(ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಷಯದಲ್ಲಿ) ಪುನರುಜ್ಜೀವನಗೊಳಿಸು; ಹೊಸಜೀವ, ಶಕ್ತಿ, ಆಧ್ಯಾತ್ಮಿಕತೆ–ತರು, ತುಂಬು.
ಪುನಃ ಹುಟ್ಟಿಸು, ಉಂಟುಮಾಡು; ಪುನಃ ಅಸ್ತಿತ್ವಕ್ಕೆ ತರು.
(ಆತ್ಮಾರ್ಥಕ) ತನ್ನನ್ನು ತಾನೇ ಸುಧಾರಿಸಿಕೊ, ಉನ್ನತಗೊಳಿಸಿಕೊ: he regenerated himself after repenting of his vices ತನ್ನ ದುರಾಚಾರಗಳಿಗಾಗಿ ಪಶ್ಚಾತ್ತಾಪ ಪಟ್ಟ ಮೇಲೆ ಅವನು ತನ್ನನ್ನು ಉನ್ನತಗೊಳಿಸಿಕೊಂಡ.
(ಜೀವವಿಜ್ಞಾನ) (ಕಳೆದುಹೋದ ಯಾ ಘಾಸಿಗೊಂಡ ಊತಕದ ವಿಷಯದಲ್ಲಿ) ಪುನಃ ಬೆಳೆಸು ಹುಟ್ಟಿಸು; ಮತ್ತೆ ಹುಟ್ಟುವಂತೆ, ಬೆಳೆಯುವಂತೆ ಮಾಡು.
(ರಸಾಯನವಿಜ್ಞಾನ) ಪುನರುತ್ಪಾದಿಸು; ರಾಸಾಯನಿಕ ಕ್ರಿಯೆಯಲ್ಲಿ ವ್ಯಯವಾದ ಪದಾರ್ಥವನ್ನು ಪುನಃ ಉತ್ಪಾದಿಸು.
ಅಕರ್ಮಕ ಕ್ರಿಯಾಪದ
ಮತ್ತೆ ಹುಟ್ಟು; ಮರುಹುಟ್ಟು ಪಡೆ.
(ತನ್ನನ್ನು) ಸುಧಾರಣೆ ಮಾಡಿಕೊ.
(ಜೀವವಿಜ್ಞಾನ) (ಕಳೆದುಹೋದ ಯಾ ಘಾಸಿಗೊಂಡ ಊತಕದ ವಿಷಯದಲ್ಲಿ) ಮತ್ತೆ–ಹುಟ್ಟು, ಬೆಳೆ.
(ರಸಾಯನವಿಜ್ಞಾನ) (ರಾಸಾಯನಿಕ ಕ್ರಿಯೆಯಲ್ಲಿ ವ್ಯಯವಾದ ಪದಾರ್ಥದ ವಿಷಯದಲ್ಲಿ) ಪುನರುತ್ಪತ್ತಿಯಾಗು.