See also 1report
2report ರಿಪೋರ್ಟ್‍
ನಾಮವಾಚಕ
  1. ಸಾರ್ವಜನಿಕ ವದಂತಿ; ಜನ ಅಡಿಕೊಳ್ಳುವ ಮಾತು; ಜನರಲ್ಲಿ ಹಬ್ಬಿರುವ ಸುದ್ದಿ; ಬೀದಿಮಾತು; ಪೇಟೆಮಾತು; ಗಾಳಿ ವರ್ತಮಾನ; ವದಂತಿ: mere report is not enough ಬರಿಯ ವದಂತಿ ಸಾಲದು.
  2. (ವ್ಯಕ್ತಿಯ, ವಸ್ತುವಿನ ಯಾ ವಿಷಯದ ಬಗೆಗೆ) ಜನರ ಭಾವನೆ; ಜನಾಭಿಪ್ರಾಯ; ಲೋಕಾಭಿಪ್ರಾಯ; ಕೀರ್ತಿ ಯಾ ಅಪಕೀರ್ತಿ: through good and evil report ಕೀರ್ತಿ ಬರಲಿ, ಅಪಕೀರ್ತಿ ಬರಲಿ.
  3. (ತನಿಖೆ ಯಾ ಪರ್ಯಾಲೋಚನೆಯ ಬಳಿಕ ಒಪ್ಪಿಸಿದ) ವರದಿ.
  4. (ಮುಖ್ಯವಾಗಿ ಪತ್ರಿಕೆಗಳಿಗೆ ಪ್ರಕಟಣೆಗಾಗಿ ಕಳುಹಿಸುವ, ಒಂದು ಪ್ರದರ್ಶನ, ಭಾಷಣ, ಘಟನೆ, ಮೊಕದ್ದಮೆಯ ವಿಚಾರಣೆ ಮೊದಲಾದವುಗಳ) ವರ್ಣನೆ; ವರದಿ.
  5. (ವಿದ್ಯಾರ್ಥಿಯ ಪ್ರಗತಿ ನಡತೆಗಳ ಬಗೆಗೆ ನಿಯತಕಾಲಗಳಲ್ಲಿ ತಾಯಿತಂದೆಗಳಿಗೆ ಯಾ ಪೋಷಕರಿಗೆ ಕಳುಹಿಸುವ) ಶಾಲಾವರದಿ.
  6. ಸಿಡಿತದ ಸದ್ದು; ಸ್ಫೋಟದ ಶಬ್ದ: the report of the pistol ಪಿಸ್ತೂಲಿನ ಸಿಡಿತ(ದ ಸದ್ದು).
ಪದಗುಚ್ಛ

report stage (ಬ್ರಿಟಿಷ್‍ ಪ್ರಯೋಗ) ವರದಿ ಹಂತ; ಹೌಸ್‍ ಆಹ್‍ ಕಾಮನ್ಸ್‍ನ ಯಾವುದೇ ಸಮಿತಿಯು ತನ್ನ ವರದಿ ಒಪ್ಪಿಸಿದ ಮೇಲೆ ಮಸೂದೆಯ ಬಗೆಗೆ ಪಾರ್ಲಿಮೆಂಟು ಉಚಿತ ಕಾರ್ಯಕ್ರಮ ಕೈಗೊಳ್ಳುವ ಘಟ್ಟ; ಮಸೂದೆಯ ಅಂತಿಮ ಚರ್ಚೆಯ ಹಂತ.