See also 2reserve
1reserve ರಿಸರ್ವ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು ಮುಂದೆಂದೋ ಬಳಸಲು ಯಾ ಅನುಭೋಗಿಸಲು, ಕೆಲಸವನ್ನು ಮುಂದೆಂದೋ ಮಾಡಲು) ಕಾದಿಟ್ಟಿರು; ಉಳಿಸಿಟ್ಟಿರು.
    1. (ತನಗಾಗಿಯೋ ಬೇರೆಯವರಿಗಾಗಿಯೋ ನಿಗದಿಮಾಡಿಕೊಂಡು ನಾಟಕಶಾಲೆ, ವಾಹನ ಮೊದಲಾದವುಗಳಲ್ಲಿ ಸ್ಥಳಾವಕಾಶ ಮೊದಲಾದವನ್ನು) ಕಾದಿರಿಸಿಕೊ: reserved seats (ನಾಟಕಶಾಲೆ ಮೊದಲಾದವುಗಳಲ್ಲಿ) ಕಾದಿಟ್ಟ ಸ್ಥಳಾವಕಾಶ, ಸೀಟುಗಳು.
    2. (ಕಾಯಿದೆಯ ಮೂಲಕ ವ್ಯಕ್ತಿಗಾಗಿಯೋ ವರ್ಗಕ್ಕಾಗಿಯೋ ಸವಲತ್ತು, ಹಕ್ಕು ಮೊದಲಾದವನ್ನು) ಮೀಸಲಾಗಿರಿಸಿಕೊ; ಕಾದಿರಿಸಿಕೊ.
  2. (ಮುಖ್ಯವಾಗಿ ಭೂತಕೃದಂತದಲ್ಲಿ) (ವಿಧಿಯ, ಹಣೆಬರಹದ ವಿಷಯದಲ್ಲಿಯಾವುದೇ ಗತಿಗಾಗಿ) ಕಾದಿಟ್ಟಿರು: reserved for disgrace ಅವಮಾನಕ್ಕಾಗಿ (ವಿಧಿಯು) ಕಾದಿಟ್ಟಿದ್ದ. reserved for death (ಅಕಾಲ) ಮೃತ್ಯುವಿಗಾಗಿ (ವಿಧಿಯು) ಕಾದಿಟ್ಟಿದ್ದ.
  3. (ಯಾವುದೇ ಉಪಯೋಗಕ್ಕಾಗಿ ಇಲ್ಲವೆ ಗತಿಗಾಗಿ) ತೆಗೆದಿಡು; ಪ್ರತ್ಯೇಕಿಸಿಡು; ಮುಡಿಪಾಗಿ, ಮೀಸಲಾಗಿ ಇಡು.
ಪದಗುಚ್ಛ
  1. reserve oneself for ಸ್ವಶಕ್ತಿಯನ್ನು (ಈಗಲೇ ವ್ಯಯಮಾಡದೆ ಸಕಾಲದಲ್ಲಿ ಬಳಸಲು) ಉಳಿಸಿಟ್ಟುಕೊ; ಕೂಡಿಸಿಟ್ಟುಕೊ.
  2. reserve list ಕಾದಿರಿಸಿದ ಪಟ್ಟಿ:
    1. ಸಂಗ್ರಾಮಸೇವೆಯಿಂದ ನಿವೃತ್ತಿಗೊಳಿಸಿದ, ಆದರೆ ಮತ್ತೆ ಸೇವೆಗಾಗಿ ಕರೆದುಕೊಳ್ಳಬಹುದಾದ ನೌಕಾಧಿಕಾರಿಗಳ ಪಟ್ಟಿ.
    2. (ಯಾವುದೇ ವರ್ಗಕ್ಕಾಗಿ ಹುದ್ದೆಗಳು, ಸವಲತ್ತುಗಳು, ಹಕ್ಕುಗಳು ಮೊದಲಾದವನ್ನು) ಕಾದಿರಿಸಿದ ಪಟ್ಟಿ; ಮೀಸಲು ವರ್ಗಪಟ್ಟಿ.
