See also 2regent
1regent ರೀಜಂಟ್‍
ನಾಮವಾಚಕ
  1. (ವಿರಳ ಪ್ರಯೋಗ) ಶಾಸಕ ಯಾ ನಿಯಂತ್ರಕ; ಆಳುವ ಪ್ರಭು ಯಾ ನಿಯಂತ್ರಕ ತತ್ತ್ವ.
  2. (ಪ್ರಾಪ್ತವಯಸ್ಕನಲ್ಲದ ರಾಜಕುಮಾರನ ಬದಲು ಯಾ ರಾಜನ ಗೈರುಹಾಜರಿಯಲ್ಲಿ ಯಾ ಅಶಕ್ತ ಸ್ಥಿತಿಯಲ್ಲಿ ರಾಜ್ಯವಾಳುವ) ರಾಜಪ್ರತಿನಿಧಿ ಯಾ ರಾಜ ಪ್ರತಿನಿಧಿ ಮಂಡಲಿ.
  3. ರೀಜೆಂಟ್‍:
    1. (ಬ್ರಿಟಿಷ್‍ ಪ್ರಯೋಗ) (ಆಕ್ಸ್‍ಹರ್ಡ, ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳಲ್ಲಿ) ಈ ವಿಶ್ವವಿದ್ಯಾನಿಲಯಗಳಿಗೆ ಸೇರಿದ ಶಾಲಾ ಕಾಲೇಜುಗಳಲ್ಲಿ ಚರ್ಚೆಗಳನ್ನು ನಡೆಸುವ, ಮಾಸ್ಟರ್‍ ಆಹ್‍ಆರ್ಟ್ಸ್‍ ಪದವಿಯುಳ್ಳ ಅಧ್ಯಕ್ಷ.
    2. (ಅಮೆರಿಕನ್‍ ಪ್ರಯೋಗ) ಅಮೆರಿಕದ ಸಂಸ್ಥಾನಗಳಲ್ಲಿ ಯಾವುದೇ ಸಂಸ್ಥಾನಕ್ಕೆ ಸೇರಿದ ವಿಶ್ವವಿದ್ಯಾನಿಲಯವೊಂದರ ಆಡಳಿತ ಮಂಡಲಿಯ ಸದಸ್ಯ.
See also 1regent
2regent ರೀಜಂಟ್‍
ಗುಣವಾಚಕ

(ವಿಶೇಷ್ಯ ನಾಮಪದದ ತರುವಾಯ ಬಳಕೆ) ರಾಜಪ್ರತಿನಿಧಿಯಾಗಿ ವರ್ತಿಸುವ; Queen Regent ರಾಜಪ್ರತಿನಿಧಿಯಾದ (ಹಿರಿಯ) ರಾಣಿ; ರಾಜಮಾತೆ.