See also 2remove
1remove ರಿಮೂವ್‍
ಸಕರ್ಮಕ ಕ್ರಿಯಾಪದ
  1. (ಇದ್ದ ಸ್ಥಳ ಯಾ ಸ್ಥಾನದಿಂದ) ತೆಗೆ; ತೆಗೆದುಹಾಕು; (ಬೇರೆ ಸ್ಥಳ ಯಾ ಸ್ಥಾನಕ್ಕೆ) ಒಯ್ಯು, ಸಾಗಿಸು, ಬದಲಾಯಿಸು: remove one’s hat ಹ್ಯಾಟನ್ನು ತೆಗೆ. remove the tea-things ಟೀ ಪಾತ್ರೆಗಳನ್ನು ತೆಗೆದುಬಿಡು. remove furniture (ಮನೆ ಬದಲಾಯಿಸುವಲ್ಲಿ, ಹೊಸಮನೆಗೆ) ಪೀಠೋಪಕರಣಗಳನ್ನು ಬದಲಾಯಿಸು, ಸಾಗಿಸು.
  2. (ಹುದ್ದೆ ಯಾ ಪದವಿಯಿಂದ) ವಜಾಮಾಡು; ತೆಗೆದುಹಾಕು; ನಿವೃತ್ತಿಗೊಳಿಸು: remove magistrate ಮ್ಯಾಜಿಸ್ಟ್ರೇಟನನ್ನು ಪದವಿಯಿಂದ ವಜಾಮಾಡು.
  3. ನಿವಾರಿಸು; ತೊಲಗಿಸು.
  4. ತೊಡೆದುಹಾಕು; ಅಳಿಸಿಹಾಕು: remove stain ಕಲೆಯನ್ನು ತೊಡೆದುಹಾಕು.
  5. (ಸಂಸ್ಥೆಯಿಂದ) ಬಿಡಿಸು: remove boy from school ಹುಡುಗನನ್ನು ಶಾಲೆಯಿಂದ ಬಿಡಿಸು.
  6. (ಆಡುಮಾತು) ಜೀವತೆಗೆ; ಕೊಲ್ಲು: he was removed by poison ವಿಷಹಾಕಿ ಅವನ ಜೀವತೆಗೆದರು.
  7. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಭೂತಕೃದಂತದಲ್ಲಿ) (ಹಿಂದೆ ಬಡಿಸಿದ ಭಕ್ಷ್ಯ ಯಾ ಭೋಜ್ಯಕ್ಕೆ) ಬದಲು ಬರು, ಬಡಿಸಲ್ಪಡು: boiled fish removed by mutton ಬೇಯಿಸಿದ ಮೀನಿಗೆ ಬದಲು ಕುರಿಮಾಂಸ ಬಡಿಸಿದರು.
ಅಕರ್ಮಕ ಕ್ರಿಯಾಪದ
  1. ಮನೆ ಯಾ ನಿವಾಸ ಬದಲಾಯಿಸು: he removed from his present residence ಇದ್ದ ಮನೆಯಿಂದ ಅವನು (ಬೇರೆ ಮನೆಗೆ) ಬದಲಾಯಿಸಿದ.
  2. (ಮುಖ್ಯವಾಗಿ ಭೂತಕೃದಂತದಲ್ಲಿ) (ಒಂದು ಸ್ಥಳದಿಂದ) ದೂರವಾಗಿರು: the cottage is far removed from the town ಆ ಕುಟೀರವು ಊರಿನಿಂದ ತೀರ ದೂರದಲ್ಲಿದೆ.
  3. (ಭೂತಕೃದಂತದಲ್ಲಿ) (ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ, ಸೋದರತ್ತೆ, ಸೋದರಮಾವ–ಇವರ ಗಂಡು ಯಾ ಹೆಣ್ಣುಮಕ್ಕಳ ವಿಷಯದಲ್ಲಿ) ಒಂದು, ಎರಡು, ಮುಂತಾಗಿ ತಲೆಬಿಟ್ಟ, ಆಚೆಯ: my cousin, once removed, twice removed, etc. ಒಂದು ತಲೆ ಬಿಟ್ಟು, ಎರಡು ತಲೆ ಬಿಟ್ಟು, ಇತ್ಯಾದಿ ನನ್ನ ಸೋದರ, ಸೋದರಿ, ದಾಯಾದಿ.