See also 1reserve
2reserve ರಿಸರ್ವ್‍
ನಾಮವಾಚಕ
  1. (ಮುಂದೆಂದೋ ಬಳಸಲು) ಕಾದಿಟ್ಟ, ಕಾಪಿಟ್ಟ, ಕೂಡಿಟ್ಟ ಯಾವುದೇ ವಸ್ತು; ಮೀಸಲು ಹಣ, ವಸ್ತು ಸಂಚಯ ಮೊದಲಾದದ್ದು: banker’s reserve (ಒದಗಬಹುದಾದ ಕೋರಿಕೆಗಳನ್ನು ಸಲ್ಲಿಸಲಿಕ್ಕಾಗಿ) ತೆಗೆದಿಟ್ಟಿರುವ ಬ್ಯಾಂಕರನ ಆಪದ್ಧನ. he has a great reserve of energy ಅವನಲ್ಲಿ ಅಪಾರವಾದ ಶಕ್ತಿಸಂಚಯ ಇದೆ; ಅವನು ತುಂಬ ಶಕ್ತಿಯನ್ನು ಕೂಡಿಟ್ಟುಕೊಂಡಿದ್ದಾನೆ.
  2. (ಸೈನ್ಯ) (ಏಕವಚನ ಯಾ ಬಹುವಚನದಲ್ಲಿ) ಕೈಗಾವಲು ಸೈನ್ಯ; ಮೀಸಲುಪಡೆ:
    1. ಈಗಲೇ ಹೋರಾಟದಲ್ಲಿ ತೊಡಗಿಸದೆ, ಕಾದುತ್ತಿರುವ ಪಡೆಗಳ ಬಲ ಹೆಚ್ಚಿಸಲು ಯಾ ಹಿಮ್ಮೆಟ್ಟುವ ಪಡೆಗಳನ್ನು ಕಾಯಲು ಕಾದಿಟ್ಟಿರುವ ವಿಶೇಷ ಪಡೆ.
    2. ಆಪತ್ಕಾಲದಲ್ಲಿ ಕರೆಯಬಹುದಾದ ಭೂ, ನೌಕಾ, ವಾಯು ಸೇನೆಗಳಿಗೆ ಸೇರಿರದ ಪಡೆ.
    3. ಕೈಗಾವಲು ಪಡೆಯ ಸೈನಿಕ.
  3. (ಆಟಗಳ ಪಂದ್ಯಗಳಲ್ಲಿ, ಬದಲಿ ಆಟಗಾರ ಬೇಕಾದಾಗ ಬಳಸಿಕೊಳ್ಳಲು ಆಯ್ಕೆಮಾಡಿಕೊಂಡಿರುವ ಹೆಚ್ಚಿಗೆಯ) ಕೈಗಾವಲು ಆಟಗಾರ.
  4. ಕೈಗಾವಲು; ಕೈಗಾವಲು ವಸ್ತು; ದಾಸ್ತಾನು: amount in reserve ಕೈಗಾವಲು ಹಣ, ಮೊತ್ತ. stock in reserve ಕೈಗಾವಲು ದಾಸ್ತಾನು, ಸಂಚಯ; ಸಮಯ ಬಂದಾಗ ಬಳಸಿಕೊಳ್ಳಲು ಇಟ್ಟುಕೊಂಡಿರುವ ಮೊಬಲಗು ಯಾ ಸರಕಿನ ರಾಶಿ.
  5. (ಯಾವುದೇ ವಿಶೇಷ ಉದ್ದೇಶಕ್ಕಾಗಿ, ಉಪಯೋಗಕ್ಕಾಗಿ ಪ್ರತ್ಯೇಕಿಸಿ) ಕಾಯ್ದಿಟ್ಟಿರುವ, ಮೀಸಲು–ಪ್ರದೇಶ; ಕಾವಲು: game reserve ಬೇಟೆಯ ಕಾವಲು; ಶಿಕಾರಿಕಾವಲು.
  6. (ವಸ್ತುಪ್ರದರ್ಶನಗಳಲ್ಲಿ ಸ್ಪರ್ಧೆಗಿಟ್ಟಿರುವ ಬೇರಾವುದೇ ವಸ್ತುವು ಅನರ್ಹವೆಂದು ತೀರ್ಮಾನವಾದರೆ ಈ ವಸ್ತುವಿಗೆ ಬಹುಮಾನ ದೊರೆಯುತ್ತದೆ ಎಂದು ಸೂಚಿಸುವ) ವೈಶಿಷ್ಟ್ಯ ಲಾಂಛನ.
