See also 2report
1report ರಿಪೋರ್ಟ್‍
ಸಕರ್ಮಕ ಕ್ರಿಯಾಪದ
  1. ಸುದ್ದಿ, ಸಮಾಚಾರ ಯಾ ವರ್ತಮಾನ–ತಂದು ಹೇಳು, ತಿಳಿಸು ಯಾ ವರದಿಮಾಡು.
  2. ನಡೆದ ಸಂಗತಿ ಯಾ ವೃತ್ತಾಂತ ಎಂದು ಹೇಳು.
  3. ಕಣ್ಣಾರ ಕಂಡದ್ದೆಂದು ಯಾ ಕಂಡದ್ದನ್ನು ಹೇಳು; ಪ್ರತ್ಯಕ್ಷವಾಗಿ ನೋಡಿದ್ದೆಂದು ಯಾ ನೋಡಿದ್ದನ್ನು ಹೇಳು.
  4. ಬೇರಾರೋ ಹೇಳಿದ್ದನ್ನು ಅವರ ಮಾತನ್ನೇ ಉಲ್ಲೇಖಿಸಿ ಯಾ ತನ್ನ ಪದಗಳಲ್ಲಿ ವರದಿ ಮಾಡು.
  5. (ಒಂದು ವಿಷಯ ಕುರಿತು) ಅಧಿಕೃತ ಯಾ ವಿಧ್ಯುಕ್ತ ಹೇಳಿಕೆ ನೀಡು.
  6. ತಪ್ಪಿತಕ್ಕೆ ಯಾ ತಪ್ಪಿತಸ್ಥನಿಗೆ ವಿರುದ್ಧವಾಗಿ ವರದಿ ಒಪ್ಪಿಸು: I shall report your unpunctuality to the Director ನೀನು ವೇಳೆ ಮೀರುತ್ತಿರುವುದನ್ನು ನಿರ್ದೇಶಕರಿಗೆ ವರದಿ ಮಾಡುತ್ತೇನೆ.
  7. (ಶಾಸನಸಭೆ) (ಸಮಿತಿಯ ಅಧ್ಯಕ್ಷನ ವಿಷಯದಲ್ಲಿ) ಸಮಿತಿಯು (ಮಸೂದೆಯನ್ನು) ಪರಿಶೀಲಿಸಿದೆಯೆಂದು ಘೋಷಿಸು.
  8. (ವಿಷಯವನ್ನು) ಪದಶಃ ಯಾ ಸಂಗ್ರಹವಾಗಿ ಯಾ ಪ್ರಕಟನೆಗಾಗಿ–ವರ್ಣಿಸು, ನಿರೂಪಿಸು, ವರದಿ ಮಾಡು ( ಅಕರ್ಮಕ ಕ್ರಿಯಾಪದ ಸಹ): report a law case ಮೊಕದ್ದಮೆಯ ವಿಚಾರಣೆಯನ್ನು ವರದಿ ಮಾಡು. report the proceedings of the committee ಸಮಿತಿಯ ಕಾರ್ಯಕಲಾಪಗಳ ವರದಿ ಒಪ್ಪಿಸು. he reports to the Hindu ಅವನು ಹಿಂದೂಪತ್ರಿಕೆಗೆ ವರದಿ ಮಾಡುತ್ತಾನೆ.
ಅಕರ್ಮಕ ಕ್ರಿಯಾಪದ
  1. ವಾಪಸು ಬಂದಿರುವುದಾಗಿ ಯಾ ಕೆಲಸಕ್ಕೆ ಸೇರಿಸಿಕೊಳ್ಳಲು ಬಂದಿರುವುದಾಗಿ (ಅಧಿಕಾರಿಗೆ) (ತಿಳಿಸು) (ಆತ್ಮಾರ್ಥಕ, ಸಕರ್ಮಕ ಕ್ರಿಯಾಪದ ಸಹ): report (oneself) to the manager after arrival ಬಂದು ತಲುಪಿದ ಮೇಲೆ ಬಂದಿರುವುದನ್ನು, ಮ್ಯಾನೇಜರಿಗೆ ತಿಳಿಸು, ಹಾಜರಾಗಿದ್ದೇನೆಂಬ ವರದಿ ಒಪ್ಪಿಸು. report for duty ಕೆಲಸದ ಮೇಲೆ ಹಾಜರಾಗಿದ್ದೇನೆಂದು ತಿಳಿಸು.
