2repeat
ರಿಪೀಟ್
ನಾಮವಾಚಕ
- (ಸಭಾಸದರ ಕೋರಿಕೆಯಂತೆ ಪ್ರದರ್ಶನ, ಗಾಯನ ಮೊದಲಾದವುಗಳ ಒಂದು ಅಂಶವನ್ನು, ಮುಖ್ಯವಾಗಿ ಹಾಡನ್ನು) ಮತ್ತೊಮ್ಮೆ ಹೇಳುವುದು ಯಾ ಮಾಡುವುದು.
- ಪುನರಾವೃತ್ತಿ(ಯಾದದ್ದು): a repeat prescription ಪುನರಾವೃತ್ತಿ ಮಾಡಿದ ಔಷಧಿ ಚೀಟಿ.
- (ರೇಡಿಯೋ) ಪುನರಾವರ್ತಿಸಿದ ಯಾವುದೇ ಕಾರ್ಯಕ್ರಮ; ಪುನಃ–ಪ್ರಸಾರ, ಪ್ರಸರಣ.
- (ಸಂಗೀತ)
- ಪುನರಾವರ್ತಿಸಬೇಕಾದ ಗೀತಭಾಗ.
- ಪುನರಾವರ್ತಿಸಬೇಕಾದ ಭಾಗವನ್ನು ಸೂಚಿಸುವ ಗುರುತು, ಚಿಹ್ನೆ; ಆವರ್ತನ ಚಿಹ್ನೆ.
- (ಗೋಡೆಯ ಅಲಂಕರಣಕಾಗದ ಮೊದಲಾದವುಗಳಲ್ಲಿ) ಪುನಃಪುನಃ ಚಿತ್ರಿಸಿರುವ ನಮೂನೆ, ಆಕೃತಿ.
-
- (ವಾಣಿಜ್ಯ) ಹಿಂದೆ ರವಾನಿಸಿದ ಸರಕುಗಳಂತಹವುಗಳ ಹೊಸ ರವಾನೆ ಯಾ ಅಂತಹವನ್ನು ಹೊಸದಾಗಿ ರವಾನಿಸುವುದು.
- ಹೊಸರವಾನೆಯ ಕೋರಿಕೆ; ಹಿಂದಿನ ರವಾನೆಯಂತಹದ್ದನ್ನೇ ಮತ್ತೆ ರವಾನೆ ಮಾಡಬೇಕೆಂದು ಕೇಳುವ ಕೋರಿಕೆ.