See also 2remove
1remove ರಿಮೂವ್‍
ಸಕರ್ಮಕ ಕ್ರಿಯಾಪದ
  1. (ಇದ್ದ ಸ್ಥಳ ಯಾ ಸ್ಥಾನದಿಂದ) ತೆಗೆ; ತೆಗೆದುಹಾಕು; (ಬೇರೆ ಸ್ಥಳ ಯಾ ಸ್ಥಾನಕ್ಕೆ) ಒಯ್ಯು, ಸಾಗಿಸು, ಬದಲಾಯಿಸು: remove one’s hat ಹ್ಯಾಟನ್ನು ತೆಗೆ. remove the tea-things ಟೀ ಪಾತ್ರೆಗಳನ್ನು ತೆಗೆದುಬಿಡು. remove furniture (ಮನೆ ಬದಲಾಯಿಸುವಲ್ಲಿ, ಹೊಸಮನೆಗೆ) ಪೀಠೋಪಕರಣಗಳನ್ನು ಬದಲಾಯಿಸು, ಸಾಗಿಸು.
  2. (ಹುದ್ದೆ ಯಾ ಪದವಿಯಿಂದ) ವಜಾಮಾಡು; ತೆಗೆದುಹಾಕು; ನಿವೃತ್ತಿಗೊಳಿಸು: remove magistrate ಮ್ಯಾಜಿಸ್ಟ್ರೇಟನನ್ನು ಪದವಿಯಿಂದ ವಜಾಮಾಡು.
  3. ನಿವಾರಿಸು; ತೊಲಗಿಸು.
  4. ತೊಡೆದುಹಾಕು; ಅಳಿಸಿಹಾಕು: remove stain ಕಲೆಯನ್ನು ತೊಡೆದುಹಾಕು.
  5. (ಸಂಸ್ಥೆಯಿಂದ) ಬಿಡಿಸು: remove boy from school ಹುಡುಗನನ್ನು ಶಾಲೆಯಿಂದ ಬಿಡಿಸು.
  6. (ಆಡುಮಾತು) ಜೀವತೆಗೆ; ಕೊಲ್ಲು: he was removed by poison ವಿಷಹಾಕಿ ಅವನ ಜೀವತೆಗೆದರು.
  7. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಭೂತಕೃದಂತದಲ್ಲಿ) (ಹಿಂದೆ ಬಡಿಸಿದ ಭಕ್ಷ್ಯ ಯಾ ಭೋಜ್ಯಕ್ಕೆ) ಬದಲು ಬರು, ಬಡಿಸಲ್ಪಡು: boiled fish removed by mutton ಬೇಯಿಸಿದ ಮೀನಿಗೆ ಬದಲು ಕುರಿಮಾಂಸ ಬಡಿಸಿದರು.
ಅಕರ್ಮಕ ಕ್ರಿಯಾಪದ
  1. ಮನೆ ಯಾ ನಿವಾಸ ಬದಲಾಯಿಸು: he removed from his present residence ಇದ್ದ ಮನೆಯಿಂದ ಅವನು (ಬೇರೆ ಮನೆಗೆ) ಬದಲಾಯಿಸಿದ.
  2. (ಮುಖ್ಯವಾಗಿ ಭೂತಕೃದಂತದಲ್ಲಿ) (ಒಂದು ಸ್ಥಳದಿಂದ) ದೂರವಾಗಿರು: the cottage is far removed from the town ಆ ಕುಟೀರವು ಊರಿನಿಂದ ತೀರ ದೂರದಲ್ಲಿದೆ.
  3. (ಭೂತಕೃದಂತದಲ್ಲಿ) (ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ, ಸೋದರತ್ತೆ, ಸೋದರಮಾವ–ಇವರ ಗಂಡು ಯಾ ಹೆಣ್ಣುಮಕ್ಕಳ ವಿಷಯದಲ್ಲಿ) ಒಂದು, ಎರಡು, ಮುಂತಾಗಿ ತಲೆಬಿಟ್ಟ, ಆಚೆಯ: my cousin, once removed, twice removed, etc. ಒಂದು ತಲೆ ಬಿಟ್ಟು, ಎರಡು ತಲೆ ಬಿಟ್ಟು, ಇತ್ಯಾದಿ ನನ್ನ ಸೋದರ, ಸೋದರಿ, ದಾಯಾದಿ.
See also 1remove
2remove ರಿಮೂವ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಬಡಿಸಿದ ಭಕ್ಷ್ಯದ) ಬಳಿಕ ಬಡಿಸುವ ಭಕ್ಷ್ಯ.
  2. (ಬ್ರಿಟಿಷ್‍ ಪ್ರಯೋಗ) (ಮೇಲಿನ ತರಗತಿಗೆ) ತೇರ್ಗಡೆ: the child has not got his remove ಆ ಮಗುವಿಗೆ ತೇರ್ಗಡೆಯಾಗಿಲ್ಲ.
  3. (ಬ್ರಿಟಿಷ್‍ ಪ್ರಯೋಗ) (ಕೆಲವು ಶಾಲೆಗಳಲ್ಲಿ) ತರಗತಿ; ದರ್ಜೆ.
  4. (ವಿರಳ ಪ್ರಯೋಗ)
    1. ಮನೆ ಬದಲಾವಣೆ.
    2. (ಇದ್ದಲ್ಲಿಂದ) ಬೇರೆಡೆಗೆ ನಿರ್ಗಮನ, ಪ್ರಯಾಣ.
    3. (ಯಾವುದನ್ನೇ) ತೆಗೆದುಹಾಕುವುದು.
  5. ದೂರ: at a certain remove its shape seems to change ಸ್ವಲ್ಪದೂರದಲ್ಲಿ ಅದರ ರೂಪವೇ ಬದಲಾಯಿಸಿದಂತೆ ತೋರುತ್ತದೆ.
  6. (ಮುಖ್ಯವಾಗಿ ರಕ್ತಸಂಬಂಧದ ವಿಷಯದಲ್ಲಿ) ಒಂದು ಹಂತ, ಹೆಜ್ಜೆ, ತಲೆ: my cousin, only one remove from me ಒಂದು ಹೆಜ್ಜೆ, ಒಂದು ತಲೆ ಬಿಟ್ಟು ನನ್ನ ಸೋದರ, ಸೋದರಿ, ಅಷ್ಟೆ.