See also 2regent
1regent ರೀಜಂಟ್‍
ನಾಮವಾಚಕ
  1. (ವಿರಳ ಪ್ರಯೋಗ) ಶಾಸಕ ಯಾ ನಿಯಂತ್ರಕ; ಆಳುವ ಪ್ರಭು ಯಾ ನಿಯಂತ್ರಕ ತತ್ತ್ವ.
  2. (ಪ್ರಾಪ್ತವಯಸ್ಕನಲ್ಲದ ರಾಜಕುಮಾರನ ಬದಲು ಯಾ ರಾಜನ ಗೈರುಹಾಜರಿಯಲ್ಲಿ ಯಾ ಅಶಕ್ತ ಸ್ಥಿತಿಯಲ್ಲಿ ರಾಜ್ಯವಾಳುವ) ರಾಜಪ್ರತಿನಿಧಿ ಯಾ ರಾಜ ಪ್ರತಿನಿಧಿ ಮಂಡಲಿ.
  3. ರೀಜೆಂಟ್‍:
    1. (ಬ್ರಿಟಿಷ್‍ ಪ್ರಯೋಗ) (ಆಕ್ಸ್‍ಹರ್ಡ, ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳಲ್ಲಿ) ಈ ವಿಶ್ವವಿದ್ಯಾನಿಲಯಗಳಿಗೆ ಸೇರಿದ ಶಾಲಾ ಕಾಲೇಜುಗಳಲ್ಲಿ ಚರ್ಚೆಗಳನ್ನು ನಡೆಸುವ, ಮಾಸ್ಟರ್‍ ಆಹ್‍ಆರ್ಟ್ಸ್‍ ಪದವಿಯುಳ್ಳ ಅಧ್ಯಕ್ಷ.
    2. (ಅಮೆರಿಕನ್‍ ಪ್ರಯೋಗ) ಅಮೆರಿಕದ ಸಂಸ್ಥಾನಗಳಲ್ಲಿ ಯಾವುದೇ ಸಂಸ್ಥಾನಕ್ಕೆ ಸೇರಿದ ವಿಶ್ವವಿದ್ಯಾನಿಲಯವೊಂದರ ಆಡಳಿತ ಮಂಡಲಿಯ ಸದಸ್ಯ.