  2. (ವಿಷಯ ಕುರಿತು ಅನುಕೂಲವೋ, ಪ್ರತಿಕೂಲವೋ ಆದ ಅಭಿಪ್ರಾಯ ತಿಳಿಸುವ) ವರದಿ ಒಪ್ಪಿಸು: he reports well of the prospects (ವಿಷಯದ) ಭವಿಷ್ಯ ಚೆನ್ನಾಗಿದೆಯೆಂದು ಅವನು ವರದಿ ಮಾಡಿದ್ದಾನೆ.
  3. (ಮೇಲಧಿಕಾರಿ ಮೊದಲಾದವರಿಗೆ) ಜವಾಬ್ದಾರನಾಗಿರು; ಕರ್ತವ್ಯಬದ್ಧನಾಗಿರು: reports directly to the Director ನೇರವಾಗಿ ನಿರ್ದೇಶಕನಿಗೆ ಜವಾಬ್ದಾರನಾಗಿದ್ದಾನೆ.
ಪದಗುಚ್ಛ
  1. it is reported etc... ಎಂದು ಎಲ್ಲರೂ ಹೇಳುತ್ತಿದ್ದಾರೆ; ಎಂದು ವರದಿಯಾಗಿದೆ; ಎಂಬ ವದಂತಿ ಇದೆ.
  2. report progress (ಬ್ರಿಟಿಷ್‍ ಪ್ರಯೋಗ) ಕೆಲಸದ ಪ್ರಗತಿಯ ವರದಿ ಸಲ್ಲಿಸು; ಇಲ್ಲಿಯವರೆಗೂ ಕೆಲಸ ಎಷ್ಟು ಮುಂದುವರಿದಿದೆ ಎಂಬುದನ್ನು ವರದಿಮಾಡು.
  3. reported speech ಪರೋಕ್ಷ ವರದಿ; ಬೇರಾರೋ ಹೇಳಿದ್ದನ್ನು ಪುರುಷ, ಕಾಲ ಮೊದಲಾದವುಗಳನ್ನು ತದನುಗುಣವಾಗಿ ವ್ಯತ್ಯಾಸಮಾಡಿ ಮಾಡಿದ ವರದಿ: he said that he would go ತಾನು ಹೋಗುತ್ತೇನೆಂದು ಅವನು ಹೇಳಿದ.
  4. move to report progress (ಬ್ರಿಟಿಷ್‍ ಪ್ರಯೋಗ) ಪ್ರಗತಿವರದಿಯ ಪರಿಗಣನೆಗೆ ಸೂಚನೆ; ಹೌಸ್‍ಆಹ್‍ ಕಾಮನ್ಸ್‍ನಲ್ಲಿ, ಹಲವೊಮ್ಮೆ ಅಡಚಣೆ ಒಡ್ಡುವುದಕ್ಕಾಗಿಯೇ, ಮಸೂದೆಯ ಚರ್ಚೆ ನಿಲ್ಲಬೇಕೆಂದೂ ಎಷ್ಟು ಕೆಲಸ ನಡೆದಿದೆ ಎಂಬುದನ್ನು ವಿಶೇಷ ಸಮಿತಿಯು ತನಿಖೆಯನ್ನು ಮಾಡಿ ವರದಿ ಒಪ್ಪಿಸಬೇಕೆಂದೂ ಸೂಚಿಸುವುದು.
  5. report a bill to the House (ಬ್ರಿಟಿಷ್‍ ಪ್ರಯೋಗ) (ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ಮಸೂದೆಯ ದ್ವಿತೀಯ ತೃತೀಯ ಪಠನಗಳ ನಡುವೆ) ಪರಿಶೀಲನಾ ಸಮಿತಿಯ ಅಧ್ಯಕ್ಷನು ಸಮಿತಿಯ ತೀರ್ಮಾನಗಳನ್ನು ವರದಿ ಮಾಡುವುದು.
