See also 1rent  2rent  3rent
4rent ರೆಂಟ್‍
ಸಕರ್ಮಕ ಕ್ರಿಯಾಪದ
  1. ಗೇಣಿಗೆ ಯಾ ಬಾಡಿಗೆಗೆ ತೆಗೆದುಕೊ: rented a cottage from a farmer ಒಬ್ಬ ರೈತನಿಂದ ಗುಡಿಸಲೊಂದನ್ನು ಬಾಡಿಗೆಗೆ ತೆಗೆದುಕೊಂಡ.
  2. ಗೊತ್ತಾದ ಗೇಣಿಗೆ ಯಾ ಬಾಡಿಗೆಗೆ ಕೊಡು.
  3. ಗೊತ್ತಾದ ಗೇಣಿಗೆಗೆ ಯಾ ಬಾಡಿಗೆಗೆ ಕೊಡಲ್ಪಡು.
  4. (ಗೇಣಿದಾರನ ಮೇಲೆ) ಗೇಣಿಯನ್ನು, (ಬಾಡಿಗೆದಾರನ ಮೇಲೆ) ಬಾಡಿಗೆಯನ್ನು–ಹಾಕು, ಹೇರು, ಹೊರಿಸು: he rents his tenants low ಅವನು ತನ್ನ ಗೇಣಿದಾರರಿಗೆ ಅಲ್ಪಗೇಣಿಯನ್ನು, ಬಾಡಿಗೆದಾರರಿಗೆ ಅಲ್ಪ ಬಾಡಿಗೆಯನ್ನು ಹಾಕುತ್ತಾನೆ.
ಅಕರ್ಮಕ ಕ್ರಿಯಾಪದ

ಒಂದು ನಿರ್ದಿಷ್ಟ ಬಾಡಿಗೆ ಬರು: the land rents at Rs. 1000 per month ಜಮೀನಿನಿಂದ ತಿಂಗಳಿಗೆ ಸಾವಿರ ರೂಪಾಯಿ ಬಾಡಿಗೆ ಬರುತ್ತದೆ.

ಪದಗುಚ್ಛ

rent-a- ( ಸಮಾಸ ಪೂರ್ವಪದವಾಗಿ) (ಅನೇಕವೇಳೆ ಹಾಸ್ಯ ಪ್ರಯೋಗ) ಬಾಡಿಗೆಗೆ ಸಿಕ್ಕುವ: rent-a-van ಬಾಡಿಗೆ ವ್ಯಾನು. rent-a-crowd ಬಾಡಿಗೆ ಜನಸಂದಣಿ.