See also 2reign
1reign ರೇನ್‍
ನಾಮವಾಚಕ
  1. ಆಳ್ವಿಕೆ; ಆಳಿಕೆ; ಆಧಿಪತ್ಯ; ರಾಜ್ಯಭಾರ(ದ ಕಾಲ): the reign of Queen Victoria ವಿಕ್ಟೋರಿಯ ರಾಣಿಯ ರಾಜ್ಯಭಾರ.
  2. (ವಿರಳ ಪ್ರಯೋಗ) ಕ್ಷೇತ್ರ; ಲೋಕ.
  3. ರಾಜ್ಯಭಾರ; ಆಳ್ವಿಕೆ ಅವಧಿ: in the reign of John ಜಾನ್‍ ದೊರೆಯ ಆಳ್ವಿಕೆಯಲ್ಲಿ, ರಾಜ್ಯದಲ್ಲಿ.
See also 1reign
2reign ರೇನ್‍
ಅಕರ್ಮಕ ಕ್ರಿಯಾಪದ
  1. ರಾಜಪದವಿಯಲ್ಲಿರು; ರಾಜ ಯಾ ರಾಣಿಯಾಗಿರು (ರೂಪಕವಾಗಿ ಸಹ): a king who desired to rule as well as reign ರಾಜಪದವಿಯಲ್ಲಿರುವುದಷ್ಟೇ ಅಲ್ಲದೆ ಆಳಬೇಕೆಂದೂ ಬಯಸಿದ ರಾಜ; ಪದವಿಯಲ್ಲದೆ ರಾಜನ ಅಧಿಕಾರವನ್ನೂ ಬಯಸಿದ ರಾಜ. (ರೂಪಕವಾಗಿ) reigning beauty ಸೌಂದರ್ಯರಾಣಿ; ಸುಂದರಿಯರಲ್ಲೆಲ್ಲ ಪರಮ ಸುಂದರಿ.
  2. ಆಳುವಂತಿರು; ತಾನೇ ತಾನಾಗಿರು; (ಎಲ್ಲೆಲ್ಲೂ) ವ್ಯಾಪಿಸಿರು; (ಎಲ್ಲವನ್ನೂ) ಸ್ವಾಧೀನದಲ್ಲಿಟ್ಟುಕೊಂಡಿರು: silence reigned supreme over the area ಆ ಪ್ರದೇಶದಲ್ಲೆಲ್ಲ ಮೌನವು ತಾನೇತಾನಾಗಿತ್ತು. confusion reigns ಗೊಂದಲ ವ್ಯಾಪಿಸಿದೆ.