See also 2repeat
1repeat ರಿಪೀಟ್‍
ಸಕರ್ಮಕ ಕ್ರಿಯಾಪದ
  1. ಮತ್ತೊಮ್ಮೆ ಹೇಳು; ಪುನಃ ಹೇಳು; ಪುನರುಚ್ಚರಿಸು: repeat statement ಹೇಳಿಕೆಯನ್ನು, ಹೇಳಿದ ಮಾತನ್ನು–ಪುನಃ ಹೇಳು.
  2. ಪುನಃ ಮಾಡು; ಮತ್ತೆ ಮಾಡು; ಪುನರಾವರ್ತಿಸು: repeat action (ಮಾಡಿದ) ಕೆಲಸವನ್ನು ತಿರುಗಿ ಮಾಡು.
  3. ಪುನಃ ಹೇಳು; ಬಾಯಿಪಾಠವಾಗಿ ಹೇಳು: repeat a poem ಒಂದು ಕವನವನ್ನು ಬಾಯಿಪಾಠವಾಗಿ ಹೇಳು.
  4. ಅಂತೆಯೇ ವರದಿ ಮಾಡು; ನಡೆದ ಸಂಭಾಷಣೆ, ಸಂವಾದ, ಸಲ್ಲಾಪ, ಚರ್ಚೆ ಮೊದಲಾದವನ್ನು ನಡೆದಂತೆ ಬೇರೊಂದೆಡೆ ಹೇಳು: repeat a conversation between some persons ಯಾವುದೇ ವ್ಯಕ್ತಿಗಳಲ್ಲಿ ನಡೆದ ಸಂಭಾಷಣೆಯನ್ನು ಅಂತೆಯೇ ವರದಿಮಾಡು.
  5. ಮತ್ತೆಮತ್ತೆ ಮಾಡು, ಮಾಡುತ್ತಿರು; ಪುನರಾವರ್ತಿಸುತ್ತಿರು: repeat signal ಸಂಕೇತವನ್ನು ಪುನರಾವರ್ತಿಸು(ತ್ತಿರು) ( ಅಕರ್ಮಕ ಕ್ರಿಯಾಪದ ಸಹ).
  6. (ಕಾರ್ಯ ಮೊದಲಾದವನ್ನು) ಅನುಕರಿಸು.
  7. (ಮತ್ತೆಮತ್ತೆ ಬಾರು ಮಾಡದೆ) ಹಲವು ಗುಂಡುಹೊಡೆ; ಹಲವುಬಾರಿ ಹೊಡೆ: repeating rifle ಹಲವು ಗುಂಡು ಹೊಡೆಯುವ ಬಂದೂಕ.
  8. (ಆತ್ಮಾರ್ಥಕ) (ತನ್ನನ್ನೇ) ಪುನರಾವರ್ತಿಸಿಕೊ; ಪುನರಾವರ್ತನೆಯಾಗು; ಮರಳಿಮರಳಿ ನಡೆ, ಸಂಭವಿಸು: history repeats itself ನಡೆದ ಚರಿತ್ರೆ ತಿರುತಿರುಗಿ (ಹಿಂದಿನಂತೆಯೇ) ನಡೆಯುತ್ತದೆ, ಪುನರಾವರ್ತಿಸುತ್ತದೆ.
  9. ಅವಧಾರಣೆಗಾಗಿ ಬಳಸುವಲ್ಲಿ: am not, repeat not, going ನಾನು ಹೋಗುತ್ತಾ ಇಲ್ಲ, ಮತ್ತೆ ಹೇಳುತ್ತೇನೆ ಇಲ್ಲ.
ಅಕರ್ಮಕ ಕ್ರಿಯಾಪದ
  1. ಮತ್ತೆಮತ್ತೆ ಬರುತ್ತಿರು; ಮರಳಿಮರಳಿ ಸಂಭವಿಸುತ್ತಿರು; ಪುನರಾವರ್ತಿಸು: the last three digits repeat ಕೊನೆಯ ಮೂರು ಅಂಕಿಗಳು ಮತ್ತೆಮತ್ತೆ ಬರುತ್ತವೆ, ಪುನರಾವರ್ತಿಸುತ್ತವೆ.
  2. (ಗಡಿಯಾರ ಮೊದಲಾದವುಗಳ ವಿಷಯದಲ್ಲಿ) ಬೇಕೆನಿಸಿದಾಗ ಕೊನೆಯ ಕಾಲುಗಂಟೆ ಮೊದಲಾದವನ್ನು ಮತ್ತೆ ಹೊಡೆ, ಪುನರಾವರ್ತಿಸು.