  7. (ಯಾವುದೇ ಹೇಳಿಕೆಗೆ ಯಾ ಸಂಕಲ್ಪಕ್ಕೆ ತಗುಲಿಸಿರುವ) ಷರತ್ತು; ಪರಿಮಿತಿ; ತಡೆ; ಅಭ್ಯಂತರ; ವಿನಾಯಿತಿ ಯಾ ಆಕ್ಷೇಪ: I accept your statement without reserve ನಿನ್ನ ಹೇಳಿಕೆಯನ್ನು ನಾನು ಯಾವ ಅಭ್ಯಂತರವೂ ಇಲ್ಲದೆ ಒಪ್ಪಿಕೊಳ್ಳುತ್ತೇನೆ. sale or auction without reserve (ನಿಗದಿಮಾಡಿದ ಕನಿಷ್ಠ ಬೆಲೆಯಾದರೂ ಸಿಗಲೇಬೇಕೆಂಬ) ಷರತ್ತಿಲ್ಲದ ಮಾರಾಟ ಯಾ ಹರಾಜು.
  8. (ಸಾಹಿತ್ಯದ ಯಾ ಬೇರೆ ಕಲೆಯ ಸೃಷ್ಟಿಯಲ್ಲಿ ಯಾವ ಅತಿರೇಕವೂ ಇಲ್ಲದ) ಹಿಡಿತ; ಸಂಯಮ.
    1. ವಾಕ್‍ ಸಂಯಮ; ಮಿತಭಾಷಿತ್ವ; ಹೆಚ್ಚಾಗಿ ಮಾತನಾಡದಿರುವುದು.
    2. ಬಿಗುಮಾನ; ಸಂಕೋಚ; ಮನಬಿಚ್ಚಿ ಮಾತನಾಡದಿರುವುದು.
    3. ಬಿಗುಮಾನ; ಶ್ರೀಮದ್ಗಾಂಭೀರ್ಯ; ಯಾರಿಗೇ ಆಗಲಿ ಸಲಿಗೆ ಕೊಡದಿರುವುದು.
  9. (ಉದ್ದೇಶಪೂರ್ವಕವಾಗಿ) ನಿಜಾಂಶವನ್ನು ಮರೆಸಿಡುವುದು; ಸತ್ಯವನ್ನು ಗುಟ್ಟಾಗಿಡುವುದು; ನಿಜಾಂಶಗೋಪನ: exercised a certain amount of reserve ನಿಜಾಂಶದ ಬಗ್ಗೆ ಸ್ವಲ್ಪಮಟ್ಟಿನ ರಹಸ್ಯವಹಿಸಿದ.
  10. ಲಾಭವಿಶಿಷ್ಟ ಬಂಡವಾಳ; ಕಂಪನಿಯೊಂದರ ಬಂಡವಾಳದೊಂದಿಗೆ ಸೇರಿಸಿದ ಲಾಭ.
  11. (ಏಕವಚನ ಯಾ ಬಹುವಚನದಲ್ಲಿ) ನಗದು; ಕೇಂದ್ರ ಬ್ಯಾಂಕಿನಲ್ಲಿ ನಗದಾಗಿ, ಚಿನ್ನವಾಗಿ ಯಾ ವಿದೇಶೀ ವಿನಿಮಯವಾಗಿ ತಕ್ಷಣ ಲಭ್ಯವಿರುವ ಆಸ್ತಿಪಾಸ್ತಿಗಳು: reserve currency ನಗದು ಹಣ.
  12. (ಕುಂಭಕಲೆಯ ಯಾ ಜವಳಿಯ ಅಲಂಕಾರದಲ್ಲಿ) ಮೂಲ ಸಾಮಗ್ರಿಯ ಯಾ ಹಿನ್ನೆಲೆಯ ಬಣ್ಣವನ್ನು ಉಳಿಸಿಕೊಂಡಿರುವ ಭಾಗ.
ಪದಗುಚ್ಛ
  1. in reserve ಮೀಸಲಾಗಿಟ್ಟಿರುವ; ಮೀಸಲಿನಲ್ಲಿರುವ; ಬಳಸದೆ ಬೇಕಾದಾಗ ಉಪಯೋಗಕ್ಕೆ ಬರುವ.
  2. with all (or all proper) reserve ದೃಢಪಡಿಸದೆ; ಅನುಮೋದಿಸದೆ; ಯಾವ ಹೊಣೆಯೂ ಇಲ್ಲದ ಯಾ ಯಾವ ಹೊಣೆಗೂ ಒಳಪಡುವುದಿಲ್ಲ ಎಂಬ ಷರತ್ತುಳ್ಳ: we publish this with all proper reserve ಇದರ ಬಗ್ಗೆ ಯಾವ ಹೊಣೆಯೂ ನಮಗಿಲ್ಲ ಎಂಬ ಷರತ್ತಿನ ಮೇಲೆ ಯಾ ಇದನ್ನು ದೃಢೀಕರಿಸದೆ ನಾವು ಪ್ರಕಟಿಸುತ್ತಿದ್ದೇವೆ.