  6. report back ತಾನು ಯಾವ ವ್ಯಕ್ತಿ ಯಾ ಸಂಸ್ಥೆಯ ಪರವಾಗಿ ಕೆಲಸ ಮಾಡುತ್ತಿರುವನೋ ಆ ವ್ಯಕ್ತಿ ಯಾ ಸಂಸ್ಥೆಗೆ ವರದಿ ಕಳಿಸು.
See also 1report
2report ರಿಪೋರ್ಟ್‍
ನಾಮವಾಚಕ
  1. ಸಾರ್ವಜನಿಕ ವದಂತಿ; ಜನ ಅಡಿಕೊಳ್ಳುವ ಮಾತು; ಜನರಲ್ಲಿ ಹಬ್ಬಿರುವ ಸುದ್ದಿ; ಬೀದಿಮಾತು; ಪೇಟೆಮಾತು; ಗಾಳಿ ವರ್ತಮಾನ; ವದಂತಿ: mere report is not enough ಬರಿಯ ವದಂತಿ ಸಾಲದು.
  2. (ವ್ಯಕ್ತಿಯ, ವಸ್ತುವಿನ ಯಾ ವಿಷಯದ ಬಗೆಗೆ) ಜನರ ಭಾವನೆ; ಜನಾಭಿಪ್ರಾಯ; ಲೋಕಾಭಿಪ್ರಾಯ; ಕೀರ್ತಿ ಯಾ ಅಪಕೀರ್ತಿ: through good and evil report ಕೀರ್ತಿ ಬರಲಿ, ಅಪಕೀರ್ತಿ ಬರಲಿ.
  3. (ತನಿಖೆ ಯಾ ಪರ್ಯಾಲೋಚನೆಯ ಬಳಿಕ ಒಪ್ಪಿಸಿದ) ವರದಿ.
  4. (ಮುಖ್ಯವಾಗಿ ಪತ್ರಿಕೆಗಳಿಗೆ ಪ್ರಕಟಣೆಗಾಗಿ ಕಳುಹಿಸುವ, ಒಂದು ಪ್ರದರ್ಶನ, ಭಾಷಣ, ಘಟನೆ, ಮೊಕದ್ದಮೆಯ ವಿಚಾರಣೆ ಮೊದಲಾದವುಗಳ) ವರ್ಣನೆ; ವರದಿ.
  5. (ವಿದ್ಯಾರ್ಥಿಯ ಪ್ರಗತಿ ನಡತೆಗಳ ಬಗೆಗೆ ನಿಯತಕಾಲಗಳಲ್ಲಿ ತಾಯಿತಂದೆಗಳಿಗೆ ಯಾ ಪೋಷಕರಿಗೆ ಕಳುಹಿಸುವ) ಶಾಲಾವರದಿ.
  6. ಸಿಡಿತದ ಸದ್ದು; ಸ್ಫೋಟದ ಶಬ್ದ: the report of the pistol ಪಿಸ್ತೂಲಿನ ಸಿಡಿತ(ದ ಸದ್ದು).
ಪದಗುಚ್ಛ

report stage (ಬ್ರಿಟಿಷ್‍ ಪ್ರಯೋಗ) ವರದಿ ಹಂತ; ಹೌಸ್‍ ಆಹ್‍ ಕಾಮನ್ಸ್‍ನ ಯಾವುದೇ ಸಮಿತಿಯು ತನ್ನ ವರದಿ ಒಪ್ಪಿಸಿದ ಮೇಲೆ ಮಸೂದೆಯ ಬಗೆಗೆ ಪಾರ್ಲಿಮೆಂಟು ಉಚಿತ ಕಾರ್ಯಕ್ರಮ ಕೈಗೊಳ್ಳುವ ಘಟ್ಟ; ಮಸೂದೆಯ ಅಂತಿಮ ಚರ್ಚೆಯ ಹಂತ.