  3. (ಫಿರಂಗಿ, ಬಂದೂಕು ಮೊದಲಾದವುಗಳ ವಿಷಯದಲ್ಲಿ) ಮತ್ತೆ ಬಾರು ಮಾಡದೆ ಹಲವು ಬಾರಿ ಗುಂಡುಹೊಡೆ.
  4. (ಅಮೆರಿಕನ್‍ ಪ್ರಯೋಗ) ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚುಸಲ (ಕಾನೂನುಬಾಹಿರವಾಗಿ) ಓಟು ಹಾಕು, ಮತ ಚಲಾಯಿಸು.
  5. (ಆಹಾರದ ವಿಷಯದಲ್ಲಿ) ಮರಳಿ ರುಚಿತರು; ತೇಗಿನಿಂದ ಯಾ ಅಜೀರ್ಣದಿಂದ, ನುಂಗಿಯಾದ ಮೇಲೆ ಮತ್ತೆ ಮತ್ತೆ ಕೆಲಕಾಲ ಬಾಯಿಗೆ ಅದರ ರುಚಿ ತರು, ಉಂಟುಮಾಡು.
ಪದಗುಚ್ಛ
  1. repeat itself ಅದೇ ರೀತಿಯಲ್ಲಿ ಮತ್ತೆ ಬರು, ಸಂಭವಿಸು, ಪುನರಾವರ್ತಿಸು.
  2. repeat oneself ಮತ್ತೆ ಅದನ್ನೇ ಹೇಳು ಯಾ ಮಾಡು; ಹೇಳಿದ್ದನ್ನೇ ಹೇಳು, ಮಾಡಿದ್ದನ್ನೇ ಮಾಡು.
See also 1repeat
2repeat ರಿಪೀಟ್‍
ನಾಮವಾಚಕ
  1. (ಸಭಾಸದರ ಕೋರಿಕೆಯಂತೆ ಪ್ರದರ್ಶನ, ಗಾಯನ ಮೊದಲಾದವುಗಳ ಒಂದು ಅಂಶವನ್ನು, ಮುಖ್ಯವಾಗಿ ಹಾಡನ್ನು) ಮತ್ತೊಮ್ಮೆ ಹೇಳುವುದು ಯಾ ಮಾಡುವುದು.
  2. ಪುನರಾವೃತ್ತಿ(ಯಾದದ್ದು): a repeat prescription ಪುನರಾವೃತ್ತಿ ಮಾಡಿದ ಔಷಧಿ ಚೀಟಿ.
  3. (ರೇಡಿಯೋ) ಪುನರಾವರ್ತಿಸಿದ ಯಾವುದೇ ಕಾರ್ಯಕ್ರಮ; ಪುನಃ–ಪ್ರಸಾರ, ಪ್ರಸರಣ.
  4. (ಸಂಗೀತ)
    1. ಪುನರಾವರ್ತಿಸಬೇಕಾದ ಗೀತಭಾಗ.
    2. ಪುನರಾವರ್ತಿಸಬೇಕಾದ ಭಾಗವನ್ನು ಸೂಚಿಸುವ ಗುರುತು, ಚಿಹ್ನೆ; ಆವರ್ತನ ಚಿಹ್ನೆ.
  5. (ಗೋಡೆಯ ಅಲಂಕರಣಕಾಗದ ಮೊದಲಾದವುಗಳಲ್ಲಿ) ಪುನಃಪುನಃ ಚಿತ್ರಿಸಿರುವ ನಮೂನೆ, ಆಕೃತಿ.
    1. (ವಾಣಿಜ್ಯ) ಹಿಂದೆ ರವಾನಿಸಿದ ಸರಕುಗಳಂತಹವುಗಳ ಹೊಸ ರವಾನೆ ಯಾ ಅಂತಹವನ್ನು ಹೊಸದಾಗಿ ರವಾನಿಸುವುದು.
    2. ಹೊಸರವಾನೆಯ ಕೋರಿಕೆ; ಹಿಂದಿನ ರವಾನೆಯಂತಹದ್ದನ್ನೇ ಮತ್ತೆ ರವಾನೆ ಮಾಡಬೇಕೆಂದು ಕೇಳುವ ಕೋರಿಕೆ.