See also 2relief
1relief ರಿಲೀಹ್‍
ನಾಮವಾಚಕ
    1. (ನೋವು, ವ್ಯಥೆ, ಕಳವಳ ಮೊದಲಾದವುಗಳ) ಪರಿಹಾರ; ಶಮನ; ಹಗುರವಾಗುವಿಕೆ ಯಾ ಉಪಶಮನವಾಗುವಿಕೆ: relief from pain ನೋವಿನ ಉಪಶಮನ. famine relief ಕ್ಷಾಮಪರಿಹಾರ.
    2. (ಅಂಥ ಪರಿಹಾರದಿಂದ ಸಿಕ್ಕುವ) ನೆಮ್ಮದಿ; ಸಮಾಧಾನ: to unburden one’s heart is a great relief ಹೃದಯದ ಭಾರವನ್ನು ತೋಡಿಕೊಳ್ಳುವುದು ಒಂದು ಭಾರಿ ಸಮಾಧಾನ.
  1. (ಏಕತಾನತೆಯನ್ನು ಯಾ ಭಾವೋದ್ವೇಗದ ಬಿರುಸನ್ನು ತದ್ಬಿನ್ನವಾದ ದೃಶ್ಯ ಯಾ ರಸದಿಂದ ತೊಲಗಿಸುವ) ವೈವಿಧ್ಯ ಯಾ ರಂಜನೆ: a comic scene follows by way of relief (ಪ್ರೇಕ್ಷಕರ ಮನಸ್ಸನ್ನು) ಹಗುರಗೊಳಿಸುವ ಸಲುವಾಗಿ ಹಾಸ್ಯ ದೃಶ್ಯವೊಂದು ಬರಲಿದೆ.
  2. (ಮುಖ್ಯವಾಗಿ ಬ್ರಿಟನ್ನಿನಲ್ಲಿ ಹಿಂದೆ ದಾರಿದ್ರ್ಯ ಪರಿಹಾರ ಶಾಸನದಂತೆ ಸರ್ಕಾರವು ಒದಗಿಸುತ್ತಿದ್ದ) ಬಡಬಗ್ಗರ ಸಹಾಯ: recipients of public relief ಸರ್ಕಾರದ ಸಹಾಯವನ್ನು ಪಡೆಯುವವರು.
  3. ವಿಶೇಷ ಸಂಕಟಕ್ಕೆ, ಅಪಾಯಕ್ಕೆ ಗುರಿಯಾದವರಿಗೆ ಮಾಡುವ (ಮುಖ್ಯವಾಗಿ ಧನ) ಸಹಾಯ: earthquake relief fund ಭೂಕಂಪ ಪರಿಹಾರನಿಧಿ.
  4. (ಸೈನ್ಯ)
    1. (ದಾಳಿ ಯಾ ಮುತ್ತಿಗೆಗೆ ಸಿಕ್ಕಿದ ಸೇನೆಗೆ) ಹೊಸ ಸೈನಿಕ ಯಾ ಶಸ್ತ್ರಾಸ್ತ್ರಗಳ ಯಾ ಆಹಾರಸಾಮಾಗ್ರಿಗಳ ಸರಬರಾಜು.
    2. (ಮುತ್ತಿಗೆಗೆ ಗುರಿಯಾಗಿರುವ ನಗರ, ಕೋಟೆ ಮೊದಲಾದವುಗಳ) ಬಿಡುಗಡೆ; ಮುತ್ತಿಗೆ ತೊಲಗಿಸುವುದು.
    1. (ಸರದಿ ಮುಗಿಸಿದ ಉದ್ಯೋಗಿಗೆ ಬಿಡುವನ್ನು ಕೊಡಲು) ಹೊಸ ಸರದಿಯವನನ್ನು, ಬದಲಿಯನ್ನು, ನೇಮಿಸುವುದು.
    2. ಈ ರೀತಿ ಬದಲಿಯಾಗಿ ನಿಯೋಜಿಸಿದ ವ್ಯಕ್ತಿ ಯಾ ವ್ಯಕ್ತಿಗಳು; ಬದಲಿವ್ಯಕ್ತಿ(ಗಳು).
    1. ಕಷ್ಟ ಯಾ ಅನ್ಯಾಯದ ಪರಿಹಾರ.
    2. (ಅಂಥ ಪರಿಹಾರದಿಂದ ಸಿಕ್ಕುವ) ನೆಮ್ಮದಿ; ಸಮಾಧಾನ.
  5. (ಸಾಮಾನ್ಯವಾಗಿ ವಿಶೇಷಣವಾಗಿ) ಹೆಚ್ಚುವರಿ ಸೇವೆ; ಅಧಿಕ ಸೇವೆ; ಯಾವುದೇ ಸೇವೆಯಲ್ಲಿ ಇನ್ನೊಂದಕ್ಕೆ ಪೂರಕವಾಗುವಂಥದು, ಮುಖ್ಯವಾಗಿ ಒತ್ತಡದ ಜನಸಂಮರ್ದದ ಸಮಯಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚುವರಿಯಾಗಿ ವಾಹನ ಓಡಿಸುವುದು.
  6. (ನ್ಯಾಯಶಾಸ್ತ್ರ) ತೊಂದರೆ ಯಾ ಕುಂದುಕೊರತೆಗಳ ಪರಿಹಾರ.
See also 1relief
2relief ರಿಲೀಹ್‍
ನಾಮವಾಚಕ
  1. (ಮೂಲ ವಸ್ತುವಿನ ಆಕಾರ, ಗಾತ್ರಗಳನ್ನು ತೋರಿಸಲು ಅದರ ಉಬ್ಬುತಗ್ಗುಗಳು ಎದ್ದು ಕಾಣುವಂತೆ ಸಮತಲವನ್ನು ಕೊರೆದು ಯಾ ಸಮತಲದ ಮೇಲೆ ಅಚ್ಚೊತ್ತಿ ಯಾ ಸಮತಲವನ್ನು ಉಬ್ಬಿಸಿ ಮಾಡುವ) ಉಬ್ಬು ಚಿತ್ರಣ: high relief ಹೆಚ್ಚುಬ್ಬು ಚಿತ್ರಣ. low relief ತಗ್ಗುಬ್ಬು ಚಿತ್ರಣ ಪದ್ಧತಿ.
  2. ಉಬ್ಬು ಚಿತ್ರ ಯಾ ಉಬ್ಬು ಶಿಲ್ಪ.
  3. (ರೂಪಕವಾಗಿ) ಸ್ಫುಟತೆ; ಎದ್ದು ಕಾಣುವಿಕೆ; ರೂಪರೇಖೆಯ ಸ್ಪಷ್ಟತೆ: stands out in relief (ಹಿನ್ನೆಲೆಗೆ ಭಿನ್ನವಾಗಿ) ಎದ್ದುಕಾಣುತ್ತದೆ. brings out the facts in full relief ಸತ್ಯಾಂಶಗಳನ್ನು ಅತ್ಯಂತ ಸ್ಫುಟವಾಗಿ ಎತ್ತಿ ತೋರಿಸುತ್ತದೆ.