See also 1resident
2resident ರೆಸಿಡಂಟ್‍
ನಾಮವಾಚಕ
  1. (ಒಂದು ಊರು, ನೆರೆಹೊರೆ, ಮನೆ ಮೊದಲಾದವುಗಳ) ನಿವಾಸಿ; ಕಾಯಮ್ಮಾಗಿ ಇರುವವನು; ಸ್ಥಳವಾಸಿ; ಸ್ಥಳವಂದಿಗ.
  2. ರೆಸಿಡಂಟ್‍:
    1. (ಚರಿತ್ರೆ) (ಭಾರತದಲ್ಲಿ ವೈಸ್‍ರಾಯ್‍ ಹಾಗೂ ಗವರ್ನರ್‍ ಜನರಲ್ಲಿನ ಪ್ರತಿನಿಧಿಯಾಗಿ ದೇಶೀಯ ಸಂಸ್ಥಾನದಲ್ಲಿರುತ್ತಿದ್ದ ಬ್ರಿಟಿಷ್‍) ರೆಸಿಡಂಟ್‍.
    2. (ಬ್ರಿಟಿಷರಿಗೆ) ಅರೆ ಅಧೀನರಾಜ್ಯದ ಬ್ರಿಟಿಷ್‍ ಪ್ರತಿನಿಧಿ.
  3. ವಲಸೆ ಹೋಗುವ ಜಾತಿಯದಲ್ಲದ ಪಕ್ಷಿ.
  4. ಹೋಟೆಲು ಮೊದಲಾದವುಗಳಲ್ಲಿ ರಾತ್ರಿ ತಂಗುವ ಅತಿಥಿ.
  5. (ಅಮೆರಿಕನ್‍ ಪ್ರಯೋಗ) ಅಸ್ಪತ್ರೆಯೊಂದರಲ್ಲಿ ಮೇಲ್ವಿಚಾರಣೆಗೊಳಪಟ್ಟ ತಜ್ಞ ವೈದ್ಯಕೀಯ ಅಭ್ಯಾಸ ನಡೆಸುತ್ತಿರುವ ವೈದ್ಯಕೀಯ ಪದವೀಧರ.
  6. ವಿದೇಶದಲ್ಲಿರುವ (ರಹಸ್ಯ) ಸುದ್ದಿ ಸಂಗ್ರಹಿಸುವ ಏಜಂಟು.