See also 2relief
1relief ರಿಲೀಹ್‍
ನಾಮವಾಚಕ
    1. (ನೋವು, ವ್ಯಥೆ, ಕಳವಳ ಮೊದಲಾದವುಗಳ) ಪರಿಹಾರ; ಶಮನ; ಹಗುರವಾಗುವಿಕೆ ಯಾ ಉಪಶಮನವಾಗುವಿಕೆ: relief from pain ನೋವಿನ ಉಪಶಮನ. famine relief ಕ್ಷಾಮಪರಿಹಾರ.
    2. (ಅಂಥ ಪರಿಹಾರದಿಂದ ಸಿಕ್ಕುವ) ನೆಮ್ಮದಿ; ಸಮಾಧಾನ: to unburden one’s heart is a great relief ಹೃದಯದ ಭಾರವನ್ನು ತೋಡಿಕೊಳ್ಳುವುದು ಒಂದು ಭಾರಿ ಸಮಾಧಾನ.
  1. (ಏಕತಾನತೆಯನ್ನು ಯಾ ಭಾವೋದ್ವೇಗದ ಬಿರುಸನ್ನು ತದ್ಬಿನ್ನವಾದ ದೃಶ್ಯ ಯಾ ರಸದಿಂದ ತೊಲಗಿಸುವ) ವೈವಿಧ್ಯ ಯಾ ರಂಜನೆ: a comic scene follows by way of relief (ಪ್ರೇಕ್ಷಕರ ಮನಸ್ಸನ್ನು) ಹಗುರಗೊಳಿಸುವ ಸಲುವಾಗಿ ಹಾಸ್ಯ ದೃಶ್ಯವೊಂದು ಬರಲಿದೆ.
  2. (ಮುಖ್ಯವಾಗಿ ಬ್ರಿಟನ್ನಿನಲ್ಲಿ ಹಿಂದೆ ದಾರಿದ್ರ್ಯ ಪರಿಹಾರ ಶಾಸನದಂತೆ ಸರ್ಕಾರವು ಒದಗಿಸುತ್ತಿದ್ದ) ಬಡಬಗ್ಗರ ಸಹಾಯ: recipients of public relief ಸರ್ಕಾರದ ಸಹಾಯವನ್ನು ಪಡೆಯುವವರು.
  3. ವಿಶೇಷ ಸಂಕಟಕ್ಕೆ, ಅಪಾಯಕ್ಕೆ ಗುರಿಯಾದವರಿಗೆ ಮಾಡುವ (ಮುಖ್ಯವಾಗಿ ಧನ) ಸಹಾಯ: earthquake relief fund ಭೂಕಂಪ ಪರಿಹಾರನಿಧಿ.
  4. (ಸೈನ್ಯ)
    1. (ದಾಳಿ ಯಾ ಮುತ್ತಿಗೆಗೆ ಸಿಕ್ಕಿದ ಸೇನೆಗೆ) ಹೊಸ ಸೈನಿಕ ಯಾ ಶಸ್ತ್ರಾಸ್ತ್ರಗಳ ಯಾ ಆಹಾರಸಾಮಾಗ್ರಿಗಳ ಸರಬರಾಜು.
    2. (ಮುತ್ತಿಗೆಗೆ ಗುರಿಯಾಗಿರುವ ನಗರ, ಕೋಟೆ ಮೊದಲಾದವುಗಳ) ಬಿಡುಗಡೆ; ಮುತ್ತಿಗೆ ತೊಲಗಿಸುವುದು.
    1. (ಸರದಿ ಮುಗಿಸಿದ ಉದ್ಯೋಗಿಗೆ ಬಿಡುವನ್ನು ಕೊಡಲು) ಹೊಸ ಸರದಿಯವನನ್ನು, ಬದಲಿಯನ್ನು, ನೇಮಿಸುವುದು.
    2. ಈ ರೀತಿ ಬದಲಿಯಾಗಿ ನಿಯೋಜಿಸಿದ ವ್ಯಕ್ತಿ ಯಾ ವ್ಯಕ್ತಿಗಳು; ಬದಲಿವ್ಯಕ್ತಿ(ಗಳು).
    1. ಕಷ್ಟ ಯಾ ಅನ್ಯಾಯದ ಪರಿಹಾರ.
    2. (ಅಂಥ ಪರಿಹಾರದಿಂದ ಸಿಕ್ಕುವ) ನೆಮ್ಮದಿ; ಸಮಾಧಾನ.
  5. (ಸಾಮಾನ್ಯವಾಗಿ ವಿಶೇಷಣವಾಗಿ) ಹೆಚ್ಚುವರಿ ಸೇವೆ; ಅಧಿಕ ಸೇವೆ; ಯಾವುದೇ ಸೇವೆಯಲ್ಲಿ ಇನ್ನೊಂದಕ್ಕೆ ಪೂರಕವಾಗುವಂಥದು, ಮುಖ್ಯವಾಗಿ ಒತ್ತಡದ ಜನಸಂಮರ್ದದ ಸಮಯಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚುವರಿಯಾಗಿ ವಾಹನ ಓಡಿಸುವುದು.
  6. (ನ್ಯಾಯಶಾಸ್ತ್ರ) ತೊಂದರೆ ಯಾ ಕುಂದುಕೊರತೆಗಳ ಪರಿಹಾರ.