1reserve
ಸಕರ್ಮಕ ಕ್ರಿಯಾಪದ
- (ವಸ್ತುವನ್ನು ಮುಂದೆಂದೋ ಬಳಸಲು ಯಾ ಅನುಭೋಗಿಸಲು, ಕೆಲಸವನ್ನು ಮುಂದೆಂದೋ ಮಾಡಲು) ಕಾದಿಟ್ಟಿರು; ಉಳಿಸಿಟ್ಟಿರು.
-
- (ತನಗಾಗಿಯೋ ಬೇರೆಯವರಿಗಾಗಿಯೋ ನಿಗದಿಮಾಡಿಕೊಂಡು ನಾಟಕಶಾಲೆ, ವಾಹನ ಮೊದಲಾದವುಗಳಲ್ಲಿ ಸ್ಥಳಾವಕಾಶ ಮೊದಲಾದವನ್ನು) ಕಾದಿರಿಸಿಕೊ: reserved seats (ನಾಟಕಶಾಲೆ ಮೊದಲಾದವುಗಳಲ್ಲಿ) ಕಾದಿಟ್ಟ ಸ್ಥಳಾವಕಾಶ, ಸೀಟುಗಳು.
- (ಕಾಯಿದೆಯ ಮೂಲಕ ವ್ಯಕ್ತಿಗಾಗಿಯೋ ವರ್ಗಕ್ಕಾಗಿಯೋ ಸವಲತ್ತು, ಹಕ್ಕು ಮೊದಲಾದವನ್ನು) ಮೀಸಲಾಗಿರಿಸಿಕೊ; ಕಾದಿರಿಸಿಕೊ.
- (ಮುಖ್ಯವಾಗಿ ಭೂತಕೃದಂತದಲ್ಲಿ) (ವಿಧಿಯ, ಹಣೆಬರಹದ ವಿಷಯದಲ್ಲಿಯಾವುದೇ ಗತಿಗಾಗಿ) ಕಾದಿಟ್ಟಿರು: reserved for disgrace ಅವಮಾನಕ್ಕಾಗಿ (ವಿಧಿಯು) ಕಾದಿಟ್ಟಿದ್ದ. reserved for death (ಅಕಾಲ) ಮೃತ್ಯುವಿಗಾಗಿ (ವಿಧಿಯು) ಕಾದಿಟ್ಟಿದ್ದ.
- (ಯಾವುದೇ ಉಪಯೋಗಕ್ಕಾಗಿ ಇಲ್ಲವೆ ಗತಿಗಾಗಿ) ತೆಗೆದಿಡು; ಪ್ರತ್ಯೇಕಿಸಿಡು; ಮುಡಿಪಾಗಿ, ಮೀಸಲಾಗಿ ಇಡು.
ಪದಗುಚ್ಛ
- reserve oneself for ಸ್ವಶಕ್ತಿಯನ್ನು (ಈಗಲೇ ವ್ಯಯಮಾಡದೆ ಸಕಾಲದಲ್ಲಿ ಬಳಸಲು) ಉಳಿಸಿಟ್ಟುಕೊ; ಕೂಡಿಸಿಟ್ಟುಕೊ.
- reserve list ಕಾದಿರಿಸಿದ ಪಟ್ಟಿ:
- ಸಂಗ್ರಾಮಸೇವೆಯಿಂದ ನಿವೃತ್ತಿಗೊಳಿಸಿದ, ಆದರೆ ಮತ್ತೆ ಸೇವೆಗಾಗಿ ಕರೆದುಕೊಳ್ಳಬಹುದಾದ ನೌಕಾಧಿಕಾರಿಗಳ ಪಟ್ಟಿ.
- (ಯಾವುದೇ ವರ್ಗಕ್ಕಾಗಿ ಹುದ್ದೆಗಳು, ಸವಲತ್ತುಗಳು, ಹಕ್ಕುಗಳು ಮೊದಲಾದವನ್ನು) ಕಾದಿರಿಸಿದ ಪಟ್ಟಿ; ಮೀಸಲು ವರ್ಗಪಟ್ಟಿ.