See also 2rent  3rent  4rent
1rent ರೆಂಟ್‍
ಕ್ರಿಯಾಪದ

rend ಪದದ ಭೂತರೂಪ ಮತ್ತು ಭೂತಕೃದಂತ ರೂಪ.

See also 1rent  3rent  4rent
2rent ರೆಂಟ್‍
ನಾಮವಾಚಕ
  1. (ಉಡುಪಿನ) ಹರಕು; ತೂತು.
  2. (ಮೋಡ ಮೊದಲಾದವುಗಳ) ಬಿರುಕು; ಛಿದ್ರ; ಕಂಡಿ.
  3. (ಬೆಟ್ಟ ಮೊದಲಾದವುಗಳ) ಬಿರುಕು; ಸೀಳು; ಕಮರಿ; ಕಂದಕ; ಕಂದರ.
See also 1rent  2rent  4rent
3rent ರೆಂಟ್‍
ನಾಮವಾಚಕ
  1. (ನೆಲ, ಮನೆ, ಕೊಠಡಿಗಳಿಗಾಗಿ ಮಾಲೀಕನಿಗೆ ಸಲ್ಲಿಸುವ) ಬಾಡಿಗೆ.
  2. (ಬೇರೊಬ್ಬನ ಯಂತ್ರ, ಸೇವೆ ಮೊದಲಾದವುಗಳನ್ನು ಬಳಸಿಕೊಳ್ಳುವವನು ಸಲ್ಲಿಸುವ) ಬಾಡಿಗೆ, ಹಣ.
ಪದಗುಚ್ಛ

for rent (ಅಮೆರಿಕನ್‍ ಪ್ರಯೋಗ) ಬಾಡಿಗೆಗೆ ದೊರಕುವ.

See also 1rent  2rent  3rent
4rent ರೆಂಟ್‍
ಸಕರ್ಮಕ ಕ್ರಿಯಾಪದ
  1. ಗೇಣಿಗೆ ಯಾ ಬಾಡಿಗೆಗೆ ತೆಗೆದುಕೊ: rented a cottage from a farmer ಒಬ್ಬ ರೈತನಿಂದ ಗುಡಿಸಲೊಂದನ್ನು ಬಾಡಿಗೆಗೆ ತೆಗೆದುಕೊಂಡ.
  2. ಗೊತ್ತಾದ ಗೇಣಿಗೆ ಯಾ ಬಾಡಿಗೆಗೆ ಕೊಡು.
  3. ಗೊತ್ತಾದ ಗೇಣಿಗೆಗೆ ಯಾ ಬಾಡಿಗೆಗೆ ಕೊಡಲ್ಪಡು.
  4. (ಗೇಣಿದಾರನ ಮೇಲೆ) ಗೇಣಿಯನ್ನು, (ಬಾಡಿಗೆದಾರನ ಮೇಲೆ) ಬಾಡಿಗೆಯನ್ನು–ಹಾಕು, ಹೇರು, ಹೊರಿಸು: he rents his tenants low ಅವನು ತನ್ನ ಗೇಣಿದಾರರಿಗೆ ಅಲ್ಪಗೇಣಿಯನ್ನು, ಬಾಡಿಗೆದಾರರಿಗೆ ಅಲ್ಪ ಬಾಡಿಗೆಯನ್ನು ಹಾಕುತ್ತಾನೆ.
ಅಕರ್ಮಕ ಕ್ರಿಯಾಪದ

ಒಂದು ನಿರ್ದಿಷ್ಟ ಬಾಡಿಗೆ ಬರು: the land rents at Rs. 1000 per month ಜಮೀನಿನಿಂದ ತಿಂಗಳಿಗೆ ಸಾವಿರ ರೂಪಾಯಿ ಬಾಡಿಗೆ ಬರುತ್ತದೆ.

ಪದಗುಚ್ಛ

rent-a- ( ಸಮಾಸ ಪೂರ್ವಪದವಾಗಿ) (ಅನೇಕವೇಳೆ ಹಾಸ್ಯ ಪ್ರಯೋಗ) ಬಾಡಿಗೆಗೆ ಸಿಕ್ಕುವ: rent-a-van ಬಾಡಿಗೆ ವ್ಯಾನು. rent-a-crowd ಬಾಡಿಗೆ ಜನಸಂದಣಿ.