೆರೆಹೊರೆ, ಮನೆ ಮೊದಲಾದವುಗಳ) ನಿವಾಸಿ; ಕಾಯಮ್ಮಾಗಿ ಇರುವವನು; ಸ್ಥಳವಾಸಿ; ಸ್ಥಳವಂದಿಗ.
  2. ರೆಸಿಡಂಟ್‍:
    1. (ಚರಿತ್ರೆ) (ಭಾರತದಲ್ಲಿ ವೈಸ್‍ರಾಯ್‍ ಹಾಗೂ ಗವರ್ನರ್‍ ಜನರಲ್ಲಿನ ಪ್ರತಿನಿಧಿಯಾಗಿ ದೇಶೀಯ ಸಂಸ್ಥಾನದಲ್ಲಿರುತ್ತಿದ್ದ ಬ್ರಿಟಿಷ್‍) ರೆಸಿಡಂಟ್‍.
    2. (ಬ್ರಿಟಿಷರಿಗೆ) ಅರೆ ಅಧೀನರಾಜ್ಯದ ಬ್ರಿಟಿಷ್‍ ಪ್ರತಿನಿಧಿ.
  3. ವಲಸೆ ಹೋಗುವ ಜಾತಿಯದಲ್ಲದ ಪಕ್ಷಿ.
  4. ಹೋಟೆಲು ಮೊದಲಾದವುಗಳಲ್ಲಿ ರಾತ್ರಿ ತಂಗುವ ಅತಿಥಿ.
  5. (ಅಮೆರಿಕನ್‍ ಪ್ರಯೋಗ) ಅಸ್ಪತ್ರೆಯೊಂದರಲ್ಲಿ ಮೇಲ್ವಿಚಾರಣೆಗೊಳಪಟ್ಟ ತಜ್ಞ ವೈದ್ಯಕೀಯ ಅಭ್ಯಾಸ ನಡೆಸುತ್ತಿರುವ ವೈದ್ಯಕೀಯ ಪದವೀಧರ.
  6. ವಿದೇಶದಲ್ಲಿರುವ (ರಹಸ್ಯ) ಸುದ್ದಿ ಸಂಗ್ರಹಿಸುವ ಏಜಂಟು.